Select Your Language

Notifications

webdunia
webdunia
webdunia
webdunia

ಮಗುವಿನ ವೃತ್ತಿಜೀವನ ರೂಪಿಸಲು ಐದು ನಿಯಮಗಳು

ಮಗುವಿನ ವೃತ್ತಿಜೀವನ ರೂಪಿಸಲು ಐದು ನಿಯಮಗಳು
ನವದೆಹಲಿ , ಮಂಗಳವಾರ, 21 ಜೂನ್ 2016 (14:06 IST)
1. ಮಗುವಿನ ಮಾನಸಿಕ ಸಾಮರ್ಥ್ಯ
ತಂದೆ, ತಾಯಿಗಳು ಬರೀ ತಮ್ಮ ಕನಸುಗಳನ್ನು ಮಾತ್ರ ಮಕ್ಕಳ ಮೇಲೆ ಹೇರದೇ  ಮಕ್ಕಳ ಯಶಸ್ವಿ ಭವಿಷ್ಯಕ್ಕೆ ಮಾರ್ಗದರ್ಶನ ನೀಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಮಗು ತನಗೆ ಆಸಕ್ತಿಯಿರುವ ವೃತ್ತಿಜೀವನದ ಹಾದಿಯಲ್ಲಿ ಸಾಗುವುದಕ್ಕೆ ಮಾರ್ಗದರ್ಶನ ನೀಡಲು ನೀವು ಮಗುವಿನ ಮಾನಸಿಕ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬೇಕು. 
 
  ಮಗುವಿನ ಮಾನಸಿಕ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ನೀವು ಮೊದಲಿಗೆ ಮಗುವಿನ ಚಂದ್ರನ ಚಿಹ್ನೆಯನ್ನು ಅರ್ಥಮಾಡಿಕೊಳ್ಳಬೇಕು. ಚಂದ್ರನು ರಾಶಿಚಕ್ರದ ಚಿಹ್ನೆಯಾಗಿದ್ದು ಮಗುವಿನ ಹುಟ್ಟಿನ ಕ್ಷಣದಲ್ಲಿ ಇರುತ್ತದೆ. ಚಂದ್ರ ಒಬ್ಬರ ಮಾನಸಿಕ ವ್ಯಕ್ತಿತ್ವದ ಪ್ರಭುವಾಗಿದ್ದು, ನಮ್ಮ ಅಂತರಾತ್ಮ, ಭಾವನೆಗಳನ್ನು ಬಿಂಬಿಸುತ್ತದೆ.
 
2. ಮಗುವಿನ ವೃತ್ತಿಜೀವನದ ಆಯ್ಕೆಗಳನ್ನು ಗುರುತಿಸಿ: ನಿಮ್ಮ ಮಗುವಿನ ಮಾನಸಿಕ ವ್ಯಕ್ತಿತ್ವದ ಮೂಲ ತಿಳಿವಳಿಕೆ ಉಂಟಾದ ಬಳಿಕ ಮಗುವಿನ ಆಸಕ್ತಿ ಮತ್ತು ಅಭಿರುಚಿಗೆ ಹೊಂದುವ ವಿವಿಧ ವೃತ್ತಿಗಳ ಬಗ್ಗೆ ಮಾರ್ಗದರ್ಶನ ನೀಡಿ. ಉದಾಹರಣೆಗೆ ನಿಮ್ಮ ಮಗು ಯಂತ್ರಗಳ ಬಗ್ಗೆ ಅಚ್ಚರಿ ಹೊಂದಿದ್ದರೆ, ಯಾವುದೇ ಗೊಂಬೆ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಯಾಂತ್ರಿಕತೆ ತಿಳಿಯಲು ಬಯಸಿದರೆ, ಆ ಮಗು ಮುಂದೆ ಎಂಜಿನಿಯರ್ ವೃತ್ತಿಯಲ್ಲಿ ಬೆಳೆಯಬಹುದು.
 ಮಗುವಿನ ಇಷ್ಟ ಮತ್ತು ಇಷ್ಟವಿಲ್ಲದ ವಿಷಯಗಳ ಸ್ಪಷ್ಟ ತಿಳಿವಳಿಕೆಯಿಂದ ವಿವಿಧ ಉದ್ಯೋಗ ಕ್ಷೇತ್ರಗಳಿಗೆ ಮಗುವನ್ನು ಪರಿಚಯಿಸಲು ಸುಲಭವಾಗುತ್ತದೆ.
 
