Select Your Language

Notifications

webdunia
webdunia
webdunia
webdunia

ಈ ವಾರ ನಿಮ್ಮ ಜಾತಕದಲ್ಲಿ ಏನಿದೆ? ವಾರದ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ!

ಈ ವಾರ ನಿಮ್ಮ ಜಾತಕದಲ್ಲಿ ಏನಿದೆ? ವಾರದ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ!
ಬೆಂಗಳೂರು , ಸೋಮವಾರ, 10 ಡಿಸೆಂಬರ್ 2018 (09:24 IST)
ಬೆಂಗಳೂರು: ದಿನಾಂಕ 10 ಡಿಸೆಂಬರ್ ನಿಂದ 16 ನೇ ಡಿಸೆಂಬರ್ ವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ ಹೇಗಿದೆ ತಿಳಿಯೋಣ.


ಮೇಷ: ಈ ವಾರ ಸ್ನೇಹಿತರೊಂದಿಗೆ ಮತ್ತು ಕುಟುಂಬದ ಜನರೊಂದಿಗೆ ಹಣಕಾಸಿನ ಯಾವುದೇ ವ್ಯವಹಾರ ಮಾಡುವಾಗ ಉದಾಸೀನ ಮಾಡಬೇಡಿ. ವಾರದ ಮೊದಲ ಮೂರು ದಿನ ನಿಮ್ಮ ಬಾಳಲ್ಲಿ ಸುಖ ಶಾಂತಿ  ಹೆಚ್ಚಿನ ರೀತಿಯಲ್ಲಿ ದೊರೆಯಲಿದ್ದು ಇನ್ನು ಉಳಿದ ದಿನಗಳು ಸಮಾಧಾನಕರವಾಗಲಿದೆ. ವಾರದ ನಾಲ್ಕನೆ ದಿನ ಅಂದರೆ ಗುರುವಾರ ಧಾರ್ಮಿಕ ಕಾರ್ಯಕ್ರಮದದಲ್ಲಿ ಹೆಚ್ಚಿನ ರೀತಿಯಲ್ಲಿ ನಿಮ್ಮ ಶಕ್ತ್ಯಾನುಸಾರ ದಾನ ಧರ್ಮ ಮಾಡುವುದರಿಂದ ನಿಮಗೆ ಮುಂದೆ ಬರುವ ಎಲ್ಲ ಕಷ್ಟಗಳು ದೂರವಾಗುತ್ತದೆ. ಉದ್ಯೋಗ ಇಲ್ಲದ ಜನಕ್ಕೆ ಒಳ್ಳೆಯ ಉದ್ಯೋಗ ಲಭಿಸಲಿದೆ. ನೀವು ಕೂಡಿಟ್ಟ ಹಣದಿಂದ ನಿವೇಶನ ಅಥವಾ ಸೈಟು ಖರೀದಿ ಮಾಡುವ ಸಂಭವ ಇರುತ್ತದೆ. ವಾರದ ಏಳು ದಿನ ಆರೋಗ್ಯ ಉತ್ತಮವಾಗಿರುತ್ತದೆ.

ವೃಷಭ: ಕೋರ್ಟು ಕಚೇರಿ ವ್ಯಾಜ್ಯಗಳು ಕಟಕಟೆಯಲ್ಲಿ ನಡೆಯುತ್ತಿದ್ದರೆ ಅವುಗಳು ನಿಮ್ಮ ಪರವಾಗಲಿದೆ. ವಾರದ ಮೊದಲ ಎರಡು ದಿನ ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಂದರೂ ನಿರ್ಲ್ಯಕ್ಷಿಸಬೇಡಿ. ವಾರದ ಐದನೇ ದಿನ ನಿಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಸಿಗುತ್ತದೆ. ನಿಮ್ಮ ಬಾಳಸಂಗಾತಿಯೊಂದಿಗೆ ಹೆಚ್ಚಿನ ಸುಖದ ಕ್ಷಣಗಳನ್ನು ಕಳೆಯುವಿರಿ. ವಾರದ ಕೊನೆ ದಿನದಲ್ಲಿ ನೀವು ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ. ಆಕಸ್ಮಿಕ ಪ್ರಯಾಣ ಬರಲಿದ್ದು, ಹೆಚ್ಚಿನ ಜಾಗ್ರತೆ ಹೊಂದಿರಬೇಕು. ನಿಮ್ಮ ಶಕ್ತಿ ಅನುಸಾರ ಬಡವರಿಗೆ ಕೆಂಪು ಬಣ್ಣದ ವಸ್ತ್ರರ ದಾನ ಮಾಡಿ.

