Publish Date: Mon, 21 Jan 2019 (08:57 IST)
Updated Date: Mon, 21 Jan 2019 (08:58 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮಕರ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.
ಮಕರ ರಾಶಿಯವರು ಒಂದೇ ಕಂಪನಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕೊಟ್ಟ ಡೆಡ್ ಲೈನ್ ಗಳನ್ನಷ್ಟೇ ಮಾಡಿಕೊಂಡು ಕೂರುವವರಲ್ಲ. ಇವರು ಮಹತ್ವಾಕಾಂಕ್ಷಿಗಳು. ಇವರ ಸಾಧನೆಗೆ ಕೆಲವೊಮ್ಮೆ ಗಡಿಯೇ ಇರಲ್ಲ.
ಹೀಗಾಗಿ ಈ ರಾಶಿಯವರಿಗೆ ಸ್ವಂತ ಉದ್ದಿಮೆ, ವ್ಯವಹಾರ ಹೇಳಿ ಮಾಡಿಸಿದ ಕೆಲಸ. ಈ ರಾಶಿಯವರಿಗೆ ಪ್ರತಿಷ್ಠೆ, ಆರ್ಥಿಕ ಲಾಭ ಮುಖ್ಯವಾಗುತ್ತದೆ. ಹೀಗಾಗಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವಂತಹ ಉದ್ಯೋಗಕ್ಕಿಂತ ಸ್ವ ಉದ್ಯೋಗವೇ ಇವರಿಗೆ ಸೂಕ್ತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