Publish Date: Tue, 25 Aug 2020 (09:01 IST)
Updated Date: Tue, 25 Aug 2020 (09:02 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ಕರ್ಕಟಕ
ಇವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಆದರೆ ಅವರು ಸರಿಯಾದ ವ್ಯಕ್ತಿಗಳ ಸಹವಾಸವನ್ನೇ ಮಾಡುತ್ತಾರೆ ಎಂಬುದು ಸಮಾಧಾನಕರ ಅಂಶ. ಕೊಂಚ ಭಾವುಕ ವ್ಯಕ್ತಿಗಳು. ಆದರೆ ಯಾವುದನ್ನೂ ತೋರಿಸಿಕೊಳ್ಳುವವರಲ್ಲ. ಒಂದು ವೇಳೆ ತಮ್ಮನ್ನು ಹಗುರವಾಗಿ ಪರಿಗಣಿಸುತ್ತಾರೆಂದರೆ ತಕ್ಷಣವೇ ಆ ಜಾಗದಿಂದ ಹೊರಬರುತ್ತಾರೆ.