ಮಿಥುನ: ಕಳೆದ ಕೆಲವು ದಿನಗಳಿಂದ ನಿಮ್ಮ ಕುಟುಂಬದಲ್ಲಿ ಏನಾದರೂ ಕಲಹ ಅಥವಾ ನೆಮ್ಮದಿ ಸಿಕ್ಕಿಲ್ಲ ಅಂದರೆ ಅದೆಲ್ಲವೂ ತಿಳಿಯಾಗುವುದು. ಮನೆಯಲ್ಲಿ ಮಕ್ಕಳು ಇದ್ದರೆ ಅವರ ವಿದ್ಯಾಭ್ಯಾಸದ ಕಡೆಗೆ ನೀವು ಹೆಚ್ಚು ಚಿಂತೆ ಮಾಡುವಿರಿ. ಆದರೆ ಎಷ್ಟೇ ಚಿಂತೆ ಮಾಡಿದರೂ ಮಕ್ಕಳಿಗೆ ಅವರ ಓದಿನ ತಕ್ಕ ಹಾಗೆ ಪುರಸ್ಕಾರ ದೊರೆಯಲಿದೆ. ವಾರದ ಎರಡನೇ ದಿನದಿಂದ ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮಗೆ ಹೆಚ್ಚಿನ ಶುಭಪ್ರಾಪ್ತಿಯಾಗುತ್ತದೆ. ನೀವು ಯೋಜನೆ ಹಾಕಿಕೊಂಡಿರುವ ಹಲವು ವಿಷಯದಲ್ಲಿ ಲಾಭ ದೊರೆಯುವುದು. ವಾರದ ಕೊನೆ ದಿನ ಆರೋಗ್ಯ ಏರುಪೇರಾಗಬಹುದು. ಕುಲದೇವರ ದರ್ಶನ ಪಡೆದರೆ ಒಳಿತಾಗುವುದು.

ಕಟಕ: ಈಗಾಗಲೇ ಕಳೆದುಹೋದ ಎಷ್ಟೋ ಸಮಯಗಳನ್ನು ಪುನಃ ಚಿಂತಿಸಿ ಯಾವುದೇ ಲಾಭವಿಲ್ಲ. ನಿಮ್ಮ ಗ್ರಹಗತಿಗಳು ಈ ವಾರ ಒಂದಿಷ್ಟು ಶುಭ ಸೂಚನೆ ನೀಡುತ್ತಿದ್ದು, ಹಲವು ರೀತಿಯ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗುವುದು. ವಾರದ ಎರಡನೇ ದಿನ ದೂರ ಪ್ರಯಾಣ ಹೋಗುವ ಸಂಭವವಿದ್ದು, ಆರೋಗ್ಯ ಏರುಪೇರಾಗಬಹುದು. ನಿಮ್ಮ ತಂದೆ ತಾಯಿಯಿಂದ ನಿಮಗೆ ಹೆಚ್ಚಿನ ಸಲಹೆ ಸಿಗಲಿದ್ದು ಅವರ ಮಾತು ಪಾಲಿಸಿದರೆ ಶ್ರೇಯಸ್ಸು. ಆರ್ಥಿಕ ವಿಷಯದಲ್ಲಿ ಯಾವುದೇ ಅಷ್ಟಾಗಿ ಸಮಸ್ಯೆ ಇಲ್ಲದಿದ್ದರೂ ಶುಕ್ರವಾರ ಲಕ್ಷ್ಮೀ ದೇವಿಯ ದರ್ಶನ ಪಡೆದರೆ ಒಳ್ಳೆಯದು. ಮಂಗಳವಾರ ಹನುಮಂತ ದೇವರ ದರ್ಶನ ಪಡೆದು ತುಪ್ಪದ ದೀಪ ಹಚ್ಚಿ.

