ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನೀವು ಇಷ್ಟಪಡುವ ವ್ಯಕ್ತಿಗಳಾಗಿ ಕೆಲವೊಂದು ತ್ಯಾಗ ಮಾಡಲು ಸಿದ್ಧರಾಗುತ್ತೀರಿ. ಮಾತಿನ ಮೇಲೆ ನಿಗಾ ಇರಲಿ. ಬೇರೆಯವರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಲಿದ್ದೀರಿ. ಕೌಟುಂಬಿಕವಾಗಿ ಹೊಣೆಗಾರಿಕೆ ಹೆಚ್ಚಲಿದೆ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಹಿಂದಿನ ಪರಿಶ್ರಮಗಳು ಫಲಗೂಡಲಿವೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಒದಗಿಬರಲಿವೆ. ವ್ಯಾಪಾರಿ ವರ್ಗದವರಿಗೆ ಹಿತಶತ್ರುಗಳ ಕಾಟ ಕಂಡುಬರಲಿದೆ. ಎಚ್ಚರಿಕೆಯಿರಲಿ.
ಮಿಥುನ: ನಿಮ್ಮ ನಿಜವಾದ ಮಿತ್ರರು ಯಾರು ಎಂದು ಅರಿಯುವ ಕಾಲ ಬರಲಿದೆ. ಆರ್ಥಿಕವಾಗಿ ಸಾಲಗಾರರ ಸುಳಿಯಿಂದ ಪಾರಾಗಲು ದಾರಿ ಕಂಡುಕೊಳ್ಳಲಿದ್ದೀರಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ. ಕಿರು ಸಂಚಾರ ಮಾಡುವಿರಿ.
ಕರ್ಕಟಕ: ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ಇಷ್ಟದೇವರ ಪ್ರಾರ್ಥನೆ, ಹರಕೆ ತೀರಿಸಲು ಮುಂದಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಸಿಂಹ: ವೈಯಕ್ತಿಕವಾಗಿ ನಿಮ್ಮ ದೌರ್ಬಲ್ಯಗಳನ್ನು ಅರಿತು ವಂಚನೆ ಮಾಡುವವರಿರುತ್ತಾರೆ. ಇತರರ ಮೇಲೆ ಅತಿಯಾದ ವಿಶ್ವಾಸ ಬೇಡ. ಸಂಗಾತಿಯ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಕುಲದೇವರ ಪ್ರಾರ್ಥನೆ ನಡೆಸಿ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಉನ್ನತಾಧಿಕಾರದ ಯೋಚನೆಗಳನ್ನು ಸದ್ಯಕ್ಕೆ ಬಿಡುವುದು ಉತ್ತಮ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಮಕ್ಕಳಿಂದ ಸಂತೋಷ ಪ್ರಾಪ್ತಿಯಾಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ.
ತುಲಾ: ಸ್ವಯಂ ವೃತ್ತಿಯವರಿಗೆ ಚೇತರಿಕೆಗೆ ಹೊಸ ದಾರಿಗಳು ಹೊಳೆಯಲಿವೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಹಿರಿಯರಿಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದೀತು. ತಾಳ್ಮೆ, ಸಂಯಮವಿರಲಿ.
ವೃಶ್ಚಿಕ: ಸರಕಾರಿ ಉದ್ಯೋಗದಲ್ಲಿರುವವರಿಗೆ ಸದ್ಯದಲ್ಲೇ ಮುಂಬಡ್ತಿ ಯೋಗ ಕಾದಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
ಧನು: ನಿಮ್ಮ ಹಠವಾದಿ ಮನೋಭಾವ ಇತರರಿಗೆ ಕಿರಿ ಕಿರಿ ಎನಿಸಲಿದೆ. ವಾಹನಾದಿ ಸೌಕರ್ಯ ಖರೀದಿಗೆ ಇದು ಸಕಾಲ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
ಮಕರ: ಮನಸ್ಸು ಹೇಳಿದಂತೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗಲಿದೆ. ಹಳೆಯ ಸಂಬಂಧಗಳು ಮತ್ತೆ ಹೊಸ ರೂಪ ಪಡೆದೀತು. ಪ್ರೇಮಿಗಳ ಗುಟ್ಟು ಮನೆಯವರೆದುರು ಬಹಿರಂಗವಾಗಲಿದೆ.
ಕುಂಭ: ಮಹಿಳೆಯರಿಗೆ ಕೌಟುಂಬಿಕ ಹೊಣೆಗಾರಿಕೆ ಹೆಚ್ಚಲಿದೆ. ಮಾತಿನ ಮೇಲೆ ನಿಗಾ ಇರಲಿ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಕಟ್ಟಡ ಕಾಮಗಾರಿ ಕೆಲಸಗಳು ಮುಂದೂಡಿಕೆಯಾಗಬಹುದು.
ಮೀನ: ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ ಕೂಡಿಬರುವುದು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಅನಾರೋಗ್ಯವಾದೀತು. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.