Select Your Language

Notifications

webdunia
webdunia
webdunia
webdunia

ನೀವು ಹುಟ್ಟಿದ ನಕ್ಷತ್ರದಿಂದ ನಿಮ್ಮ ಸ್ವಭಾವ ನಿರ್ಧಾರ!

ನೀವು ಹುಟ್ಟಿದ ನಕ್ಷತ್ರದಿಂದ ನಿಮ್ಮ ಸ್ವಭಾವ ನಿರ್ಧಾರ!
ಬೆಂಗಳೂರು , ಶನಿವಾರ, 9 ಡಿಸೆಂಬರ್ 2017 (16:04 IST)
ನಕ್ಷತ್ರಗಳೂ ನಿಮ್ಮ ಗುಣಗಳನ್ನು ತಿಳಿಸುತ್ತದೆ ಎಂದು ನಿಮಗೆ ಗೊತ್ತಾ?. ಹೌದು. ನೀವು ಹುಟ್ಟಿದ ನಕ್ಷತ್ರಗಳು ನಿಮ್ಮ ಕೆಲವು ಮೂಲ ಸ್ವಭಾವಗಳನ್ನು ಸೂಚಿಸುತ್ತವೆ. ನೀವು ಹುಟ್ಟಿದ ನಕ್ಷತ್ರದ ಮೇಲೆ ನಿಮ್ಮ ಸ್ವಭಾವ ಹೊಂದಿಕೊಂಡಿರುತ್ತದೆ ಎಂದೂ ಹೇಳುತ್ತದೆ ಜ್ಯೋತಿಷ್ಯ ವಿಜ್ಞಾನ.
1. ಅಶ್ವಿನಿ- ಬೌದ್ಧಿಕ ಪ್ರಖರತೆ, ಸಂಚಾಲನ ಶಕ್ತಿ, ಚಂಚಲತೆ ಹಾಗೂ ಚಪಲತೆ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು.
 
2. ಭರಣಿ- ಸ್ವಾರ್ಥಿ, ಸ್ವಕೇಂದ್ರಿತ ಮನಸ್ಥಿತಿ, ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಮರ್ಥರಾಗಿರುವುದು ಈ ನಕ್ಷತ್ರ ಹೊಂದಿರುವವರ ವಿಶೇಷತೆ.
 
3. ಕೃತ್ತಿಕಾ- ಈ ನಕ್ಷತ್ರದಲ್ಲಿ ಹುಟ್ಟಿದವರು ಅತಿ ಸಾಹಸಿ ಮನೋಭಾವ, ಆಕ್ರಮಣಶೀಲತೆ, ಸ್ವಕೇಂದ್ರಿತ, ಅಹಂಕಾರಿಗಳು ಆಗಿರುತ್ತಾರೆ. ಇವರಿಗೆ ಶಸ್ತ್ರಾಸ್ತ್ರ, ಅಗ್ನಿ ಹಾಗೂ ವಾಹನ ಭಯ ಹೆಚ್ಚು.
 
4. ರೋಹಿಣಿ- ಪ್ರಸನ್ನ ಭಾವ, ಕಲೆಯ ಮೇಲೆ ಅತೀವ ಆಸಕ್ತಿ, ಮನಸ್ಸು ಯಾವಾಗಲೂ ಪ್ರಫುಲ್ಲವಾಗಿ ಸ್ವಚ್ಛವಾಗಿರುವ ಮನೋಭಾವ, ಹಾಗೂ ಅತ್ಯುಚ್ಛ ಅಭಿರುಚಿಗಳು ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇರುತ್ತದೆ.
 
5. ಮೃಗಶಿರಾ- ಈ ನಕ್ಷತ್ರದಲ್ಲಿ ಜನಿಸಿದವರು ಅತಿ ಬುದ್ಧಿವಂತಿಗೆ ಹಾಗೂ ಅತಿ ಭೋಗಪ್ರಿಯರು ಆಗಿರುತ್ತಾರೆ. ಬುದ್ಧಿ ಹಾಗೂ ಭೋಗ ಸಮಪ್ರಮಾಣದಲ್ಲೇ ಇದ್ದರೆ ಚಿಂತೆಯಿಲ್ಲ. ಆದರೆ ಬುದ್ಧಿ ಹೆಚ್ಚಾದರೆ ಇವರ ಉಪಯೋಗಕ್ಕೆ ಬರುವುದಿಲ್ಲ.
 
6. ಆರ್ದ್ರಾ- ಸಂಶಯ ಸ್ವಭಾವ, ಯಾವಾಗಲೂ ದ್ವಂದ್ವ ಮನೋಸ್ಥಿತಿ ಈ ರಾಶಿಯಲ್ಲಿ ಹುಟ್ಟಿದವರದ್ದು.
 
7. ಪುನರ್ವಸು- ಆದರ್ಶವಾದಿ, ಆಧ್ಯಾತ್ಮದಲ್ಲಿ ಅತೀವ ಆಸಕ್ತಿ ಹೊಂದಿರುವ ಈ ನಕ್ಷತ್ರದಲ್ಲಿ ಜನಿಸಿದವರು ಎಲ್ಲರ ಸಹಯೋಗದಲ್ಲಿ ಶಾಂತ ಮನೋಸ್ಥಿತಿಯನ್ನು ಹೊಂದಿರುತ್ತಾರೆ.
 
