Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಹೊಸ ಉದ್ಯಮ ಆರಂಭಕ್ಕೆ 29 ದಿನಗಳು , 12 ನಿಯಮಗಳು: ವಿಶ್ವಬ್ಯಾಂಕ್

ಭಾರತದಲ್ಲಿ ಹೊಸ ಉದ್ಯಮ ಆರಂಭಕ್ಕೆ 29 ದಿನಗಳು , 12 ನಿಯಮಗಳು: ವಿಶ್ವಬ್ಯಾಂಕ್
ವಾಷಿಂಗ್ಟನ್ , ಬುಧವಾರ, 28 ಅಕ್ಟೋಬರ್ 2015 (13:55 IST)
ಭಾರತ ವ್ಯಾಪಾರ ಆರಂಭಿಸಲು ಉತ್ತಮ ಸ್ಥಳವಾಗಿ ಪರಿವರ್ತನೆಯಾಗಿದ್ದರೂ ಕೂಡ ಈಗಲೂ ಉದ್ಯಮವೊಂದನ್ನು ಆರಂಭಿಸಲು 29 ದಿನಗಳು ಮತ್ತು 12 ನಿಯಮಗಳು ಬೇಕಾಗುತ್ತದೆ. ಗಮನಾರ್ಹ ಸುಧಾರಣೆಯ ಗುರುತಾದ ಭಾರತ ವಿಶ್ವಬ್ಯಾಂಕ್‌ನ ಡೂಯಿಂಗ್ ಬಿಸಿನೆಸ್ 2016ರಲ್ಲಿ 189 ಆರ್ಥಿಕ ರಾಷ್ಟ್ರಗಳ ಪೈಕಿ 130ನೇ ಸ್ಥಾನವನ್ನು ಹೊಂದಿದೆ.
 
 ಭಾರತ ಉದ್ಯಮ ಕಾರ್ಯಾಚರಣೆಗೆ ಬೇಕಾದ ಪ್ರಮಾಣಪತ್ರ ಮತ್ತು ಕನಿಷ್ಟ ಬಂಡವಾಳ ಅಗತ್ಯವನ್ನು ನಿವಾರಿಸುವ ಮೂಲಕ ಉದ್ಯಮ ಆರಂಭವನ್ನು ಸುಲಭಗೊಳಿಸಿದೆ. ಈ ಸುಧಾರಣೆ ದೆಹಲಿ ಮತ್ತು ಮುಂಬೈಗೆ ಅನ್ವಯವಾಗುತ್ತದೆ ಎಂದು  ವಿಶ್ವಬ್ಯಾಂಕ್ ವರದಿ  ತಿಳಿಸಿದೆ. 
 
ಭಾರತದ ಒಟ್ಟಾರೆ ಶ್ರೇಯಾಂಕ 10 ಅಂಶಗಳನ್ನು ಆಧರಿಸಿದೆ. ವ್ಯಾಪಾರ ಆರಂಭಿಸುವುದು(155ನೇ ಶ್ರೇಯಾಂಕ), ನಿರ್ಮಾಣ ಅನುಮತಿ ನಿರ್ವಹಣೆ(183), ವಿದ್ಯುಚ್ಛಕ್ತಿ (70), ಆಸ್ತಿ ನೋಂದಣಿ(138), ಸಾಲ ಪಡೆಯುವುದು (42), ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ (8), ತೆರಿಗೆ ಪಾವತಿ (157) ಮುಂತಾದವು. ಉದ್ದಿಮೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಸ್ಥಾನವು 2014ರಲ್ಲಿ 164ರಿಂದ 155ಕ್ಕೆ ಸುಧಾರಿಸಿದೆ. 
 

Share this Story:

Follow Webdunia kannada