Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಶನಿವಾರ, 20 ಏಪ್ರಿಲ್ 2019 (05:58 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಇಷ್ಟ  ಮಿತ್ರರು, ಬಂಧುಗಳ ಭೇಟಿ ಮನಸ್ಸಿಗೆ ನೆಮ್ಮದಿ, ಸಂತೋ಼ಷ ಕೊಡಲಿದೆ. ಭಾವನಾತ್ಮಕವಾಗಿ ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿ ಬರಲಿದೆ.

ವೃಷಭ: ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸಹೋದರರ ಜವಾಬ್ಧಾರಿ ಹೆಗಲಿಗೇರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸಂಚಾರದಲ್ಲಿ ಜಾಗ್ರೆತೆ ವಹಿಸಿ.

ಮಿಥುನ: ಭೂಮಿ, ಆಸ್ತಿ ಖರೀದಿ ಮಾಡುವುದಿದ್ದರೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. ಮಕ್ಕಳ ಆರೋಗ್ಯ ಹದಗೆಡುವುದು. ಕಾರ್ಮಿಕ ವರ್ಗದವರಿಗೆ ನಷ್ಟ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಯಾಗಲಿದೆ.

ಕರ್ಕಟಕ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ಹೊಸ ಪಾಲು ವ್ಯವಹಾರಕ್ಕೆ ಕೈಹಾಕುವಿರಿ. ನ್ಯಾಯಾಲಯದ ಕೆಲಸಗಳು ನಿಮ್ಮ ಪರವಾಗಲಿದೆ.

ಸಿಂಹ: ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ, ಪರಿಶ್ರಮ ಅಗತ್ಯ. ಕಾರ್ಯಾನುಕೂಲಕ್ಕೆ ಸಾಕಷ್ಟು ಅಡೆತಡೆಗಳು ತೋರಿಬಂದಾವು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ತಾಳ್ಮೆ ಮತ್ತು ಸಮಾಧಾನದಿಂದ ಮುನ್ನಡೆಯಿರಿ.

ಕನ್ಯಾ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದ್ದು, ಸಂಭ್ರಮದ ವಾತಾವರಣವಿರುವುದು. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.

ತುಲಾ: ಬಯಸಿದ ಕೆಲಸಗಳನ್ನು ಹಂತ ಹಂತವಾಗಿ ನೆರವೇರಿಸಲಿದ್ದೀರಿ. ಆರ್ಥಿಕ ಮುಗ್ಗಟ್ಟುಗಳು ಎದುರಾದೀತು. ಮಹಿಳೆಯರಿಗೆ ಮಾನಸಿಕ ವೇದನೆ ಎದುರಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ನೆಮ್ಮದಿ ಪಡೆಯುವಿರಿ.

ವೃಶ್ಚಿಕ: ಸಾಲ ಕೇಳಿಕೊಂಡು ಬರುವವರಿಗೆ ಇಂದು ಸಾಲ ಕೊಡಲು ಹೋದರೆ ಮರಳಿ ಬಾರದು. ಸಾಂಸಾರಿಕವಾಗಿ ಸಂಗಾತಿ, ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ದಾಯಾದಿಗಳ ಕಲಹ ನಿವಾರಣೆಯಾಗಲಿದೆ.

ಧನು: ಪ್ರಯತ್ನಕ್ಕೆ ತಕ್ಕ ಫಲ ಪಡೆಯುವಿರಿ. ಮನೆಯ ಜವಾಬ್ಧಾರಿ ನಿಭಾಯಿಸಬೇಕಾದ ಸಮಯವಿದು. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟರೆ ಸಂಬಂಧ ಹಾಳಾಗಬಹುದು. ಅನವಶ್ಯಕ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ.

ಮಕರ: ದೈವಾನುಗ್ರಹದಿಂದ ಸಾಂಸಾರಿಕವಾಗಿಯೂ ಉದ್ಯೋಗ ಕ್ಷೇತ್ರದಲ್ಲೂ ನೆಮ್ಮದಿಯ ವಾತಾವರಣವಿರುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಪ್ರವಾಸಕ್ಕೆ ತೆರಳುವಿರಿ.

ಕುಂಭ: ನಿರೀಕ್ಷಿತ ಕೆಲಸಗಳಿಗೆ ಅಡೆತಡೆಗಳಿದ್ದರೂ ಅಂತಿಮವಾಗಿ ಜಯ ನಿಮ್ಮದೇ. ವೃತ್ತಿರಂಗದಲ್ಲಿ ಅಭಿವೃದ್ಧಿ, ಮುನ್ನಡೆ ಗೋಚರಕ್ಕೆ ಬರುವುದು. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು.

ಮೀನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇವುಗಳನ್ನು ಗಿಪ್ಟ್ ಕೊಡುವವರು ನಿಮ್ಮ ಸುಖ ಬಯಸಲ್ಲ ಎಂದರ್ಥ