Publish Date: Tue, 11 Aug 2015 (09:28 IST)
Updated Date: Tue, 11 Aug 2015 (11:08 IST)
ಟ್ರಾಫಿಕ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತದ ನಂಬರ್ 1 ಟೆನ್ನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ದಂಡ ವಿಧಿಸಲಾಗಿದೆ.
ಸಂಚಾರಿ ನಿಯಮದಂತೆ ಸಾನಿಯಾ ಕಾರಿನ ನಂಬರ್ ಪ್ಲೇಟ್ ಇರಲಿಲ್ಲ. ಈ ಕಾರಣಕ್ಕೆ ಅವರಿಗೆ ದಂಡ 200 ರೂಪಾಯಿ ದಂಡ ಹಾಕಲಾಗಿದೆ ಎಂದು ನಗರದ ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿ ಮುತ್ತಿನ ನಗರಿಯ ಜುಬ್ಲೀ ಹಿಲ್ಸ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ಪರಿಶೀಲಿಸುತ್ತಿದ್ದ ವೇಳೆ ಸಾನಿಯಾ ಕಾರಿನ ನಂಬರ್ ಪ್ಲೇಟ್ ನಿಯಮದ ಪ್ರಕಾರ ಇಲ್ಲದಿರುವುದು ಕಂಡುಬಂದಿದೆ.
ಸಾನಿಯಾ ಮಿರ್ಜಾ ಅವರ ಟಯೋಟಾ ಫಾರ್ಚೂನರ್ ಕಾರಿನ ನಂಬರ್ ಫ್ಲೇಟ್‌ನಲ್ಲಿ. ಫ್ಯಾನ್ಸಿ ನಂಬರ್ TS09EG1 ನಲ್ಲಿ ಅಂಕೆ '1' ರ ಗಾತ್ರ ದೊಡ್ಡದಾಗಿತ್ತು. ಹೀಗಾಗಿ ಸಂಚಾರ ಪೊಲೀಸರು ದಂಡ ಹಾಕಿದ್ದಾರೆ.
ಇತ್ತೀಚಿಗಷ್ಟೇ ಸ್ವಿಟ್ಜರ್ಲೆಂಡ್‌ನ ಮಾರ್ಟಿನ್ ಹಿಂಗಿಸ್ ಅವರ ಜೋಡಿಯಾಗಿ ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿ ಜಯಿಸಿರುವ ಸಾನಿಯಾ, ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.