Select Your Language

Notifications

webdunia
webdunia
webdunia
webdunia

ವಿಷ್ಣುವಿಗೆ ಸುದರ್ಶನ ಚಕ್ರ ಆಯುಧವಾಗಿ ಬಂದಿದ್ದು ಹೇಗೆ?

ವಿಷ್ಣುವಿಗೆ ಸುದರ್ಶನ ಚಕ್ರ ಆಯುಧವಾಗಿ ಬಂದಿದ್ದು ಹೇಗೆ?
ಬೆಂಗಳೂರು , ಭಾನುವಾರ, 3 ನವೆಂಬರ್ 2019 (08:49 IST)
ಬೆಂಗಳೂರು: ಶ್ರೀಮನ್ನಾರಾಯಣ ಅಥವಾ ವಿಷ್ಣು ದೇವರ ಆಯುಧವೆಂದರೆ ಸುದರ್ಶನ ಚಕ್ರ. ಈ ಆಯುಧ ವಿಷ್ಣು ದೇವರಿಗೆ ಬಂದಿದ್ದು ಹೇಗೆ ಎಂದು ನಿಮಗೆ ಗೊತ್ತಾ?


ಶಿವ ಪುರಾಣದ ಪ್ರಕಾರ ವಿಷ್ಣು ವಿಶ್ವವನ್ನು ಎಲ್ಲಾ ದುಷ್ಟ ಶಕ್ತಿಯಿಂದ ರಕ್ಷಿಸಲು ಒಂದು ಅತ್ಯಂತ ಶಕ್ತಿ ಶಾಲಿ ಆಯುಧವನ್ನು ಹೊಂದಲು ಬಯಸಿದನು. ಇದಕ್ಕಾಗಿ ವಿಷ್ಣು ಒಂದು ಸಾವಿರ ಹೂವುಗಳಂದ ಶಿವನನ್ನು ಪೂಜೆ ಮಾಡಿ ವರ ಪಡೆಯಲು ತೀರ್ಮಾನ ಮಾಡಿದನು.

ಆದರೆ ಪೂಜೆ ಕೊನೆಗೊಳ್ಳುವ ವೇಳೆ ಒಂದು ಹೂವು ಕಡಿಮೆ ಇರುವುದು ವಿಷ್ಣುವಿಗೆ ಅರಿವಾಯಿತು. ಆಗ ವಿಷ್ಣುವು ತನ್ನ ಒಂದು ಕಣ್ಣನ್ನೇ ಕಿತ್ತು ಅದನ್ನೇ ಕಮಲದ ಹೂವೆಂಬಂತೆ ಶಿವನಿಗೆ ಅರ್ಪಿಸಿದನು. ತನ್ನ ಕಣ್ಣನ್ನೇ ಕಿತ್ತು ಪೂಜೆ ಮಾಡಿದ್ದಕ್ಕಾಗಿ ವಿಷ್ಣುವಿಗೆ ಪದ್ಮಾಕ್ಷ ಎಂಬ ಹೆಸರೂ ಬಂತು.ಶಿವನು ಈ ತೀವ್ರ ಭಕ್ತಿಯನ್ನು ಮೆಚ್ಚಿ ವಿಷ್ಣು ದೇವನಿಗೆ ವರ ಬೇಡಲು ಕೇಳಿದನು. ಅದರಂತೆ ವಿಷ್ಣು ಒಂದು ಪ್ರಬಲ ಆಯುಧ ನೀಡಲು ಹೇಳಿದನು. ಅದರಂತೆ ಶಿವನು ಸುದರ್ಶನ ಚಕ್ರವನ್ನು ಆಯುಧವಾಗಿ ನೀಡಿದನು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?