Select Your Language

Notifications

webdunia
webdunia
webdunia
webdunia

ಬಾಳೆಹಣ್ಣಿನ ಸೌಂದರ್ಯದಾಯಕ ಪ್ರಯೋಜನಗಳನ್ನು ತಿಳಿದಿರುವಿರಾ?

ಬಾಳೆಹಣ್ಣಿನ ಸೌಂದರ್ಯದಾಯಕ ಪ್ರಯೋಜನಗಳನ್ನು ತಿಳಿದಿರುವಿರಾ?
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (15:41 IST)
ಬಾಳೆಹಣ್ಣಿನಲ್ಲಿ ಶಕ್ತಿಯಜೊತೆಗೆ, ನಾರಿನಂಶ, ಹಾಗೂ ಸುಕ್ರೋಸ್, ಫ್ರಕ್ಟೋಸ್ ಮ್ತತು ಗ್ಲೂಕೋಸ್ ಎಂಬ 3 ವಿಧದ ಪ್ರಾಕೃತಿಕ ಸಕ್ಕರೆಗಳಿವೆ. ಸಂಶೋಧನೆಗಳ ಪ್ರಕಾರ, 90 ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು, ಎರಡು ಬಾಳೆಹಣ್ಣುಗಳು ಸಾಕು. ಬಾಳೆಹಣ್ಣು ಅಧಿಕ ಪ್ರಮಾಣದ ಪೊಟಾಷಿಯಂ, ವಿಟಮಿನ್ ಸಿ, ಮ್ಯಾಗ್ನೇಷಿಯಂ, ವಿಟಮಿನ್ ಬಿ, ಅಯೋಡಿನ್, ಕಬ್ಬಿಣ,ಸೆಲೆನಿಯಂ ಅನ್ನು ಹೊಂದಿದೆ. ಇಂತಹ ಅತ್ಯಧಿಕ ಖನಿಜಾಂಶವನ್ನು ಹೊಂದಿರುವ ಬಾಳೆಹಣ್ಣು ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಸೌಂದರ್ಯಕ್ಕು ಉಪಯುಕ್ತವಾಗಿದೆ.
1. ನೈಸರ್ಗಿಕ ಮಾಯಿಶ್ಚರೈಸರ್
 
ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿದರುವ ಬಾಳೆಹಣ್ಣು ನಿಮ್ಮ ಚರ್ಮಕ್ಕೆ ಉತ್ತಮ ಮಾಯಿಶ್ಚರೈಸರ್ ಆಗಿರುತ್ತದೆ. ಅರ್ಧ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಅದನ್ನು ನಿಮ್ಮ ಮುಖದ ಮೇಲೆ ಮಾಸ್ಕ್‌ನಂತೆ ಬಳಸಿ. 10 ನಿಮಿಷಗಳ ನಂತರ ಸ್ವಚ್ಛವಾದ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.
 
2. ಮೊಡವೆಗಳನ್ನು ಕಡಿಮೆ ಮಾಡುತ್ತದೆ
 
ಬಾಳೆಹಣ್ಣಿನ ಸಿಪ್ಪೆಗಳು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿರುತ್ತವೆ. ಇದು ಮೊಡವೆಗಳು ಮತ್ತು ಮುಖದ ಕಲೆಗಳನ್ನು ಕಡಿಮೆ ಮಾಡಲು ಬಹಳ ಉಪಯುಕ್ತವಾಗಿದೆ. ಜೊತೆಗೆ ಬಾಳೆಹಣ್ಣಿನ ಸಿಪ್ಪೆಗಳಲ್ಲಿ ಅಧಿಕ ವಿಟಮಿನ್ ಅಂಶ ಇರುವುದರಿಂದ ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಚೆನ್ನಾಗಿ 5-10 ನಿಮಿಷ ಉಜ್ಜಿಕೊಳ್ಳಿ, ನಂತರ ಸ್ವಚ್ಛವಾದ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.
 
3. ಉಬ್ಬಿದ ಕಣ್ಣು / ಕಣ್ಣಿನ ಉರಿಯನ್ನು ಕಡಿಮೆ ಮಾಡುತ್ತದೆ
 
ಕಣ್ಣಿನ ಉರಿ ಮತ್ತು ಉಬ್ಬಿದ ಕಣ್ಣಿನ ಸಮಸ್ಯೆಯನ್ನು ಕಡಿಮೆ ಮಾಡಲು ಬಾಳೆಹಣ್ಣು ಬಹಳ ಉಪಯುಕ್ತವಾಗಿದೆ. ಅರ್ಧ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಅದನ್ನು ನಿಮ್ಮ ಕಣ್ಣಿನ ಮೇಲೆ ಮಾಸ್ಕ್‌ನಂತೆ ಬಳಸಿ. 10 ನಿಮಿಷಗಳ ನಂತರ ಸ್ವಚ್ಛವಾದ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.
 
4. ಸ್ಕ್ರಬ್
 
ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ನೀವು ಬಾಳೆಹಣ್ಣು ಮತ್ತು ಕಂದು ಸಕ್ಕರೆ / ಬ್ರೌನ್ ಶೂಗರ್ ಸೇರಿಸಿ ಅದನ್ನು ಸ್ಕ್ರಬ್‌ನಂತೆ ಬಳಸಬಹುದು. ಬಾಳೆಹಣ್ಣು ಮತ್ತು ಕಂದು ಸಕ್ಕರೆ / ಬ್ರೌನ್ ಶೂಗರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ಬಳಸಿ, ಇದು ಸತ್ತ ಚರ್ಮದ ಜೀವಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮುಖವನ್ನು ಕಲೆ ಇಲ್ಲದಂತೆ ಮಾಡುತ್ತದೆ.
 
5. ಹೇರ್ ಮಾಸ್ಕ್/ ಕೂದಲಿನ  ಮಾಸ್ಕ್
 
ನೀವು ಒಣ ಕೂದಲಿನ ಸಮಸ್ಯೆಯನ್ನು ಹೊಂದಿದ್ದರೆ, ಈ ಮಾಸ್ಕ್ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ. 2 ಬಾಳೆಹಣ್ಣನ್ನು ಮ್ಯಾಶ್ ಮಾಡಿ ಅದರಲ್ಲಿ 1 ಚಮಚ ಜೇನು ತುಪ್ಪ ಮಿಶ್ರಣ ಮಾಡಿ, ತಲೆಗೆ ಹಚ್ಚಿ 15-20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ತಲೆಗೆ ಹೊಡೆಯುವ ಅಭ್ಯಾಸವಿರುವ ತಂದೆ ತಾಯಿಗಳಿಗೇ ಎಚ್ಚರ.