ಸಿಂಹ:ಸಾಲ ಮಾಡಿಕೊಂಡಿದ್ದರೆ ನಿಮಗೆ ಈ ವಾರ ನಿರಾಳ. ಏಕೆಂದರೆ ನಿಮ್ಮ ಆರ್ಥಿಕ ಸಮಸ್ಯೆ ಒಂದಿಷ್ಟು ಬಗೆಹರಿಯಲಿದ್ದು, ಧನ ಲಾಭದ ಸಾಧ್ಯತೆಯಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸಾಲ ಮರುಪಾವತಿ ಮಾಡಿ. ವಾರದ ನಾಲ್ಕನೆ ದಿನದಲ್ಲಿ ಆರೋಗ್ಯ ಸಮಸ್ಯೆ ಬರಬಹುದು. ಐದನೇ ದಿನದಿಂದ ಜೀವನ ಮಟ್ಟ ಸುಧಾರಿಸುತ್ತದೆ. ಪ್ರೀತಿ ಪ್ರೇಮ ಮಕ್ಕಳ ಜತೆಗಿನ ಸಂಬಂಧ ಹೆಚ್ಚಿ ನೆಮ್ಮದಿ ಕಾಣುವಿರಿ. ಸಮಸ್ಯೆಗಳ ಪರಿಹಾರಕ್ಕೆ ಗುರುವಾರ ಎಂಟು ಬಾರಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ.

ಕನ್ಯಾ: ಈ ವಾರ ನಿಮಗೆ ಈ ಹಿಂದೆ ಉಳಿದಿದ್ದ ಸಾಕಷ್ಟು ಸಮಸ್ಯೆಗಳು ದೂರ ಆಗುವ ಸಮಯ ಬಂದಿದೆ. ಮನೆ ಕಟ್ಟುವ ಆಸೆ ಅಥವಾ ನಿವೇಶನ ಖರೀದಿ ಮಾಡೋ ಆಸೆ ಇದ್ದರೆ ಈ ವಾರ ಉತ್ತಮ ಸಮಯ ಕೂಡಿ ಬರಲಿದೆ. ವಾರದ ಮೊದಲು ಎರಡು ದಿನ ಯಾವುದೇ ಸಮಸ್ಯೆ ಇಲ್ಲದೆ ಜೀವನ ಹೆಚ್ಚಿನ ಸಂತೋಷದಿಂದ ಕೂಡಿರಲಿದೆ. ನಂತರದ ದಿನಗಳಲ್ಲಿ ನಿಮ್ಮ ಕುಟುಂಬದ ಕಲಹ, ಸಣ್ಣ ಸಣ್ಣ ವಿಷಯಗಳಿಗೆ ವೈಶಮ್ಯ ಬರಲಿದೆ. ಸಾಕಷ್ಟು ಜನರನ್ನು ಭೇಟಿ ಮಾಡಿ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತೀರಿ. ವಾರದ ಕೊನೆ ದಿನದಲ್ಲಿ ಆರೋಗ್ಯ ಏರು ಪೇರಾಗಬಹುದು. ನಿಮಗೆ ಈ ವಾರ ಹಿರಿಯರ ಮಾರ್ದರ್ಶನದ ಅಗತ್ಯವಿದೆ. ಕುಲ ದೇವರ ದರ್ಶನ ವಾರದಲ್ಲಿ ಒಮ್ಮೆ ಮಾಡಿ.

ತುಲಾ: ವ್ಯವಹಾರಕ್ಕೆ ಈ ವಾರ ಉತ್ತಮ ವಾರ. ಏಕೆಂದರೆ ಕಳೆದ ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಈ ವಾರ ಪರಿಹಾರ ಸಿಗಲಿದೆ. ಈ ವಾರ ನಿಮ್ಮ ರಾಶಿಗೆ ಹೆಚ್ಚಿನ ಅದೃಷ್ಟ ಬಲ ಇರುವುದದರಿಂದ ಲಾಭ ಪಡೆಯುವಿರಿ. ನಿಮ್ಮ ಸಹೋದರ ಮತ್ತು ಸಹೋದರಿ ನಡುವಿನ ಮಾತಿನ ವಾಗ್ವಾದ ನಡೆಯಲಿದ್ದು ಅದನ್ನು ಬಗೆ ಹರಿಸುವ ಜವಾಬ್ಧಾರಿ ನಿಮಗೆ ಬರಲಿದೆ. ವಾರದ ಮೂರನೇ ದಿನದಲ್ಲಿ ಉತ್ತಮ ಸ್ಥಾನಮಾನ ಪಡೆಯುವಿರಿ. ಆರೋಗ್ಯದ ವಿಷಯದಲ್ಲೂ ಸಮಸ್ಯೆ ಕಾಡದು. ವಾರದ ಅಂತ್ಯದಲ್ಲಿ ಸ್ನೇಹಿತರ ಜತೆ ಪ್ರವಾಸ ಹೋಗುವಿರಿ.ವಾರದ ನಾಲ್ಕನೇ ದಿನದಿಂದ ಗಂಡಾಂತರ ಎದುರಾಗಲಿದೆ. ಆದ್ದರಿಂದ ಜಲಪಾತಕ್ಕೆ ಹೋಗುವುದು, ಈಜುವುದು ಇತ್ಯಾದಿ ಮಾಡಬೇಡಿ.