3.ಮಗುವಿನ ಅಭಿಪ್ರಾಯ ಅರ್ಥಮಾಡಿಕೊಳ್ಳಿ
ಮಕ್ಕಳು ಕೆಲವು ಬಾರಿ ತಮ್ಮ ಇಚ್ಛೆಗಳನ್ನು ಪ್ರಕಟಿಸದೇ ಪೋಷಕರು ತಮ್ಮ ಮಗುವಿನ ಆಸಕ್ತಿ ತಿಳಿಯಲಾಗದೇ ತಬ್ಬಿಬ್ಬಾಗುತ್ತಾರೆ. ಮಗು ಯಾವುದೇ ವೃತ್ತಿಗೆ ತನ್ನ ಇಚ್ಛೆಯನ್ನು ತೋರಿಸದಿದ್ದರೆ, ಅವನ ಆಕಾಂಕ್ಷೆಗಳನ್ನು ತಿಳಿಯಲು ಹೃದಯಬಿಚ್ಚಿ ಮಾತನಾಡಿ.
 ನಿಮ್ಮ ಮಗುವಿನ ಭವಿಷ್ಯದ ಯೋಜನೆಗೆ ಅದರ ದೃಷ್ಟಿಕೋನವನ್ನು ತಿಳಿಯಲು ಅದರ ಶಕ್ತಿ, ದೌರ್ಬಲ್ಯ, ಅಭಿರುಚಿಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
 
4. ಮಗುವಿನ ಭವಿಷ್ಯದ ವರದಿ: ಮಗುವಿನ ಭವಿಷ್ಯವನ್ನು ಮುಂಗಾಣಲು ಅನೇಕ ಪೋಷಕರು ಬಯಸುತ್ತಾರೆ. ಮಗುವಿನ ಆರೋಗ್ಯ, ಉತ್ತಮ ಭವಿಷ್ಯ ಮತ್ತು ವೃತ್ತಿಜೀವನ ಖಾತರಿಗೆ ಅವರು ಬಯಸುತ್ತಾರೆ.  ಮಗುವಿನ ಭವಿಷ್ಯದ ಅವಕಾಶ ವರದಿ( ಚೈಲ್ಡ್ಸ್ ಫ್ಯೂಚರ್ ಸ್ಕೋಪ್ ರಿಪೋರ್ಟ್) ಮಗುವಿನ ವ್ಯಕ್ತಿತ್ವ ಮತ್ತು ಭವಿಷ್ಯದ ಎಲ್ಲ ವಿಷಯವನ್ನು ಹೊರಗೆಡವುತ್ತದೆ ಮತ್ತು ಉತ್ತಮ ವೃತ್ತಿಜೀವನದತ್ತ ಮಾರ್ಗದರ್ಶನ ನೀಡಲು ನೆರವಾಗುತ್ತದೆ.
 
5.ಮಗುವಿಗೆ ಸದಾ ಪ್ರೇರಣೆ ನೀಡಿ
ಮಗು ನಮಗೆ ಆ ಸರ್ವಶಕ್ತ ನೀಡಿರುವ ಅಮೂಲ್ಯ ಕೊಡುಗೆ ಎಂದು ಭಾವಿಸಿ  ಯಶಸ್ವಿ ವ್ಯಕ್ತಿಯಾಗಲು ಉತ್ತಮ ಮಾನವ ಜೀವಿಯಾಗಲು ಸತತವಾಗಿ ಉತ್ತೇಜನ ನೀಡುವುದು ನಮ್ಮ ಜವಾಬ್ದಾರಿ. ಮಗುವಿನ ಮಾನಸಿಕ ಶಕ್ತಿಯನ್ನು ಅರ್ಥಮಾಡಿಕೊಂಡು ಅದನ್ನು ಆಶಾವಾದ ಮತ್ತು ಸಕಾರಾತ್ಮಕತೆ ಕಡೆಗೆ ತರಬೇಕು.ಸದಾ ಮಗುವಿನಲ್ಲಿ ಸುರಕ್ಷತೆಯ ಭಾವನೆ ಉಂಟುಮಾಡಿ. ಮಗುನಲ್ಲಿ ಸುರಕ್ಷತೆಯ ಭಾವನೆ ಇದ್ದಾಗ ಅದರ ನೈಜ ವ್ಯಕ್ತಿತ್ವ ಅರಳುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಭವಿಷ್ಯದ ಮುನ್ಸೂಚನೆಗೆ ಕನಸುಗಳು ನೆರವಾಗುತ್ತವೆಯೇ?