Publish Date: Sat, 29 Aug 2020 (08:45 IST)
Updated Date: Sat, 29 Aug 2020 (08:47 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ವೃಶ್ಚಿಕಾ
ತುಂಬಾ ಸ್ಟ್ರಾಂಗ್ ಆಗಿ ಇರ್ತಾರೆ. ಅವರ ಅಭಿಪ್ರಾಯದ ವಿಚಾರದಲ್ಲಿ ಕಡ್ಡಿ ಮುರಿದಂತೆ ಮಾತನಾಡುತ್ತಾರೆ. ಒಂದು ವೇಳೆ ಅವರು ಮಾತನಾಡದೇ ಇದ್ದರೂ ಅವರ ವರ್ತನೆಯಿಂದಲೇ ಅಭಿಪ್ರಾಯ ಸೂಸುತ್ತಾರೆ. ಆಸಕ್ತಿಕರ ವಿಚಾರಗಳ ಕುರಿತು ನಿರರ್ಗಳವಾಗಿ ಚರ್ಚೆ ಮಾಡಬಲ್ಲರು. ಇನ್ನೊಬ್ಬರಿಗೆ ಸದಾ ಬೆಂಬಲವಾಗಿರುತ್ತಾರೆ. ಆಕರ್ಷಣೀಯ ವ್ಯಕ್ತಿತ್ವವಿರುತ್ತದೆ.