Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 15 ಡಿಸೆಂಬರ್ 2018 (09:04 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕ ಕೆಲಸಗಳಿಗೆ ಓಡಾಟ ಮತ್ತು ಧನವ್ಯಯ ಮಾಡಬೇಕಾದೀತು. ದೂರ ಸಂಚಾರದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು. ಅಧಿಕಾರಿ ವರ್ಗದವರಿಗೆ ಕಿರಿ ಕಿರಿ. ನಾನಾ ಕಾರಣಗಳಿಗೆ ಖರ್ಚು ವೆಚ್ಚ ತಪ್ಪದು.

ಮಿಥುನ: ಕುಟುಂಬ ಸದಸ್ಯರೊಂದಿಗೆ ಯಾವುದೇ ಕಾರಣಕ್ಕೂ ವೈಮನಸ್ಯ ಮಾಡಿಕೊಳ್ಳಬೇಡಿ. ಎಚ್ಚರಿಕೆಯಿಂದ ವರ್ತಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನಬಲವಿದ್ದರೆ ಮಾತ್ರ ಯಶಸ್ಸು.

ಕರ್ಕಟಕ: ವೃತ್ತಿ ರಂಗದಲ್ಲಿ ಕೊಂಚ ಅಡಚಣೆ ಎದುರಾಗುವುದು. ಆಪ್ತರೊಂದಿಗೆ ಮನಸ್ತಾಪ ಮಾಡಿಕೊಳ್ಳುವ ಸಾಧ್ಯತೆಯಿದೆ. ಕುಟುಂಬದವರ ಸಹಕಾರ ಸಿಗಲಿದೆ.

ಸಿಂಹ: ಅನಪೇಕ್ಷಿತ, ಅನವಶ್ಯಕ ಮಾತುಗಳು ಮನ ಕೆಡಿಸೀತು ಎಂಬುದು ನೆನಪಲ್ಲಿರಲಿ. ವಾದ ವಿವಾದಗಳಲ್ಲಿ ತೊಡಗಬೇಡಿ. ಸಂಬಂಧಗಳು ಹಾಳಾಗುವ ಸಾಧ‍್ಯತೆಯಿದೆ. ಕೆಟ್ಟ ಮಿತ್ರರ ಸಂಗ ಮಾಡಬೇಡಿ.

ಕನ್ಯಾ: ಯಾವುದೇ ಕೆಲಸಕ್ಕೆ ಮೊದಲು ಮನೆಯವರ ಜತೆ ಚರ್ಚಿಸಿ ಮುಂದುವರಿಯಿರಿ. ಏಕಾಂಗಿಯಾಗಿ ಕೈಗೊಳ್ಳುವ ನಿರ್ಧಾರಗಳು ನಿಮಗೇ ತಿರುಗುಬಾಣವಾಗಬಹುದು. ದಿನದಂತ್ಯಕ್ಕೆ ಶುಭ ಸುದ್ದಿ.

ತುಲಾ: ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ. ಯಾರಿಗೂ ಸಾಲ ನೀಡಲು ಹೋಗಬೇಡಿ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಓಡಾಟ ನಡೆಸಬೇಕಾದೀತು.

ವೃಶ್ಚಿಕ: ನಿಮ್ಮ ಬಗ್ಗೆ ಕೇಳಿಬರುವ ಅನವಶ್ಯಕ ಮಾತುಗಳಿಗೆ ಕಿವಿಗೊಡಬೇಕಿಲ್ಲ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ. ಆರೋಗ್ಯ ಸಮಸ್ಯೆ ಕಂಡುಬರಬಹುದು.

ಧನು: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದೇವರ ಪ್ರಾರ್ಥನೆಯಿಂದ ನಿಮಗೆ ಒಳಿತಾಗಲಿದೆ. ಬಹು ದಿನಗಳ ಆರೋಗ್ಯ ಸಮಸ್ಯೆ ಇಂದು ಪರಿಹಾರ ಸಿಗಲಿದೆ.

ಮಕರ: ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವಿರಿ. ಆದರೆ ಬರುವ ಅವಕಾಶವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳುವ ಜಾಣತನ ಬೇಕು. ದೇವರ ದರ್ಶನ ಪಡೆಯಿರಿ.

ಕುಂಭ: ಕೈಗೆತ್ತಿಕೊಂಡ ಕಾರ್ಯ ಪೂರ್ತಿಯಾಗದ ಬೇಸರ ಕಾಡಬಹುದು. ಆದರೆ ನಿರಾಸೆ ಬೇಡ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ನಿಮ್ಮದಾಗುತ್ತದೆ.

ಮೀನ: ಇಂದು ಎಷ್ಟೋ ದಿನದಿಂದ ನಿಮಗೆ ಬರಬೇಕಿದ್ದ ಬಾಕಿ ಬಂದು ಧನಲಾಭವಾಗಲಿದೆ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ಋಣಬಾಧೆ ತೀರಿ ಧನ ಪ್ರಾಪ್ತಿಯಾಗಲು ಅರಳಿಮರದ ಬಳಿ ಹೀಗೆ ಮಾಡಿ