8. ಆಶ್ಲೇಷಾ- ಜಿದ್ದಿನ ಸ್ವಭಾವ, ಹಟ ಸಾಧಿಸುವ ವ್ಯಕ್ತಿತ್ವ ಇವರದ್ದು. ವಿಶ್ವಾಸ ಎಂಬುದೇ ಇವರಿಗೆ ದೂರದ ಮಾತು. ಹಾಗಾಗಿ ಇವರು ಸುಮ್ಮನೆ ತಮಗೆ ತಾವೇ ತೊಂದರೆಯನ್ನು ಆಹ್ವಾನಿಸುತ್ತಾರೆ.
 
9. ಮಘಾ- ಸ್ವಾಭಿಮಾನಿ, ಸ್ವಾವಲಂಬಿ, ಮಹತ್ವಾಕಾಂಕ್ಷಿ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿರುವವರು ಇವರು.
 
10. ಪೂರ್ವ- ಶ್ರದ್ಧೆ, ಲಲಿತಕಲೆಗಳಲ್ಲಿ ಆಸಕ್ತಿ, ರಸಿಕತನ ಹಾಗೂ ಶೋಕಿತನ ಇವರಿಗಿರುತ್ತದೆ.
 
11. ಉತ್ತರಾ- ಸಮತೋಲನ ಮನೋಭಾವ ಇವರದ್ದು. ವ್ಯವಹಾರಗಳಲ್ಲಿ ಚತುರರಿರುವ ಇವರು ಅತ್ಯಂತ ಪರಿಶ್ರಮಿಗಳು.
 
12. ಹಸ್ತಾ- ಕಲ್ಪನಾಶೀಲ, ಸಂವೇದನಾಶೀಲ, ಸುಖೀ ಹಾಗೂ ಸಮಾಧಾನಚಿತ್ತವಿರುವ ಇವರು ಸದಾ ಒಳ್ಳೆಯ ಹಾದಿಯಲ್ಲೇ ನಡೆಯುತ್ತಾರೆ.
 
13. ಚಿತ್ರಾ- ಬರೆಯುವುದು, ಓದುವುದರಲ್ಲಿ ಆಸಕ್ತಿ, ಶೋಕಿತನ ಇರ ಗುಣ. ಅಲ್ಲದೆ, ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಪುರುಷರೆಡೆಗೆ ಅಥವಾ ಪುರುಷರು ಮಹಿಳೆಯರೆಡೆಗೆ ಆಕರ್ಷಿತರಾಗುವುದು ಬಲು ಬೇಗ.
 
14. ಸ್ವಾತಿ- ಸಮತೋಲನ ಪ್ರಕೃತಿ, ಮನಸ್ಸಿನ ನಿಯಂತ್ರಣ, ಸಮಾಧಾನ ಚಿತ್ತ, ದುಃಖವ್ನು ತಾಳಿಕೊಳ್ಳುವ ಶಕ್ತಿ ಇವರಿಗೆ ಹೆಚ್ಚಿರುತ್ತದೆ.
 
15. ವಿಶಾಖಾ- ಸ್ವಾರ್ಥಿ, ಜಿದ್ದಿನ ಸ್ವಭಾವ ಇವರಿಗೆ ಹೆಚ್ಚು. ಏನಾದರೊಂದು ನೆವ ಹೇಳಿ ಕೆಲಸ ತಪ್ಪಿಸಿಕೊಳ್ಳಲು ಇವರು ನಿಪುಣರು.
 
16. ಅನುರಾಧಾ- ಕುಟುಂಬದ ಮೇಲೆ ಅಪಾರ ಪ್ರೀತಿ ಹೊಂದಿರುವ ಇವರು ಒಳ್ಳೆಯ ನಡತೆಯೊಂದಿಗೆ ಸನ್ಮಾರ್ಗದಲ್ಲೇ ನಡೆಯುತ್ತಾರೆ. ಶೋಕಿತನ ಸ್ವಲ್ಪ ಹೆಚ್ಚಿರುವ ಇವರು, ಮಧುರವಾದ ಸ್ವರವನ್ನು ಹೊಂದಿರುತ್ತಾರೆ. ಜತೆಗೆ ಶೃಂಗಾರಪ್ರಿಯರೂ ಕೂಡಾ.
 
17. ಜೇಷ್ಠ- ನಿರ್ಮಲ ಸ್ವಭಾವ, ಎಲ್ಲವನ್ನೂ ಸಲೀಸಾಗಿ ಮನಸ್ಸಿಗೆ ತೆಗೆದುಕೊಳ್ಳುವ ಪ್ರವೃತ್ತಿ ಇವರಿಗಿದ್ದರೂ, ಶತ್ರುಗಳನ್ನು ಎಂದಿಗೂ ಮರೆಯಲಾರರು. ಹೇಗಾದರೂ ಮಾಡಿ ಸದ್ದಿಲ್ಲದೆಯಾದರೂ, ಇವರು ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುವ ಜಾಯಮಾನ ಹೊಂದಿರುತ್ತಾರೆ.
 
