Select Your Language

Notifications

webdunia
webdunia
webdunia
webdunia

ರಾಮಮಂದಿರ ಭೂಮಿ ಪೂಜೆ : ಪಟಾಕಿ ಹೊಡೆಯುವಂತಿಲ್ಲ

webdunia
ಮಂಗಳವಾರ, 4 ಆಗಸ್ಟ್ 2020 (21:37 IST)
ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ “ಭೂಮಿ ಪೂಜಾ”ಕಾರ್ಯಕ್ರಮ ನಡೆಯಲಿರುವ ಪ್ರಯುಕ್ತ ಪಟಾಕಿ ಹೊಡೆಯುವುದಕ್ಕೂ ನಿಷೇಧ ಹೇರಲಾಗಿದೆ.
 

ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಿಜಯಪುರ ಜಿಲ್ಲೆಯಾದ್ಯಂತ 5.8.2020 ರ ಬೆಳಿಗ್ಗೆ  6 ರಿಂದ 6.8.2020 ರ ಬೆಳಿಗ್ಗೆ 6 ರವರೆಗೆ ಪಟಾಕಿ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ “ಭೂಮಿ ಪೂಜಾ” ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದು, ಶ್ರೀರಾಮ ಭೂಮಿ ಅಯೋಧ್ಯೆ ವಿಚಾರವು ಅತಿ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಭೂಮಿ ಪೂಜೆ ಮಾಡುವ ದಿನ ವಿವಿಧ ಸಂಘಟನೆಗಳು ಸಿಹಿ ಹಂಚಿ ಸಂಭ್ರಮಾಚರಣೆ ಮಾಡುವ ಸಂಭವವಿರುತ್ತದೆ.

ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಿಜಯಪುರ ಜಿಲ್ಲೆಯಾದ್ಯಂತ ಪಟಾಕಿ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.Share this Story:

Follow Webdunia Hindi

ಮುಂದಿನ ಸುದ್ದಿ

ಅಧಿವೇಶನದಲ್ಲಿ ಕೊರೊನಾ ಭ್ರಷ್ಟಾಚಾರ ಚರ್ಚೆ : ಡಿ.ಕೆ.ಶಿವಕುಮಾರ್