ವೃಶ್ಚಿಕ: ನಿಮಗೆ ಸಿಗುವ ಅತ್ಯಲ್ಪ ಸಮಯದಲ್ಲೇ ಅತೀ ಹೆಚ್ಚು ಸಾಧನೆ ಮಾಡುವ ಅವಕಾಶ ದೊರೆಯಲಿದೆ. ವಾರದ ಮೊದಲ ಮೂರು ದಿನಗಳು ಆರೋಗ್ಯದ ದೃಷ್ಟಿಯಿಂದ ಶುಭವಲ್ಲ. ವಾರದ ಐದನೇ ದಿನಕ್ಕೆ ಧನಲಾಭವಿದೆ. ನಿಮ್ಮ ಕುಟುಂಬದ ಜನರೊಂದಿಗೆ ಸಂಬಂಧ ಉತ್ತಮಗೊಳ್ಳುವುದು. ವಾರದ ಅಂತ್ಯಕ್ಕೆ ಸ್ನೇಹಿತರ ಜತೆ ಪ್ರವಾಸ ಕೈಗೊಳ್ಳುವಿರಿ. ಶುಕ್ರವಾರ ಸಂಜೆ ನಾಲ್ಕು ಗಂಟೆ ನಂತರ ಶಕ್ತಿ ದೇವತೆ ದರ್ಶನ ಪಡೆದು ತುಪ್ಪದ ದೀಪ ಹಚ್ಚಿದರೆ ಮನಸಿನ ಕೋರಿಕೆ ಈಡೇರಲಿದೆ.

ಧನು: ಈ ವಾರ ನಿಮಗೆ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಸುಧಾರಣೆ ಕಾಣಲಿದೆ. ಆದರೆ ನೀವು ವಿಲಾಸಿ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತೀರಿ. ವ್ಯವಹಾರ ಹಾಗೂ ಉದ್ಯೋಗದಲ್ಲಿ ಬದಲಾವಣೆ ಇರಲಿದೆ. ವಾರದ ಮೊದಲ ಎರಡು ದಿನ ಹೆಚ್ಚಿನ ಒತ್ತಡ, ಕೆಲಸದ ಓಡಾಟವಿರುತ್ತದೆ. ವಾರದ ಅಂತ್ಯದಲ್ಲಿ ಗ್ರಹಗತಿಗಳು ಉತ್ತಮವಾಗಿದ್ದು, ಆತ್ಮವಿಶ್ವಾಸ ಹೆಚ್ಚಿ, ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. ವಿದೇಶದಲ್ಲಿ ಹೂಡಿಕೆ ಮಾಡಿರುವ ಜನಕ್ಕೆ ಅತ್ಯುತ್ತಮ ಲಾಭ ಸಿಗಲಿದೆ. ಸೋಮವಾರ ಮತ್ತು ಗುರುವಾಗ ಅರಳಿ ಕಟ್ಟೆಗೆ 9 ಸುತ್ತು ಹಾಕಿದರೆ ಕೋರಿಕೆ ಈಡೇರುತ್ತದೆ.

