Publish Date: Tue, 22 Jan 2019 (08:57 IST)
Updated Date: Tue, 22 Jan 2019 (08:59 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಕುಂಭ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.
ಕುಂಭ ರಾಶಿಯವರು ಓದಿನಲ್ಲಿ ಹೆಚ್ಚು ಆಸಕ್ತಿಯುಳ್ಳವರು. ಅವರು ಸಂಪ್ರದಾಯಕ್ಕೆ ಹೆಚ್ಚು ಬೆಲೆ ಕೊಡಲ್ಲ. ಬುದ್ಧಿವಂತರಾಗಿರುತ್ತಾರೆ. ಹಾಗೆಯೇ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಹಾಗೆಯೇ ಪುರೋಗಾಮಿಗಳಾಗಿರುತ್ತಾರೆ.
ಇವರಿಗೆ ಕೆಲಸದಲ್ಲಿ ಕೇವಲ ಹಣ ಸಂಪಾದನೆ ಮಾತ್ರ ಮುಖ್ಯವಾಗಿರುವುದಿಲ್ಲ. ಕೌತುಕದ ವ್ಯಕ್ತಿಗಳಾಗಿದ್ದರಿಂದ ಈ ರಾಶಿಯವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಳ್ಳುವುದು ಸೂಕ್ತ.
ಹೀಗಾಗಿ ಈ ರಾಶಿಯವರಿಗೆ ಸ್ವಂತ ಉದ್ದಿಮೆ, ವ್ಯವಹಾರ ಹೇಳಿ ಮಾಡಿಸಿದ ಕೆಲಸ. ಈ ರಾಶಿಯವರಿಗೆ ಪ್ರತಿಷ್ಠೆ, ಆರ್ಥಿಕ ಲಾಭ ಮುಖ್ಯವಾಗುತ್ತದೆ. ಹೀಗಾಗಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವಂತಹ ಉದ್ಯೋಗಕ್ಕಿಂತ ಸ್ವ ಉದ್ಯೋಗವೇ ಇವರಿಗೆ ಸೂಕ್ತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