Publish Date: Mon, 14 Jan 2019 (09:11 IST)
Updated Date: Mon, 14 Jan 2019 (09:13 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಕರ್ಕಟಕ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.
ಕರ್ಕಟಕ ರಾಶಿಯವರು ಭಾವುಕರು, ಸಂಘ ಜೀವಿಗಳು. ಇವರು ಏನೇ ಕೆಲಸ ಮಾಡುವುದಿದ್ದರೂ ಗುಂಪಿನ ಸಹಾಯದಿಂದ ಮಾಡುತ್ತಾರೆ. ತಮ್ಮ ಸ್ನೇಹಿತರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಕೆಲವೊಮ್ಮೆ ಸ್ನೇಹಿತರ ಸಹಾಯವಿಲ್ಲದೇ ಕೆಲಸವೇ ಮಾಡದ ಅಸಹಾಯಕತೆಯನ್ನೂ ಎದುರಿಸುತ್ತಾರೆ.
ಹೀಗಾಗಿ ಈ ರಾಶಿಯವರಿಗೆ ಗುಂಪಿನಲ್ಲಿ ಮಾಡುವ ಕೆಲಸಗಳು ಸೂಕ್ತ. ಅದರಲ್ಲೂ ಶಿಕ್ಷಣ, ಸಮೂಹ ಉದ್ಯಮ, ಹೆಲ್ತ್ ಕೇರ್ ಸೆಂಟರ್, ಡೇ ಕೇರ್ ಸೆಂಟರ್ ಇಂತಹ ಸಂಸ್ಥೆಗಳನ್ನು ನಿಭಾಯಿಸಲು ಇವರು ಸೂಕ್ತರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