ಮಕರ: ಈ ವಾರ ಜಮೀನು ಅಥವಾ ಆಸ್ತಿಗೆ ಸಂಬಂಧಪಟ್ಟ ಹಳೆಯ ತಗಾದೆ ಹೆಚ್ಚು ಕಾಡಲಿದೆ. ವಾರದ ಮೊದಲ ನಾಲ್ಕು ದಿನ ನಿಮ್ಮ ಉದ್ಯೋಗದಲ್ಲಿ ಸಂತೋಷ ದೊರೆಯಲಿದ್ದು ನಿಮ್ಮ ಹಲವು ಕೆಲಸಗಳು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುವುದು. ಸಣ್ಣ ಮತ್ತು ಮಧ್ಯಮ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಿದೆ. ಮಾರುಕಟ್ಟೆಯಲ್ಲಿ ಏರಿಳಿತವಿದ್ದರೂ ನಿಮ್ಮ ವ್ಯವಹಾರಕ್ಕೆ ಧಕ್ಕೆಯಾಗದು. ಪ್ರಯಾಣದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆಯಿರಲಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತ ವಾರ. ಸೋಮವಾರ ಶಿವನ ದೇಗುಲಕ್ಕೆ ತೆರಳಿ ತುಪ್ಪದ ದೀಪ ಹಚ್ಚಿದರೆ ವಾರ ಪೂರ್ಣ ಶುಭವಾಗಲಿದೆ.

ಕುಂಭ: ಈ ವಾರ ನಿಮ್ಮ ತಲೆಯಲ್ಲಿರುವ ಯೋಜನೆಗಳನ್ನು ಸಕ್ರಿಯಗೊಳಿಸಲು ಹೆಚ್ಚಿನ ಶ್ರಮವಹಿಸುತ್ತೀರಿ. ವಾರದ ಮೂರನೇ ದಿನ ಆರೋಗ್ಯ ಏರುಪೇರಾಗುವುದು, ನಿರ್ಲಕ್ಷಿಸಬೇಡಿ. ಸಣ್ಣ ಪುಟ್ಟ ನಿರ್ಲಕ್ಷ್ಯದಿಂದ ಹಾನಿ ಉಂಟುಮಾಡಿಕೊಳ್ಳುತ್ತೀರಿ. ಮನೆಯ ಕೆಲವು ವಿಷಯದಲ್ಲಿ ಹೆಚ್ಚಿನ ಹಣ ವ್ಯಯ ಆಗಲಿದೆ. ವಾರಂತ್ಯದಲ್ಲಿ ಶುಭಕಾರ್ಯದಲ್ಲಿ ಪಾಲ್ಗೊಂಡು ಸಂತೋಷ ಅನುಭವಿಸುತ್ತೀರಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ದುಪ್ಪಟ್ಟು ಲಾಭ ದೊರೆಯಲಿದೆ. ಮಂಗಳವಾರ ಆರು ಗಂಟೆಯಿಂದ ಏಳು ಗಂಟೆಯೊಳಗೆ ಹನುಮಾನ್ ಚಾಲೀಸ ಪಾರಾಯಣ ಮಾಡಿದರೆ ಒಳಿತು.

ಮೀನ: ಈ ವಾರ ನಿಮಗೆ ಉದ್ಯೋಗದಲ್ಲಿ ಹೆಚ್ಚಿನ ಶ್ರೇಯಸ್ಸು ದೊರೆಯಲಿದೆ. ವಾರದ ಮೊದಲ ದಿನ ಹೆಚ್ಚಿನ ಆದಾಯ ಪಡೆದು ಹಣ ಹೂಡಿಕೆ ಮಾಡುವಿರಿ. ನಿಮ್ಮ ಹೆಚ್ಚಿನ ಉಪಯುಕ್ತ ನಿರ್ಧಾರಗಳಿಗೆ ಜನರು ನಿಮ್ಮನ್ನು ಪ್ರಶಂಸೆ ಮಾಡುವರು. ಹೆಚ್ಚಿನ ಖರ್ಚುಗಳಾಗುವ ಸಾಧ್ಯತೆಯಿದೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಶ್ಚಿತ ಸಮಯದಲ್ಲಿ ಸ್ನೇಹಿತರಿಂದ ಹಣ ಸಹಾಯ ದೊರೆಯಲಿದೆ. ಮತ್ತಷ್ಟು ಫಲ ಪ್ರಾಪ್ತಿಯಾಗಲು ಗುರುವಾರ ಸಂಜೆ ಸಮಯದಲ್ಲಿ ಗುರು ಮಂತ್ರ 11 ಬಾರಿ ಪಾರಾಯಣ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?