Select Your Language

Notifications

webdunia
webdunia
webdunia
webdunia

ದಿನಕ್ಕೊಂದು ರಾಶಿ: ವೃಷಭ ರಾಶಿಯ ದಂಪತಿ ಜಗಳವಾಡುತ್ತಿದ್ದರೆ ಪರಿಹಾರವೇನು?

webdunia
ಬೆಂಗಳೂರು , ಸೋಮವಾರ, 31 ಡಿಸೆಂಬರ್ 2018 (09:12 IST)
ಬೆಂಗಳೂರು: ವಿವಾಹ ಜೀವನದ ಯಶಸ್ಸಿಗೆ ದಂಪತಿಯ ಜಾತಕ ಹೊಂದಾಣಿಕೆಯೂ ಕಾರಣವಾಗುತ್ತದೆ. ಮೊನ್ನೆ ಮೇಷ ರಾಶಿಯವರ ಕಲಹಕ್ಕೆ ಪರಿಹಾರ ಹೇಳಿದ್ದೆವು. ಇಂದು ವೃಷಭ ರಾಶಿಯವರಿಗೆ ಪರಿಹಾರವೇನೆಂದು ನೋಡೋಣ.


ವೃಷಭ ರಾಶಿ
ವೃಷಭ ರಾಶಿಯನ್ನು ಹೊಂದಿರುವ ಗಂಡ-ಹೆಂಡತಿ ಪರಸ್ಪರ ಜಗಳವಾಡುತ್ತಿದ್ದರೆ, ಕಲಹವಿದ್ದರೆ, ಅದಕ್ಕೆ ಮುಖ್ಯ ಕಾರಣ ಕುಜನ ವಕ್ರದೃಷ್ಟಿ. ಕುಜ ದೋಷ ಎನ್ನುವುದು ವೈವಾಹಿಕ ಜೀವನದ ಸಂತೋಷ-ದುಃಖ ನಿರ್ಧರಿಸುತ್ತದೆ ಎಂದು ಈಗಾಗಲೇ ಹಲವು ಬಾರಿ ತಿಳಿದುಕೊಂಡಿದ್ದೇವೆ. ಈ ರಾಶಿಯವರ ಮೇಲೆ ಮಂಗಳನ ಪ್ರಭಾವ ಹೆಚ್ಚಿರುತ್ತದೆ. ಹೀಗಾಗಿಯೇ ದಂಪತಿ ನಡುವೆ ಕಲಹಕ್ಕೆ ಕುಜ ಅಥವಾ ಮಂಗಳ ಕಾರಣನಾಗುತ್ತಾನೆ.

ಹೀಗಾಗಿ ಈ ರಾಶಿಯವರು ಗುರು ಗ್ರಹದ ಪ್ರಾರ್ಥನೆ ಮಾಡುವುದು ಉತ್ತಮ. ಅಲ್ಲದೆ, ಮಂಗಳವಾರದಂದು ಉಪವಾಸವಿದ್ದು, ಹಳದಿ ಧಾನ್ಯ,  ಬಟ್ಟೆ ಮತ್ತು ಹೂವು ಇತ್ಯಾದಿಗಳನ್ನು ದಾನ ಮಾಡುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?