18. ಮೂಲ- ಪ್ರಾರಂಭಿಕ ಜೀವನ ಕಷ್ಟಕರವಾಗಿರುತ್ತದೆ. ಜತೆಗೆ ಖಾಸಗಿ ಜೀವನದಲ್ಲಿ ಇವರು ದುಃಖಿಗಳಾಗಿರುತ್ತಾರೆ. ಆದರೂ, ಇವರು ಕಲಾಪ್ರೇಮಿಗಳು. ಕಲಾ ಸಂಬಂಧೀ ಕೆಲಸಗಳಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಜತೆಗೆ ಇವರು ರಾಜಕಾರಣದಲ್ಲೂ ಚತುರರಾಗಿರುತ್ತಾರೆ.
 
19. ಪೂರ್ವಷಾಢ- ಶಾಂತ, ನಿಧಾನಗತಿಯ, ಹಾಗೂ ಸಮಾಧಾನಚಿತ್ತವಿರುವ ಇವರು ಶ್ರೀಮಂತಿಕೆ, ಐಶ್ವರ್ಯವನ್ನೇ ಬಯಸುತ್ತಾರೆ.
 
20. ಉತ್ತರಾಷಾಢಾ- ವಿನಯಶೀಲತ್ವ, ಬುದ್ಧಿವಂತಿಕೆ ಹಾಗೂ ಆಧ್ಮಾತ್ಮದಲ್ಲಿ ಅಪಾರ ಅಭಿರುಚಿ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು. ಇವರು ಎಲ್ಲರೊಂದಿಗೂ ಚೆನ್ನಾಗಿ ವ್ಯವಹರಿಸುತ್ತಾರೆ.
 
21. ಶ್ರವಣ- ಶ್ರದ್ಧೆ, ಪರೋಪಕಾರಿ ಗುಣ, ಕೃತಜ್ಞತೆ ಹೊಂದಿರುವ ಇವರು ಸನ್ಮಾರ್ಗಿಗಳಾಗಿರುತ್ತಾರೆ.
 
22. ಧನಿಷ್ಠಾ- ಅಹಂಕಾರಿಗಳು, ಕಟು ಮಾತಿನವರಾಗಿರುವ ಇವರಿಗೆ ಸ್ವಲ್ಪ ಸಂಯಮ ಕಡಿಮೆ.
 
23. ಶತಭಿಷಾ- ರಸಿಕತನ ಹೆಚ್ಚಿರುವ ಇವರು ಚಟ, ವ್ಯಸನಗಳಿಗೆ ಬಲಿಬೀಳುವುದು ಹೆಚ್ಚು. ಇವರು ಸಮಯಪಾಲನೆ ಮಾಡುವುದು ಕಡಿಮೆ.
 
24. ಪುಷ್ಯ- ಸನ್ಮಾರ್ಗಿಗಳಾಗಿರುವ ಇವರು ದಯೆ, ಬುದ್ಧಿವಂತಿಕೆ ಗುಣಗಳನ್ನು ರೂಢಿಸಿಕೊಂಡಿರುತ್ತಾರೆ. ಇವರು ದಾನಿಗಳು. ಜತೆಗೆ ಬಲುಬೇಗನೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.
 
25. ಪೂರ್ವಭಾದ್ರ- ಬುದ್ಧಿವಂತಿಕೆ, ಸಂಶೋಧನಾ ಪ್ರವೃತ್ತಿ, ಕುಶಲನೆ, ಹಾಗೂ ಕೆಲಸದಲ್ಲಿ ನಿಪುಣತನ ಇವರ ಗುಣಗಳು.
 
26. ಉತ್ತರಾಭಾದ್ರ- ಮೋಹಕ ವ್ಯಕ್ತಿತ್ವವನ್ನು ಹೊಂದಿರುವ ಇವರು, ಮಾತುಗಾರಿಕೆಯಲ್ಲಿ ಚತುರರು. ಸ್ವಲ್ಪ ಚಂಚಲತೆ ಹೆಚ್ಚಿರುವ ಇವರು ಇನ್ನೊಬ್ಬರನ್ನು ಬಲುಬೇಗನೆ ತಮ್ಮಿಂದ ಪ್ರಭಾವಿತರನ್ನಾಗಿ ಮಾಡುವ ಶಕ್ತಿ ಹೊಂದಿರುತ್ತಾರೆ.
 
27. ರೇವತಿ- ಸತ್ಯಸಂಧರಾಗಿರುವ ಇವರು, ವಿವೇಕಿಗಳೂ, ನಿರಪೇಕ್ಷಿಗಳೂ ಆಗಿರುತ್ತಾರೆ. ಇವರು ಸಮಾಜ ಕಲ್ಯಾಣದಲ್ಲಿ ಆಸಕ್ತರಾಗಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಗೆಯಿಂದ ಉಂಟಾಗುವುದು ಶುಭ, ಅಶುಭ