Select Your Language

Notifications

webdunia
webdunia
webdunia
webdunia

ಯಾವ ರಾಶಿಯವರು ಈವತ್ತು ಏನು ಮಾಡಿದರೆ ಉತ್ತಮ?

ಯಾವ ರಾಶಿಯವರು ಈವತ್ತು ಏನು ಮಾಡಿದರೆ ಉತ್ತಮ?
ಬೆಂಗಳೂರು , ಶುಕ್ರವಾರ, 7 ಡಿಸೆಂಬರ್ 2018 (08:45 IST)
ಬೆಂಗಳೂರು: ಇಂದಿನ ದಿನ ಶುಭದಿನವಾಗಲು ಯಾವ ರಾಶಿಯವರಿಗೆ ಏನೇನು ಫಲವಿದೆ? ಯಾವ ದೇವರನ್ನು ಧ್ಯಾನಿಸಿದರೆ ಉತ್ತಮ ಇಲ್ಲಿ ನೋಡಿ.


ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ದಿನ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ.

ವೃಷಭ: ದೂರ ಸಂಚಾರದ ಯೋಗವಿದೆ. ತಾಳ್ಮೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಧನ ಲಾಭ ಯೋಗವಿದೆ.

ಮಿಥುನ: ವರ್ತಕರಿಗೆ ಶುಭದಿನ. ದೇಹಾರೋಗ್ಯ ಕೆಡುವ ಸಾಧ್ಯತೆಯಿದ್ದರೂ, ಆದಾಯಕ್ಕೆ ಕೊರತೆಯಿಲ್ಲ. ದೂರ ಸಂಚಾರದಲ್ಲಿ ಎಚ್ಚರವಿರಿ.

ಕರ್ಕಟಕ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಅಪವಾದದ ಭೀತಿ ಇದೆ. ಹಿರಿಯರು ಹೇಳಿದ್ದನ್ನು ಕೇಳಿಸಿಕೊಳ್ಳಿ.

ಸಿಂಹ: ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಂಡುಬರಬಹದು. ದೇವರ ಧ್ಯಾನದಿಂದ ನೆಮ್ಮದಿ ಪ್ರಾಪ್ತಿ. ದಿನಾಂತ್ಯಕ್ಕೆ ಶುಭವಾರ್ತೆ ಗ್ಯಾರಂಟಿ.

ಕನ್ಯಾ: ಹಿರಿಯರ ಮಾರ್ಗದರ್ಶನದಂತೆ ನಡೆದರೆ ಯಾರ ಭಯವೂ ಇರದು. ವಿದ್ಯಾರ್ಥಿಗಳಿಗೆ ಶುಭದಿನ. ಧನಲಾಭದ ಸಾಧ‍್ಯತೆಯಿದೆ.

ತುಲಾ: ವೃತ್ತಿ ರಂಗದಲ್ಲಿ ಮುನ್ನಡೆ, ಕುಟುಂಬದವರಿಂದ ಸಹಕಾರ ಸಿಗುತ್ತದೆ. ಇಂದು ನೀವು ಕೈ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.

ವೃಶ್ಚಿಕ: ಮೇಲಧಿಕಾರಿಗಳೊಂದಿಗೆ ವರ್ತಿಸುವಾಗ ಎಚ್ಚರದಿಂದಿರಿ. ವಿನಾಕಾರಣ ಅಪವಾದಕ್ಕೆ ಗುರಿಯಾಗಬೇಕಾದೀತು. ದೇವರ ಧ್ಯಾನ ಮಾಡಿ ಕೆಲಸ ಮಾಡಿ.

ಧನು: ಕುಟುಂಬದವರ ಸಹಕಾರ ದೊರೆಯುತ್ತದೆ. ಆರೋಗ್ಯದ ಬಗ್ಗೆ ನಿಗಾ ಇರಲಿ. ದೇವರ ಕಾರ್ಯಗಳಲ್ಲಿ ಭಾಗವಹಿಸುವಿರಿ.

ಮಕರ: ತಾಳ್ಮೆಯೇ ಸಂತೋಷಕ್ಕೆ ಮೂಲ ದಾರಿಯಾಗಲಿದೆ. ಆರ್ಥಿಕ ಲಾಭವಾಗಲಿದೆ. ಕೆಲಸದಲ್ಲಿ ನಿರುತ್ಸಾಹ ತೋರದಿರಿ.

ಕುಂಭ: ಪ್ರಯತ್ನ ಬಲವಿದ್ದರೆ ಕಾರ್ಯಸಿದ್ಧಿಯಾಗಲಿದೆ. ದಿನದಂತ್ಯಕ್ಕೆ ಶುಭವಾರ್ತೆ ಸಿಗಲಿದೆ.

ಮೀನ: ಅಂದುಕೊಂಡ ಕೆಲಸವಾಗಲಿಲ್ಲವೆಂದು ಬೇಸರದಲ್ಲಿರುವಿರಿ. ಆದರೆ ಅದನ್ನು ಮೀರಿ ನಡೆದರೆ ಯಶಸ್ಸು ಸಾಧ‍್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಹನಾ ವವತು ಮಂತ್ರ ಯಾವಾಗ ಹೇಳಬೇಕು? ಇದರ ಮಹತ್ವ ನಿಮಗೆ ಗೊತ್ತಾ?