Publish Date: Thu, 27 Aug 2020 (09:09 IST)
Updated Date: Thu, 27 Aug 2020 (09:10 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ಕನ್ಯಾ
ನಿಮಗೇ ಗೊತ್ತಿಲ್ಲದೇ ಅವರು ನಿಮ್ಮ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಒಂದು ರೀತಿಯ ಹದ್ದಿನಗಣ್ಣು ಇವರದ್ದು. ಯಾವುದೇ ವಿಚಾರವನ್ನಾದರೂ ಬೇಗನೇ ಕಲಿತುಕೊಳ್ಳುತ್ತಾರೆ. ತಮಾಷೆ ಮಾಡುವುದು ಕಡಿಮೆಯಾದರೂ ನಗಿಸುವವರ ಜತೆ ಚೆನ್ನಾಗಿ ಬೆರೆಯುತ್ತಾರೆ. ಆದರೆ ಶಿಸ್ತಿನ ಸಿಪಾಯಿಗಳು. ಬುದ್ಧಿವಂತರು.