Select Your Language

Notifications

webdunia
webdunia
webdunia
webdunia

Subramanya sashti 2024: ಸಂತಾನ ಭಾಗ್ಯಕ್ಕಾಗಿ ಸುಬ್ರಹ್ಮಣ್ಯನ ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು

Subramanya God

Krishnaveni K

ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2024 (08:48 IST)
Photo Credit: Facebook
ಬೆಂಗಳೂರು: ನಾಳೆ ಷಷ್ಠಿ ಮಹೋತ್ಸವವಾಗಿದ್ದು, ಸುಬ್ರಹ್ಮಣ್ಯ ದೇವರಿಗೆ ವಿಶೇಷವಾದ ದಿನ. ಈ ದಿನ ವ್ರತ ಮಾಡಿ ಸುಬ್ರಹ್ಮಣ್ಯನ ಸೇವೆ ಮಾಡುವುದು ಅತ್ಯಂತ ಫಲದಾಯಕವಾಗಿದೆ. ಅದರಲ್ಲೂ ಸುಬ್ರಹ್ಮಣ್ಯನ ಈ ಒಂದು ಮಂತ್ರವನ್ನು ಪಠಿಸಿದರೆ ಸಂತಾನಾಪೇಕ್ಷಿತ ದಂಪತಿ ಸಂತಾನ ಭಾಗ್ಯ ಪಡೆಯುವರು.

ಸುಬ್ರಹ್ಮಣ್ಯನ ಸೇವೆ ಮಾಡುವುದರಿಂದ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ನಮ್ಮ ಜಾತಕದಲ್ಲಿ ಸರ್ಪದೋಷಗಳಿದ್ದರೆ, ಸಂತಾನ ಮತ್ತು ಮದುವೆ ಎರಡೂ ಮಹತ್ವದ ಕಾರ್ಯಗಳಿಗೆ ಅಡ್ಡಿ ಆತಂಕಗಳು ಇದ್ದೇ ಇರುತ್ತವೆ. ವಿವಾಹದಲ್ಲಿ ಸಮಸ್ಯೆಗಳಿದ್ದರೆ ಮತ್ತು ಸಂತಾನ ಪ್ರಾಪ್ತಿಯಾಗಿ ಸುಬ್ರಹ್ಮಣ್ಯ ಸೇವೆ ಮಾಡುವುದು ಅತೀ ಮುಖ್ಯ.

ಅದರಲ್ಲೂ ವಿಶೇಷವಾಗಿ ಷಣ್ಮುಖನನ್ನು ಈ ಮಂತ್ರದಿಂದ ಪೂಜೆ ಮಾಡಿದರೆ ಒಳಿತು.

ಓಂ ಶರವಣ ಭವಾಯ ನಮಃ

ಈ ಮಂತ್ರವನ್ನು ಪಠಿಸುವುದರಿಂದ ಸುಬ್ರಹ್ಮಣ್ಯನ ಮೂಲ ಮಂತ್ರವಾಗಿದ್ದು ವಿವಾಹ, ಸಂತಾನಕ್ಕೆ ತೊಂದರೆಗಳ ಜೊತೆಗೆ ಮಾನಸಿಕ ಚಿಂತೆಗಳನ್ನು ದೂರ ಮಾಡಿ ಜೀವನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಲು ಸಹಾಯವಾಗುತ್ತದೆ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಸ್ನಾನ ಮಾಡಿ ಶುದ್ಧರಾಗಿ ಹೇಳುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?