Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 31 ಡಿಸೆಂಬರ್ 2018 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯ ಕೆಲಸಗಳ ಒತ್ತಡ ಜತೆಗೆ ವಿಘ್ನಗಳೂ ಕಂಡುಬರುತ್ತವೆ. ದೇಹಾಯಾಸವಾದೀತು. ಸಂಸಾರದಲ್ಲಿ ನೆಮ್ಮದಿಯಿರುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ವೃಷಭ: ಆದಾಯವಿದ್ದಷ್ಟೇ ಖರ್ಚುವೆಚ್ಚಗಳೂ ಇರುತ್ತವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಯಶಸ್ಸು. ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ, ಗೌರವ ಹೆಚ್ಚುತ್ತದೆ. ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾದೀತು. ಹಾಗಿದ್ದರೂ ನಿಮ್ಮ ಚತುರತೆಯಿಂದ ಅದನ್ನು ನಿಭಾಯಿಸುತ್ತೀರಿ.

ಕರ್ಕಟಕ: ಶತ್ರುಗಳು ಮಾಡಿದ ದ್ರೋಹಗಳನ್ನು ನೆನೆದು ಮನಸ್ಸಿಗೆ ಕಿರಿ ಕಿರಿ ಮಾಡಿಕೊಳ್ಳುವಿರಿ. ಇದರಿಂದ ಕುಟುಂಬದಲ್ಲೂ ನೆಮ್ಮದಿ ಕಳೆದುಕೊಳ‍್ಳುವಿರಿ. ದೇವರ ದರ್ಶನದಿಂದ ನೆಮ್ಮದಿ.

ಸಿಂಹ: ಬಂಧು ಮಿತ್ರರಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ಮನೋಕ್ಲೇಶ ಉಂಟಾಗಲಿದೆ. ಆದರೆ ಸಂಸಾರದಲ್ಲಿ ಸಂಗಾತಿಯಿಂದ ಸಮಾಧಾನ ಸಿಗಲಿದೆ. ಕುಲದೇವರನ್ನು ಪ್ರಾರ್ಥಿಸಿ.

ಕನ್ಯಾ: ಧನ, ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ. ಅಪವಾದಕ್ಕೆ ಗುರಿಯಾಗಬೇಕಾದೀತು. ಸಂಗಾತಿಯಿಂದ ಸುಖ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಂಸಾರದಲ್ಲಿ ಸಹಕಾರ ಸಿಕ್ಕಿ ನೆಮ್ಮದಿ ಸಿಗಲಿದೆ. ಸಾಮಾಜಿಕ ಕೆಲಸಗಳಿಂದ ಗೌರವ ಸಿಗಲಿದೆ. ವೈಯಕ್ತಿಕ ಖರ್ಚು ಹೆಚ್ಚುವುದು.

ವೃಶ್ಚಿಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗುವಿರಿ. ಅವರ ವಿಚಾರದಲ್ಲಿ ವಾದ ವಿವಾದ ನಡೆಸಬೇಕಾದೀತು. ವ್ಯವಹಾರದಲ್ಲಿ ಲಾಭ ಗಳಿಸಿದರೂ ಖರ್ಚು ವೆಚ್ಚಗಳೂ ಅಷ್ಟೇ ಇರಲಿವೆ.

ಧನು: ಎಷ್ಟೋ ದಿನದಿಂದ ಬಾಕಿ ಇದ್ದ ಕಾರ್ಯ ಪೂರ್ತಿಗೊಳಿಸುವಿರಿ. ವಾಹನ ಖರೀದಿ ಯೋಗವಿದೆ. ಆದರೆ ಸಂಚಾರದಲ್ಲಿ ಜಾಗ್ರತೆ ಅಗತ್ಯ. ವೃತ್ತಿ ರಂಗದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರಲಿದೆ. ಆದರೆ ಮುನ್ನಡೆಯನ್ನೂ ಕಾಣುವಿರಿ.

ಮಕರ:  ಕಾರ್ಯ ಕೆಲಸಗಳಿಗೆ ಕೊಂಚ ವಿಘ್ನಗಳು ಎದುರಾಗಬಹುದು. ವಿಘ್ನ ನಿವಾರಕ ವಿಘ್ನೇಶನ ಪ್ರಾರ್ಥನೆ ಮಾಡಿ. ಕುಟುಂಬದಲ್ಲೂ ಕೊಂಚ ಅಸಮಾಧಾನದ ವಾತಾವರಣವಿರುವುದು. ದೇವರ ಪ್ರಾರ್ಥನೆ ಮಾಡಿ.

ಕುಂಭ: ಮನಸ್ಸಿಗೆ ಕೊಂಚ ಅಸಮಾಧಾನಗಳಿರುವುದು. ಇನ್ನೊಬ್ಬರ ಜತೆ ವಾಗ್ವಾದಕ್ಕಿಳಿಯದೇ ಇರುವುದೇ ಉತ್ತಮ. ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ. ಅತಿಯಾದ ನಂಬಿಕೆ ಒಳ್ಳೆಯದಲ್ಲ.

ಮೀನ: ಎದುರಾಗುವ ಅವಕಾಶಗಳನ್ನು ಉದಾಸೀನ ಮಾಡದೇ ಸದುಪಯೋಗಪಡಿಸಿಕೊಳ್ಳಿ. ಆತಂಕದ ಕ್ಷಣಗಳು ಎದುರಾಗಲಿವೆ. ಅವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಳ್ಳೆಯ ಆರೋಗ್ಯ, ಯಶಸ್ಸಿಗಾಗಿ ತೆಂಗಿನಕಾಯಿಂದ ಹೀಗೆ ಮಾಡಿ