Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 8 ಡಿಸೆಂಬರ್ 2018 (09:17 IST)
ಬೆಂಗಳೂರು: ವೃತ್ತಿ ರಂಗದಲ್ಲಿ ಮೇಲಧಿಕಾರಿಗಳಿಂದ ಕೊಂಚ ಕೊಂಚ ಕಿರಿ ಕಿರಿಯಾದರೂ, ಕುಟುಂಬದಲ್ಲಿ ಸಾಮರಸ್ಯವಿದ್ದು ಸಮಾಧಾನ ತರಲಿದೆ.


ಮೇಷ: ವಿದ್ಯಾರ್ಥಿಗಳು, ನೌಕರ ವರ್ಗದವರಿಗೆ ಶುಭದಿನ. ಅಂದುಕೊಂಡ ಕಾರ್ಯಗಳು ನೆರವೇರಲಿವೆ. ಪ್ರಯತ್ನ ಅಗತ್ಯ.

ವೃಷಭ: ದಾಂಪತ್ಯ ಜೀವನದಲ್ಲಿ ಸಂತಸ ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳ ಪ್ರಯತ್ನದಿಂದ ಫಲ ಸಿಗುತ್ತದೆ.

ಮಿಥುನ: ತಾಳ್ಮೆಯಿಂದ ಕೆಲಸ ಕಾರ್ಯಗಳಿಗೆ ಮುಂದಾದರೆ ಯಶಸ್ಸು ಸಾಧ್ಯ. ದೇವರ ಧ್ಯಾನ ಮಾಡಿ. ಆರೋಗ್ಯದ ಕಾಳಜಿ ವಹಿಸಿ.

ಕರ್ಕಟಕ: ಅನಗತ್ಯವಾಗಿ ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬೇಡಿ. ತಾಳ್ಮೆಯಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ.

ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿದೆ. ಆರಂಭದಲ್ಲಿ ವಿಘ್ನಗಳಿದ್ದರೂ ತಾಳ್ಮೆಯಿಂದ ಮುಂದುವರಿದಿರೆ ಯಶಸ್ಸು ಲಭಿಸುತ್ತದೆ.

ಕನ್ಯಾ: ದೂರ ಸಂಚಾರದ ಯೋಗವಿದ್ದು, ಖರ್ಚು ವೆಚ್ಚಗಳು ಅಧಿಕವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿದೆ.

ತುಲಾ: ಖರ್ಚು ವೆಚ್ಚ ಅಧಿಕವಾಗಿ ಚಿಂತೆಗೊಳಗಾಗುವಿರಿ. ಆದರೆ ಕುಟುಂಬದವರ ಸಹಕಾರದಿಂದ ನೆಮ್ಮದಿ ಮೂಡಲಿದೆ.

ವೃಶ್ಚಿಕ: ದೂರ ಸಂಚಾರ ಯೋಗವಿದ್ದರೂ ಎಚ್ಚರಿಕೆ ಅಗತ್ಯ. ಖುರ್ಚು ಇದ್ದಷ್ಟೇ ಆದಾಯವೂ ಬರುತ್ತದೆ. ಹಾಗಾಗಿ ಚಿಂತೆ ಬೇಡ.

ಧನು: ಅನಾರೋಗ್ಯ ಸುಧಾರಿಸಿ ಸಂತಸ ಮೂಡುತ್ತದೆ, ಪ್ರಯತ್ನ ಬಲದಿಂದ ಕಾರ್ಯಸಿದ್ಧಿ. ದಿನದಂತ್ಯಕ್ಕೆ ಶುಭವಾರ್ತೆ ಕೇಳುವಿರಿ

ಮಕರ: ಕಂಕಣ ಬಲ ಕೂಡಿಬರುತ್ತದೆ. ದೇವತಾ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು. ದೇಹಾರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ:ಖರ್ಚು ವೆಚ್ಚಗಳು ಅಧಿಕವಿದ್ದರೂ ಧನಾಗಮನದ ಯೋಗವಿದೆ. ವಿಶ್ವಾಸಘಾತುಕರು ಎದುರಾಗಬಹುದು, ಹುಷಾರಾಗಿರಿ.

ಮೀನ: ಬಂಧು ಮಿತ್ರರಿಂದ ಒಳ್ಳೆಯ ಸಲಹೆ ಕೇಳುವಿರಿ. ಹೊಸ ವಸ್ತು ಖರೀದಿಸುವಿರಿ. ಶುಭ ಕಾರ್ಯಗಳನ್ನು ಮಾಡಲು ಚಿಂತನೆ ನಡೆಸುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ಈವತ್ತು ಏನು ಮಾಡಿದರೆ ಉತ್ತಮ?