Select Your Language

Notifications

webdunia
webdunia
webdunia
webdunia

ನವರಾತ್ರಿಯಂದು ದೇವಿಯನ್ನು ಈ ಹೂಗಳಿಂದ ಪೂಜಿಸಿ

ನವರಾತ್ರಿಯಂದು ದೇವಿಯನ್ನು ಈ ಹೂಗಳಿಂದ ಪೂಜಿಸಿ
ಬೆಂಗಳೂರು , ಶುಕ್ರವಾರ, 12 ಅಕ್ಟೋಬರ್ 2018 (11:03 IST)
ಬೆಂಗಳೂರು : ನವರಾತ್ರಿ ದಿನದಂದು ದೇವಿಗೆ ಪ್ರಿಯವಾದ ಪುಷ್ಪವನ್ನು ಸಮರ್ಪಿಸಿ ಪೂಜಿಸುವುದರಿಂದ  ಆಕೆಯ ಸಂಪೂರ್ಣ ಅನುಗ್ರಹ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಾದ್ರೆ ಆ ಹೂಗಳು ಯಾವುದೆಂಬುದು ಇಲ್ಲಿದೆ ನೋಡಿ.


ಸಂಪಿಗೆ, ದಾಸವಾಳ, ಮಲ್ಲಿಗೆ ಹಾಗೂ ಕೇದಗೆ ಇಂತಹ ಸುಗಂಧಬರಿತ ಹೂಗಳಿಂದ ದೇವಿಯನ್ನು ಪೂಜಿಸಬೇಕು. ಹೀಗೆ ಪೂಜಿಸುವುವಾಗ ಷಡೋಪಚಾರ ಪೂಜೆಯಿಂದ ಆಕೆಯನ್ನು ಪೂಜಿಸಬೇಕು. ಆಗ ದೇವಿ ಪ್ರಸನ್ನಳಾಗುತ್ತಾಳೆ. ಕರ್ಪೂರ, ತೆಂಗು, ಬಾಳೆಹಣ್ಣು, ಕಿತ್ತಳೆ, ದಾಳಿಂಬೆ ಮೊದಲಾದ ಹಣ್ಣುಗಳಿಂದ ಆಕೆಗೆ ನೈವೇದ್ಯ ಮಾಡಬೇಕು.


ಹೀಗೆ ಭಕ್ತಿ, ಶೃದ್ಧೆಯಿಂದ ಪೂಜಿಸುತ್ತಾ ಬಗೆಬಗೆಯ ಭಕ್ಷ್ಯಭೋಜನ, ಲೇಹ್ಯ, ಪಾನೀಯಗಳಿಂದ ನಿವೇದನೆಯನ್ನು ಸಮರ್ಪಿಸಬೇಕು. ಹೀಗೆ ಆಕೆಯನ್ನು ನವವಿಧದಲ್ಲಿ ಪೂಜಿಸುವುದರಿಂದ ಆಕೆಯ ಸಂಪೂರ್ಣ ಕೃಪೆ ನಮಗೆ ಲಭಿಸುತ್ತದೆ. ಹಾಗೆ ದೇವಿಯನ್ನು ದುರ್ಗಾ, ಸಪ್ತಶ್ರುತಿ, ಲಿಲಿತ ಸಹಸ್ರನಾಮಗಳಿಂದ ಪೂಜಿಸುವುದರಿಂದ ಸಿರಿಸಂಪತ್ತು ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಪೂಜೆ ವೇಳೆ ಈ ತಪ್ಪು ಮಾಡಿದರೆ ಆರ್ಥಿಕ ನಷ್ಟ ಖಂಡಿತ