Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಗುರುವಾರ, 14 ಫೆಬ್ರವರಿ 2019 (08:38 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಮಾನಸಿಕವಾಗಿ ಸಾಕಷ್ಟು ಕಿರಿ ಕಿರಿ ಅನುಭವಿಸುವಿರಿ. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿ ಬರುತ್ತದೆ. ಸಂಗಾತಿಯೊಂದಿಗೆ ಮನಸ್ತಾಪಗಳು ತಲೆದೋರಿದಾವು. ಹಾಗಿದ್ದರೂ ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ.

ವೃಷಭ: ಆದಾಯದಲ್ಲಿ ನಿರೀಕ್ಷಿತ ಲಾಭ ಕಂಡುಬಂದು ಸ್ಥಿತಿ ಗತಿಗಳು ಸುಧಾರಿಸೀತು. ಹೊಸ ವ್ಯವಹಾರಗಳಿಗೆ ಕೈ ಹಾಕುವಿರಿ. ಸಂಗಾತಿಯೊಂದಿಗೆ ಸರಸ ಕ್ಷಣಗಳಿಗೆ ಭಂಗ ಎದುರಾದೀತು. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಿಥುನ: ಸಾಮಾಜಿಕವಾಗಿ ನಿಮ್ಮ ಸ್ಥಾನಮಾನಗಳು ಹೆಚ್ಚಿ ಗೌರವ ಸಂಪಾದಿಸಲಿದ್ದೀರಿ. ಹಾಗಿದ್ದರೂ ನೀವು ಮಾಡುವ ಸಣ್ಣ ತಪ್ಪುಗಳು ಅವಮಾನ ಎದುರಿಸಲು ಕಾರಣವಾಗಬಹುದು. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾದೀತು.

ಕರ್ಕಟಕ: ಹಲವು ಸಮಸ್ಯೆಗಳು ತೋರಿಬಂದರೂ ಸಂಗಾತಿಯ ಸಲಹೆಯೊಂದಿಗೆ ನಡೆದರೆ ಪರಿಹಾರ ದೊರಕೀತು. ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ. ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ. ಹಿಂದೆ ನೀಡಿದ್ದ ಸಾಲಗಳು ಮರುಪಾವತಿಯಾಗುತ್ತವೆ.
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದೂರ ಸಂಚಾರ ಮಾಡುವಾಗ ಅನಿರೀಕ್ಷಿತವಾಗಿ ಇಷ್ಟವಸ್ತುವೊಂದನ್ನು ಕಳೆದುಕೊಳ್ಳಲಿದ್ದೀರಿ. ದೂರದ ಸಂಬಂಧಿಕರಿಂದ ವಂಚನೆಗೊಳಗಾಗುವ ಸಾಧ್ಯತೆಯಿದೆ. ಎಚ್ಚರ ಅಗತ್ಯ.

ಕನ್ಯಾ: ಹಣಕಾಸಿನ ಮುಗ್ಗಟ್ಟು ತಲೆದೋರುತ್ತವೆ. ಸರ್ಕಾರಿ ಅಧಿಕಾರಿಗಳಿಗೆ ಕೆಲವೊಂದು ಅಡೆತಡೆಗಳು ಎದುರಾದೀತು. ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಹೊಸ ಉದ್ಯೋಗಕ್ಕಾಗಿ ದೂರ ಸಂಚಾರ ಮಾಡಬೇಕಾಗಿ ಬರಬಹುದು.

ತುಲಾ: ಹಣಕಾಸಿನ ಹರಿವಿಗೆ ಏನೂ ಕೊರತೆಯಾಗದು. ಅಷ್ಟೇ ಖರ್ಚುಗಳೂ ತಲೆದೋರುತ್ತದೆ. ಅವಿವಾಹಿತ ಮಕ್ಕಳಿಗೆ ತಕ್ಕ ಸಂಗಾತಿ ಸಿಗದೇ ಚಿಂತೆಗೆ ಕಾರಣವಾಗುತ್ತದೆ. ದಂಪತಿಗಳಿಗೆ ಶುಭ ದಿನ. ಮನೆಯಲ್ಲಿ ಉಲ್ಲಾಸದಾಯಕ ವಾತಾವರಣವಿರುತ್ತದೆ.

ವೃಶ್ಚಿಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಕೆಲವು ಶತ್ರುಗಳ ಕಾಟದಿಂದ ಮನಸ್ಸಿಗೆ ಬೇಸರ, ಕಾರ್ಯಗಳಿಗೆ ಅಡೆತಡೆಯಾಗುವುದು. ಅನಿರೀಕ್ಷಿತವಾಗಿ ಸಂಕಷ್ಟದ ಘಟನೆಯಲ್ಲಿ ಸಿಲುಕಿಕೊಳ‍್ಳುವಿರಿ. ದಿನದಂತ್ಯಕ್ಕೆ ಶುಭ.

ಧನು: ಕುಲದೇವರ ಪೂಜೆ ಬಾಕಿಯಿದ್ದರೆ ದರ್ಶನ ಪಡೆದು ಆ ಹರಕೆ ತೀರಿಸಿಕೊಳ್ಳಿ. ಸದ್ಯದ ನಿಮ್ಮ ಸಮಸ್ಯೆಗಳಿಗೆ ಅದುವೇ ಪರಿಹಾರ. ಹಾಗಿದ್ದರೂ ಸಂಸಾರಿಕವಾಗಿ ಮಕ್ಕಳೊಂದಿಗೆ ಖುಷಿಯ ಸಮಯ ಕಳೆಯುವಿರಿ.

ಮಕರ: ಯಾವುದೇ ವ್ಯವಹಾರ ಮಾಡುವುದಿದ್ದರೂ ಅಳೆದು ತೂಗಿ ಮಾಡುವುದು ಒಳಿತು. ಆರ್ಥಿಕವಾಗಿ ಮೋಸ, ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಹಾಗಿದ್ದರೂ ಕುಲದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ, ಕೆಲಸಗಳಲ್ಲಿ ಜಯ ಸಿಗುವುದು.

ಕುಂಭ: ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಕಂಡುಬರುತ್ತದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಸಿಗುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.

ಮೀನ: ಉದ್ದೇಶಿತ ಕೆಲಸಗಳಿಗೆ ಕೆಲವು ಅಡೆತಡೆಗಳು ತೋರಿಬಂದೀತು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ ಅನುಗ್ರಹ ನಿಮ್ಮ ಮೇಲಿರುವುದು. ಸಂಗಾತಿಯೊಡನೆ ಸರಸಮಯ ಕ್ಷಣ ಕಳೆಯುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಹನಗಳಿಗೆ ತಗಲಿದ ದೃಷ್ಟಿಯನ್ನು ಈ ರೀತಿ ನಿವಾರಿಸಿಕೊಂಡು ಅಪಾಯದಿಂದ ಪಾರಾಗಿ