Select Your Language

Notifications

webdunia
webdunia
webdunia
webdunia

ಕೈಗೊಂಡ ಕಾರ್ಯದಲ್ಲಿ ಸೋಲು, ಮನೆಯವರ ಮೇಲೆ ಸಿಟ್ಟಿಗೇಳುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ಈ ದೋಷ ಕಾರಣ!

ಕೈಗೊಂಡ ಕಾರ್ಯದಲ್ಲಿ ಸೋಲು, ಮನೆಯವರ ಮೇಲೆ ಸಿಟ್ಟಿಗೇಳುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ಈ ದೋಷ ಕಾರಣ!
ಬೆಂಗಳೂರು , ಶನಿವಾರ, 15 ಡಿಸೆಂಬರ್ 2018 (09:08 IST)
ಬೆಂಗಳೂರು: ಕೈಗೊಂಡ ಕಾರ್ಯಗಳಲ್ಲಿ ಸೋಲು, ಕುಟುಂಬದವರು, ಆಪ್ತರ ಮೇಲೆ ಮುನಿಸಿಕೊಳ್ಳುವುದು ಇತ್ಯಾದಿ ಮಾನಸಿಕ ಕಿರಿ ಕಿರಿಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ಗ್ರಹಣ ದೋಷ ಕಾರಣವಿರಬಹುದು.


ರಾಹು ಮತ್ತು ಕೇತು ಗ್ರಹಗಳು ಚಂದ್ರ ಅಥವಾ ರವಿಯ ನಡುವೆ ಬಂದಾಗ ಅಂತಹ ವ್ಯಕ್ತಿಗೆ ಗ್ರಹಣ ದೋಷವಿರುತ್ತದೆ. ಇದು ನಮ್ಮ ಕೌಟುಂಬಿಕ ಸಂಬಂಧ, ಕಾರ್ಯಕ್ಷೇತ್ರದಲ್ಲಿ ಸೋಲುಂಟು ಮಾಡಿ ಮಾನಸಿಕ ವೇದನೆಗೆ ಕಾರಣವಾಗುತ್ತದೆ. ಅದರಲ್ಲೂ ಇದು ಏಳನೇ ಸ್ಥಾನದಲ್ಲಿದ್ದಾಗ ಪತಿ-ಪತ್ನಿ ನಡುವೆ ಕಲಹ, ವಿರಸಕ್ಕೆ ಕಾರಣವಾಗಬಹುದು.

ಇದಕ್ಕೆ ಮಾಡಬೇಕಾಗಿರುವುದು ಪ್ರತಿ ನಿತ್ಯ ಚಂದ್ರ ಅಥವಾ ಸೂರ್ಯ ದೇವರಿಗೆ ಸಂಬಂಧಿಸಿದ ಪೂಜೆ, ಪ್ರಾರ್ಥನೆ ಮಾಡುವುದು, ಗೋ ಪೂಜೆ ಮಾಡುವುದು ಮಾಡುತ್ತಿದ್ದರೆ ಈ ದೋಷದ ಪರಿಣಾಮ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?