Select Your Language

Notifications

webdunia
webdunia
webdunia
webdunia

ಎಚ್ಚರಿಕೆ: ನೀವಿನ್ನು ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವಂತಿಲ್ಲ

ಎಚ್ಚರಿಕೆ: ನೀವಿನ್ನು ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವಂತಿಲ್ಲ
ಜೈಪುರ್ , ಶುಕ್ರವಾರ, 8 ಜನವರಿ 2016 (16:32 IST)
ವಾಹನ ಚಲಾಯಿಸುತ್ತಿರುವಾಗಲೂ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಅಪಾಯವನ್ನು ನಾವಾಗಿಯೇ ಆಹ್ವಾನಿಸಿಕೊಂಡಂತೆ. ಈ ಕಾರಣಕ್ಕೆ ಅಪಘಾತಗಳು ಹೆಚ್ಚುತ್ತಿರುವುದನ್ನು ತಡೆ ಹಿಡಿಯಲು ರಾಜಸ್ಥಾನ ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.

ರಾಜಸ್ಥಾನದಲ್ಲೀಗ ವಾಹನ ಚಲಾಯಿಸುವಾಗ ಮೊಬೈಲ್ ಬಳಸುತ್ತಿದ್ದರೆ ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸಲಿದ್ದಾರೆ ಮತ್ತು ಮೊಬೈಲ್‌ನ್ನು ಸಹ ಜಪ್ತಿ ಮಾಡಿಕೊಳ್ಳಲಿದ್ದಾರೆ.
 
ವರದಿಗಳ ಪ್ರಕಾರ ಗೃಹ ಖಾತೆ ಸಚಿವ ಗುಲಾಬ್ ಚಂದ್ ಕಟಾರಿಯಾ ನೇತೃತ್ವದಲ್ಲಿ ನಡೆದ ಕ್ಯಾಬಿನೇಟ್ ಸಬ್ ಕಮಿಟಿ ಸಭೆಯಲ್ಲಿ  ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. 
 
ಜನವರಿ 18 ರಿಂದ 24ರವರೆಗೆ ಆಯೋಜಿಸಲಾಗಿರುವ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುವುದು.  ಬಳಿಕ ಇದನ್ನು ಕಾನೂನಾಗಿ ಜಾರಿಗೆ ತರಲಾಗುವುದು ಎಂದು ತಿಳಿದು ಬಂದಿದೆ. 
 
ರಾಜ್ಯದಾದ್ಯಂತ ಹೆಚ್ಚಿರುವ ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟವನ್ನು ನಿಲ್ಲಿಸಲು ಸಹ ಕಮಿಟಿ ನಿರ್ಧಾರ ಕೈಗೊಂಡಿದೆ. 
 

Share this Story:

Follow Webdunia kannada