ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಮನೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಖರ್ಚು ವೆಚ್ಚಗಳು ಇತಿಮಿತಿಯಲ್ಲಿರಲಿ. ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುವಿರಿ.
ವೃಷಭ: ಕಾರ್ಯದೊತ್ತಡಗಳು ಹೆಚ್ಚಾಗಿ ದೇಹಾಯಾಸ ಮಾಡಿಕೊಳ‍್ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ. ಸಂಗಾತಿಯೊಂದಿಗೆ ಸರಸಮಯ ಕ್ಷಣ ಕಳೆಯುವಿರಿ.
ಮಿಥುನ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚಿಂತೆ ಕಾಡುವುದು. ಆದರೆ ಅವಗಣನೆ ಕೂಡಾ ಮನಸ್ಸಿಗೆ ಬೇಸರ ತರುವುದು. ಆದರೆ ತಾಳ್ಮೆಯಿಂದ ನಿಭಾಯಿಸಿದರೆ ಯಶಸ್ಸು. ಆರ್ಥಿಕವಾಗಿ ಇಂದು ಖರ್ಚು ವೆಚ್ಚಗಳು ಅಧಿಕವಾಗುವುದು. ಆದರೆ ಅಷ್ಟೇ ಧನ ಲಾಭವೂ ಆಗಲಿದೆ.
ಕರ್ಕಟಕ: ಬಂಧು ಮಿತ್ರರೊಂದಿಗೆ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವಿರಿ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕಳ್ಳತನವಾಗುವ ಅಪಾಯವಿದೆ. ಮನೆಯಿಂದ ಹೊರಹೋಗುವ ಮೊದಲು ಆಂಜನೇಯನನ್ನು ಸ್ಮರಣೆ ಮಾಡಿಕೊಂಡು ಹೋಗಿ.
ಸಿಂಹ: ದಾಯಾದಿಗಳ ಜತೆಗಿನ ಕಲಹ ತಲೆದೋರಿ ಕುಟುಂಬದಲ್ಲಿ ನೆಮ್ಮದಿಗೆ ಭಂಗ ಬರುವುದು. ಹಿರಿಯರ ಸಲಹೆ, ಸೂಚನೆ ಪಾಲಿಸುವುದು ಅಗತ್ಯ. ಕೋರ್ಟ್, ಕಚೇರಿ ವ್ಯವಹಾರಗಳನ್ನು ಸದ್ಯಕ್ಕೆ ಮಾಡದೇ ಇರುವುದೇ ಒಳ್ಳೆಯದು. ದೇವರ ಪ್ರಾರ್ಥನೆ ಅಗತ್ಯ.
ಕನ್ಯಾ: ಯಾರಿಗೋ ಆಗಬೇಕಾದ ತೊಂದರೆ ಅನವಶ್ಯವಾಗಿ ನಿಮಗೆ ಎದುರಾಗಿ ಕಿರಿ ಕಿರಿ ಅನುಭವಿಸುವಿರಿ. ಆದರೆ ತಾಳ್ಮೆಯಿರಲಿ. ವಾಚಾಳಿಗಳು, ಕಲಹಪ್ರಿಯರಿಂದ ದೂರವಿದ್ದರೆ ಉತ್ತಮ. ದಿನದಂತ್ಯಕ್ಕೆ ಶುಭ ಸುದ್ದಿ.
ತುಲಾ: ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಮನೆಯಲ್ಲಿ ಕೊಂಚ ವಿರೋಧ ವ್ಯಕ್ತವಾಗುವುದು. ಸಂತಾನ ಭಾಗ್ಯ ಬಯಸುತ್ತಿರುವ ದಂಪತಿಗಳಿಗೆ ಶುಭ ಸೂಚನೆಯಿದೆ. ಹೆಚ್ಚಿನ ಫಲಗಳಿಗೆ ಸುಬ್ರಹ್ಮಣ್ಯನ ಆರಾಧನೆ ಮಾಡಿ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭಸುದ್ದಿಯೊಂದು ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
ಧನು: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಮುಕ್ತಿ ಸಿಗಲಿದೆ. ಹೊಸ ಸಂಬಂಧಗಳು ಹುಡುಕಿಕೊಂಡು ಬರುವುದು. ಹೊಸ ಜನರ ಭೇಟಿ ಮಾಡುವಿರಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಮಕರ: ನೆಮ್ಮದಿಗೆ ಭಂಗ ತರುವಂತಹ ಘಟನೆಯೊಂದು ನಡೆಯಲಿದೆ. ಸಂಗಾತಿಯೊಂದಿಗೆ ಕಿರಿ ಕಿರಿ ಮಾಡಿಕೊಳ್ಳುತ್ತೀರಿ. ನಯವಂಚಕರಿಂದ ದೂರವಿರುವುದೇ ಒಳ್ಳೆಯದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಆದರೆ ದಿನದಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ.
ಕುಂಭ: ವಾಣಿಜ್ಯೋದ್ಯಮಿಗಳಿಗೆ ಇಂದು ಶುಭ ದಿನ. ನಿರೀಕ್ಷಿತ ಲಾಭ ಪಡೆದು ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆದರೆ ಉದ್ಯೋಗಾರ್ಥಿಗಳಿಗೆ ಇಂದೂ ಕಾರ್ಯದೊತ್ತಡವಿರಲಿದ್ದು, ದೇಹಾಯಾಸವಾದೀತು. ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ಮೀನ: ಮನೆಯಲ್ಲಿರುವ ಹಿರಿಯರ ಆರೋಗ್ಯ ಹದಗೆಡಲಿದೆ. ಹೊಸ ವೃತ್ತಿ ಮಾಡಲು ಹೊರಟಿದ್ದರೆ ಇದುವೇ ಸಕಾಲ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ಸಂಬಂಧಗಳು ಕೂಡಿಬರುವುದು. ಆದರೆ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.