Publish Date: Sun, 17 Dec 2017 (08:59 IST)
Updated Date: Sun, 17 Dec 2017 (09:03 IST)
ಬೆಂಗಳೂರು: ಅಂದದ ಮೋರೆ ಬೇಕೆಂದರೆ ಏನು ಮಾಡಬೇಕು ಎಂದು ಯೋಚಿಸುತ್ತೀದ್ದೀರಾ? ಅದಕ್ಕೊಂದು ಸಿಂಪಲ್ಲಾಗಿ ಮನೆಯಲ್ಲೇ ಮಾಡಬಹುದಾದ ಫೇಸ್ ಪ್ಯಾಕ್ ಹೇಳಿಕೊಡ್ತೇವೆ ನೋಡಿ.
ಅದಕ್ಕೆ ಬೇಕಾಗಿರೋದು ಬಾಳೆ ಹಣ್ಣು ಮತ್ತು ಹಾಲು. ಒಣ ಚರ್ಮದವರಾಗಿದ್ದರೆ ಈ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಒಣ ಚರ್ಮದವರು ಹಾಲು ಸೇರಿಸಿ ಹಚ್ಚಿಕೊಳ್ಳುವುದರಿಂದ ಜೀವ ಕಳೆ ಬರುತ್ತದೆ.
ಒಂದು ಬೌಲ್ ನಲ್ಲಿ ಬಾಳೆ ಹಣ್ಣು ತೆಗೆದುಕೊಂಡು ಕಿವುಚಿಕೊಳ್ಳಿ. ಇದಕ್ಕೆ ಒಂದು ಟೇಬಲ್ ಸ್ಪೂನ್ ಹಾಲು ಸೇರಿಸಿಕೊಂಡು ಮಿಕ್ಸ್ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಸುಮಾರು 20 ನಿಮಿಷ ಹಾಗೇ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಒಂದು ವೇಳೆ ನಿಮ್ಮದು ಆಯಿಲೀ ಸ್ಕಿನ್ ಆದರೆ ಹಾಲಿನ ಬದಲು ರೋಸ್ ವಾಟರ್ ಬಳಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