Publish Date: Mon, 14 Jan 2019 (09:14 IST)
Updated Date: Mon, 14 Jan 2019 (09:16 IST)
ಬೆಂಗಳೂರು: ಮೀನ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.
ಸಾಮಾನ್ಯವಾಗಿ ಮೀನ ರಾಶಿಯ ದಂಪತಿಯಲ್ಲಿ ವೈವಾಹಿಕ ಜೀವನದ ಸುಖಕ್ಕೆ ಕಾರಣನಾಗುವವನು ಚಂದ್ರ ಗ್ರಹ. ಚಂದ್ರನ ಅನುಗ್ರಹದಿಂದ ದಂಪತಿ ಪರಸ್ಪರ ಹೊಂದಾಣಿಕೆಯಿಂದ ಸಂತೋಷದಿಂದಿರುತ್ತಾರೆ. ಆದರೆ ಚಂದ್ರ ಗ್ರಹ ಇವರಲ್ಲಿ ಕಲಹಕ್ಕೆ ಕಾರಣನಾಗುತ್ತಾನೆ.
ಕೆಲವೊಮ್ಮೆ ಈ ದಂಪತಿ ಪರಸ್ಪರ ದೂರವಾಗುವ ತನಕವೂ ಇವರ ವಿರಸ ಮುಂದುವರಿಯುತ್ತದೆ. ಹೀಗಾಗಿ ಚಂದ್ರ ಗ್ರಹನ ವಕ್ರ ಪರಿಣಾಮ ಸರಿಪಡಿಸಿಕೊಂಡರೆ ಈ ರಾಶಿಯವರಲ್ಲಿ ಕಲಹ ಕಡಿಮೆಯಾಗಬಹುದು. ಅದಕ್ಕಾಗಿ ಈ ರಾಶಿಯವರು ಹುಣ್ಣಿಮೆ ದಿನ ಶಿವನ ಆರಾಧನೆ ಮಾಡಬೇಕು ಮತ್ತು ಕೈಗೆ ಬೆಳ್ಳಿಯ ಉಂಗುರ ಧರಿಸಿದರೆ ಶುಭವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