Select Your Language

Notifications

webdunia
webdunia
webdunia
webdunia

ಹೀಗೆ ಮಾಡುವುದು ದಾರಿದ್ರ್ಯ ಮತ್ತು ದುರಾದೃಷ್ಟದ ಸಂಕೇತ

ಹೀಗೆ  ಮಾಡುವುದು ದಾರಿದ್ರ್ಯ ಮತ್ತು ದುರಾದೃಷ್ಟದ ಸಂಕೇತ
, ಮಂಗಳವಾರ, 15 ಜನವರಿ 2019 (08:53 IST)
ಬೆಂಗಳೂರು: ನಮ್ಮ ಕೆಲವೊಂದು ಹಾವ ಭಾವಗಳು, ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ದುರಾದೃಷ್ಟದ ಸಂಕೇತಗಳೆಂದು ಪರಿಗಣಿಸುತ್ತೇವೆ. ಅವು ಯಾವುವು ನೋಡೋಣ.


ಕಾಲು ಆಡಿಸುತ್ತಾ ಕೂರುವುದು
ಕೆಲವರಿಗೆ ಕಾಲು ಕೆಳಗೆ ಬಿಟ್ಟು ಕೂತಾಗ ಕಾಲು ಆಡಿಸುವ ಕೆಟ್ಟ ಅಭ್ಯಾಸವಿರುತ್ತದೆ. ಇದಕ್ಕೆ ಮನೋವಿಜ್ಞಾನದಲ್ಲಿ ಬೇರೆಯದೇ ಕಾರಣಗಳಿವೆ. ಆದರೆ ಶಾಸ್ತ್ರಗಳ ಪ್ರಕಾರ ಈ ರೀತಿ ಕಾಲು ಆಡಿಸುತ್ತಾ ಕೂತರೆ ದುರಾದೃಷ್ಟ ಎದುರಾಗುತ್ತದೆ ಎಂದರ್ಥ.

ಕಾಳುಮೆಣಸು ಮತ್ತು ಉಪ್ಪು
ಕಾಳು ಮೆಣಸು ಮತ್ತು ಉಪ್ಪು ನೆಲಕ್ಕೆ ಚೆಲ್ಲುವುದು ಮನೆಯಲ್ಲಿ ಮುಂದೆ ನಡೆಯಬಹುದಾದ  ವಾಗ್ವಾದ, ಕಲಹ, ವೈಮನಸ್ಯಗಳ ಸಂಕೇತ ಎಂದೇ ಪರಿಗಣಿಸಲಾಗುತ್ತದೆ.

ಕತ್ತರಿ ಆಡಿಸುವುದು
ಕತ್ತರಿಯಲ್ಲಿ ಏನೂ ಇಲ್ಲದೇ ಕತ್ತರಿಸುವಂತೆ ಆಡಿಸುತ್ತಾ ಇದ್ದರೆ ಮನೆಯಲ್ಲಿ ವಾಗ್ವಾದದ ದುರಾದೃಷ್ಟ ಎದುರಾಗುವ ಸೂಚನೆ ಎಂದೇ ಪರಿಗಣಿಸಬೇಕು. ಹೀಗಾಗಿ ಸುಮ್ಮನೇ ಕತ್ತರಿಯಲ್ಲಿ ಆಟವಾಡಬೇಡಿ.

ಕತ್ತಲಾದ ಮೇಲೆ ಉಗುರು ಕತ್ತರಿಸುವುದು
ಕತ್ತಲಾದ ಮೇಲೆ ಉಗುರು ಕತ್ತರಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಇದೂ ಕೂಡಾ ಮನೆಗೆ ದಾರಿದ್ರ್ಯ ತರುತ್ತದೆ ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಹ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?