Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಯಾಗಲು ಈ ವಸ್ತುಗಳನ್ನಿಡಿ

Lakshmi

Krishnaveni K

ಬೆಂಗಳೂರು , ಶನಿವಾರ, 20 ಜನವರಿ 2024 (08:40 IST)
ಬೆಂಗಳೂರು: ಎಷ್ಟೇ ಪ್ರಯತ್ನಪಟ್ಟರೂ ದುಡಿದ ಹಣವೆಲ್ಲಾ ಕೈ ಜಾರಿ ಹೋಗುತ್ತಿದೆ, ಮನೆಯಲ್ಲಿ ಹಣವೇ ನಿಲ್ಲುತ್ತಿಲ್ಲ ಎಂಬ ಬೇಸರವಿದ್ದರೆ ಈ ಟಿಪ್ಸ್ ಫಾಲೋ ಮಾಡಿ ನೋಡಿ.

ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆ ನಿಲ್ಲಲು ವಾಸ್ತು ಪ್ರಕಾರ ಕೆಲವು ವಸ್ತಗಳನ್ನಿಟ್ಟುಕೊಂಡರೆ ಒಳ್ಳೆಯದು. ಅವು ಯಾವುವು ನೋಡೋಣ. ಮನೆ ಬಾಗಿಲಿನ ಬಳಿ ಓಂ ಅಥವಾ ಸಸ್ವಸ್ತಿಕದ ಚಿಹ್ನೆ ಬರೆಯಿರಿ.

ಮನೆ ಬಾಗಿಲಿನಲ್ಲಿಯೇ ಅಲಂಕಾರಿಕ ದೀಪ ಅಥವಾ ಸಂಜೆ ಹೊತ್ತು ದೀಪ ಹಚ್ಚಿಡುವುದರಿಂದ ಮನೆ ಬಾಗಿಲಿಗೆ ಬಂದ ಲಕ್ಷ್ಮೀ ಒಳಗೆ ಪ್ರವೇಶಿಸುವ ಮನಸ್ಸು ಮಾಡುತ್ತಾಳೆ. ಮನೆಯ ಬಾಗಿಲಿಗೆ ಶಂಖದ ತೋರಣ ಕಟ್ಟುವುದು ಉತ್ತಮ.

ಮನೆಯ ಒಳಗೆ ಪ್ರವೇಶಿಸುವ ಬಾಗಿಲಿನ ಪಕ್ಕದ ಗೋಡೆಗೇ ಕನ್ನಡಿಯೊಂದನ್ನು ನೇತು ಹಾಕಿ. ಮನೆಯ ಹಾಲ್ ನಲ್ಲಿ ಚಿಕ್ಕದಾದ ನೀರು ತುಂಬಿದ ಕಲಶ ಪಾತ್ರೆಯನ್ನು ಇಟ್ಟರೆ ಲಕ್ಷ್ಮೀ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ. ಅಲ್ಲದೆ, ಅರಶಿಣ ಬಳಸಿ ಮಹಾಲಕ್ಷ್ಮಿಯ ಪಾದದ ಗುರುತಿನ ಚಿತ್ರ ಬರೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?