Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರಂಭದಲ್ಲೇ ಕಾರ್ಯಕ್ಷೇತ್ರದಲ್ಲಿ ವಿಘ್ನಗಳು ಎದುರಾದೀತು. ಹಾಗಿದ್ದರೂ ನಿಶ್ಚಯಿಸಿದ ನಿರ್ಧಾರದಿಂದ ಹಿಂದೆ ಸರಿಯಬೇಡಿ. ಮೇಲಧಿಕಾರಿಗಳ ಕಿರಿ ಕಿರಿಗೆ ತಕ್ಕ ಉತ್ತರ ನೀಡಲಿದ್ದೀರಿ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಮನಸ್ಸು ನಿಯಂತ್ರಣ ತಪ್ಪಿ ಕುಣಿಯಲಿದೆ. ಕೆಟ್ಟ ಸ್ನೇಹ ಸಂಗದಿಂದ ಹೊರಬರುವುದು ಉತ್ತಮ. ವ್ಯಾಪಾರಿ ವರ್ಗದವರಿಗೆ ವಿಲಾಸೀ ಜೀವನದ ಯೋಗವಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಂಡಬರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಮಿಥುನ: ನೀವು ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ. ಚಿಂತೆ ಬೇಡ. ಹಿತಶತ್ರುಗಳನ್ನು ದೂರವಿಡುವುದು ಉತ್ತಮ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲಿದ್ದೀರಿ.

ಕರ್ಕಟಕ: ಯಾವುದೇ ಕೆಲಸವನ್ನು  ನಿರ್ಭೀತಿಯಿಂದ ಮಾಡಿದರೆ ನಿಮಗೆ ಯಶಸ್ಸು ಖಂಡಿತಾ. ಟೀಕಾಕಾರರ ಮಾತುಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಸಿಂಹ: ಹಿರಿಯರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಲಿದೆ. ಕೌಟುಂಬಿಕವಾಗಿ ನಿಮ್ಮ ಮೇಲೆ ಅತಿಯಾದ ನಂಬಿಕೆ, ಜವಾಬ್ಧಾರಿ ಇರಲಿದ್ದು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಒದಗಿಬರಲಿವೆ.

ಕನ್ಯಾ: ಮಾನಸಿಕವಾಗಿ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳು ಸಾಮಾನ್ಯ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಾಗಿದೆ. ಎಲ್ಲವನ್ನೂ ಸಮಚಿತ್ತರಾಗಿ ನೋಡಿದರೆ ತೊಂದರೆಯಾಗದು.

ತುಲಾ: ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸಲು ಮುಂದಾಗಲಿದ್ದೀರಿ. ನೂತನ ದಂಪತಿಗಳಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಸ್ಥಿತಿ ಚಿಂತೆ ತಂದೀತು. ಸಂಗಾತಿಯ ಸಹಕಾರ ಸಿಗಲಿದೆ.

ವೃಶ್ಚಿಕ: ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಬಹಳ ದಿನಗಳ ನಂತರ ಮಿತ್ರರನ್ನು, ಬಂಧುಗಳನ್ನು ಭೇಟಿಯಾಗುವುದರಿಂದ ಮನಸ್ಸಿಗೆ ಸಂತಸವಾಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಹಿನ್ನಡೆಯಾದರೂ ನಷ್ಟವಾಗಲ್ಲ. ಚಿಂತೆ ಬೇಡ.

ಧನು: ನಿಮ್ಮ ಕೆಲವೊಂದು ಮಾತುಗಳು ಪ್ರೀತಿ ಪಾತ್ರರ ಮನಸ್ಸಿಗೆ ಬೇಸರವುಂಟು ಮಾಡೀತು. ಸಂಗಾತಿಯ ಮಾತಿಗೆ ಕಿವಿಗೊಡಿ. ಧನಾತ್ಮಕ ಯೋಚನೆಗಳು ಫಲ ನೀಡಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಸಮಸ್ಯೆ ಬಗೆಹರಿವುದು.

ಮಕರ: ನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಗಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅನಿರೀಕ್ಷಿತವಾಗಿ ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗವಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿರಲಿ.

ಕುಂಭ: ಸಂಚಾರದಿಂದ ಕಾರ್ಯ ಸಿದ್ಧಿಯಾಗಲಿದೆ. ಅಪರಿಚಿತರು ನಿಮಗೆ ಒಳ್ಳೆಯದನ್ನು ಮಾಡಲಿದ್ದಾರೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಸರಿಯಾದ ಯೋಜನೆಯೊಂದಿಗೆ ಹೆಜ್ಜೆಯಿಡಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಮೀನ: ಮಹಿಳೆಯರಿಗೆ ಹೊಸ ವಸ್ತ್ರ, ಚಿನ್ನಾಭರಣ ಖರೀದಿ ಯೋಗವಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಅನಾರೋಗ್ಯ ತಪ್ಪದು. ಅವಿವಾಹಿತರಿಗೆ ಶೀಘ್ರ ಕಂಕಣ ಭಾಗ್ಯ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಹೆಸರಿನ ಹುಡುಗಿಯರನ್ನು ಮದುವೆಯಾದರೆ ನೀವು ಕೋಟ್ಯಾಧಿಪತಿಯಾಗುತ್ತೀರಿ