Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 2 ನವೆಂಬರ್ 2019 (07:13 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬಹುದಿನಗಳಿಂದ ಕಾಡುತ್ತಿದ್ದ ಮನಃಪ್ರಯಾಸಕ್ಕೆ ಇಂದು ತೆರೆ ಕಾಣಲಿದೆ. ಕೌಟುಂಬಿಕವಾಗಿ ನೆಮ್ಮದಿ ಮೂಡುವುದು. ನೀವು ಅಂದುಕೊಂಡ ಕೆಲಸಗಳನ್ನು ನಿರ್ವಹಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಪ್ರೀತಿ ಪಾತ್ರರ ಅಗಲಿಕೆಯ ನೋವು ಕಾಡಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಗೆ ಅವಕಾಶ ಕೊಡದಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಂಡುಬರಬಹುದು. ಆದರೆ ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ನಿಗಾ ವಹಿಸುವುದು ಉತ್ತಮ.

ಮಿಥುನ: ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಅಂದುಕೊಂಡ ರೀತಿಯಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಮೇಲಧಿಕಾರಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕೃಷಿಕರಿಗೆ ತಮ್ಮ ಚಟುವಟಿಕೆಗಳಿಗೆ ಕೊಂಚ ವಿಘ್ನಗಳು ಎದುರಾದೀತು. ತಾಳ್ಮೆಯಿಂದಿರಿ.

ಸಿಂಹ: ಸಾಮಾಜಿಕವಾಗಿ ನೀವು ಕೈಗೊಂಡ ಕೆಲಸಗಳಿಗೆ ಜನಮನ್ನಣೆ ಸಿಗುವುದು. ಇಷ್ಟಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಉದ್ಯೋಗದಲ್ಲಿ ಸ್ಥಾನ ಪಲ್ಲಟ ಭೀತಿಯಿದೆ. ಕೆಳಹಂತದ ನೌಕರರಿಗೆ ಮುನ್ನಡೆ ಸಿಗುವುದು. ವಿದ್ಯಾರ್ಥಿಗಳು ಕಠಿಣ ಪ್ರಯತ್ನ ನಡೆಸಬೇಕು.

 
ಕನ್ಯಾ: ಅಧಿಕಾರಿ ವರ್ಗದವರಿಂದ ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ದುಡುಕಿನ ವರ್ತನೆ ತೋರದಿರಿ. ಪಾಲು ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಿರಲಿ. ಅಧಿಕ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ.

ತುಲಾ: ವಿದ್ಯಾರ್ಥಿಗಳಿಗೆ ಅಭ್ಯಾಸ ನಿಮಿತ್ತ ವಿದೇಶಯಾನ ಮಾಡುವ ಯೋಗವಿದೆ. ಎಷ್ಟೋ ದಿನದಿಂದ ಬಾಕಿ ಬರಬೇಕಿದ್ದ ಹಣ ಸಂದಾಯವಾಗುವುದು. ಆರ್ಥಿಕವಾಗಿ ಚೇತರಿಕೆ ಕಂಡುಬಂದರೂ ಅನಿರೀಕ್ಷಿತ ಖರ್ಚುಗಳು ಬಂದೀತು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ.

ವೃಶ್ಚಿಕ: ಹೊಸ ಕೆಲಸಗಳನ್ನು ಆರಂಭಿಸುವಾಗ ಹಲವು ಅಡ್ಡಿ ಆತಂಕಗಳು ಎದುರಾದೀತು. ಆದರೆ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.

ಧನು: ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಅಂತ್ಯ ಸಿಗುವುದು. ನಿಮ್ಮ ದುಡುಕು ಮಾತಿನಿಂದ ಸಂಗಾತಿಯ ಮನಸ್ಸಿಗೆ ಬೇಸರವಾಗಬಹುದು. ಮಕ್ಕಳಿಂದ ಸಂತಸದ ವಾರ್ತೆ ಸಿಗುವುದು. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಮಕರ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಪ್ರಯಾಣದಲ್ಲಿ ಕಳ್ಳತನದ ಭೀತಿಯಿದೆ. ಎಚ್ಚರವಾಗಿರಬೇಕು. ಇಷ್ಟಮಿತ್ರರೊಂದಿಗೆ ಭೋಜನ ಸಾಧ‍್ಯತೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿ ಅಗತ್ಯ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕುಂಭ: ಪ್ರೀತಿ ಪಾತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಬಹುದು. ಹಿರಿಯರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ಕೌಟುಂಬಿಕವಾಗಿ ಬಿಡುವಿಲ್ಲದ ಓಡಾಟವಿರಬಹುದು. ದಿನದಂತ್ಯಕ್ಕೆ ನೆಮ್ಮದಿ.

ಮೀನ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆ ಲಭಿಸುವುದು. ನೆರೆಹೊರೆಯವರೊಂದಿಗೆ ವಾಗ್ವಾಗವಾದಂತೆ ಎಚ್ಚರವಹಿಸಿ. ಸ್ವಯಂ ಉದ್ಯೋಗಿಗಳಿಗೆ ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾಗಬಹುದು. ತಾಳ್ಮೆಗೆಡಬೇಡಿ. ಮನೆಯಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಿಯ ಈ 5 ವಸ್ತುಗಳು ಮನೆಯಲ್ಲಿದ್ದರೆ ಧನ ಲಾಭವಾಗುತ್ತದೆಯಂತೆ