Select Your Language

Notifications

webdunia
webdunia
webdunia
webdunia

ರಾಹು ಲಾಭಕಾರಕನಾಗಿದ್ದರೆ ಜೀವನದಲ್ಲಿ ಏನೆಲ್ಲಾ ಲಾಭವಾಗುತ್ತದೆ ಗೊತ್ತಾ?

Astrology
ಬೆಂಗಳೂರು: ಪ್ರತಿಯೊಂದು ಗ್ರಹಗಳಿಗೂ ಒಂದಲ್ಲಾ ಒಂದು ಗುಣ ಮತ್ತು ಅವಗುಣ ಎರಡೂ ಇರುತ್ತದೆ. ಸಾಮಾನ್ಯವಾಗಿ ರಾಹು ಗ್ರಹನನ್ನು ಕೆಟ್ಟ ಫಲ ಕೊಡುವವನು ಎಂದೇ ಅಂದುಕೊಂಡಿರುತ್ತೇವೆ.

ಆದರೆ ರಾಹು ಗ್ರಹದ ಶುಭ ದೃಷ್ಟಿಯಿದ್ದರೆ ನಮ್ಮ ಜೀವನದಲ್ಲಿ ನಾವು ಬಹಳ ಯಶಸ್ಸು ಪಡೆಯಬಹುದಾಗಿದೆ. ರಾಹು ಗ್ರಹ ಕಾಟದಿಂದ ಎಷ್ಟು ಕೆಟ್ಟದ್ದು ಅನುಭವಿಸುತ್ತೀರೋ ಒಳಿತು ಮಾಡಿದರೆ ಅಷ್ಟೇ ಶುಭ ಫಲವನ್ನೂ ಪಡೆಯುವಿರಿ.

ರಾಹು ನಮಗೆ ಜೀವನದಲ್ಲಿ ರಾಜ ಯೋಗ ತಂದುಕೊಡಬಲ್ಲನು. ಆರ್ಥಿಕವಾಗಿ ಉನ್ನತ ಸ್ಥಿತಿಗೆ ತಲುಪುವಿರಿ. ಹೊಸದನ್ನು ಕಂಡುಹಿಡಿಯುವ, ಯೋಜನೆಗಳನ್ನು ಜಾರಿಗೆ ತರುವ ಉತ್ಸಾಹ ನಿಮ್ಮಲ್ಲಿ ಬರುತ್ತದೆ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವ ಯೋಗವೂ ಬರಬಹುದು.

ಆದರೆ ರಾಹು ಗ್ರಹ ಋಣಾತ್ಮಕ ದೃಷ್ಟಿ ಬೀರುತ್ತಿದ್ದರೆ ಕೆಲಸದಲ್ಲಿ ನಿರಾಸಕ್ತಿ, ಜೀವನದಲ್ಲಿ ಆಲಸ್ಯ, ಮಾನಸಿಕವಾಗಿ ಗೊಂದಲಗಳು ಕಂಡುಬಂದೀತು. ಋಣಾತ್ಮಕ ಯೋಚನೆಗಳೇ ನಿಮ್ಮನ್ನು ಕಾಡೀತು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?