ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನಿಮ್ಮೊಳಗಿನ ದ್ವಂದ್ವ ಭಾವನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯವಿದು. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ವ್ಯಾವಹಾರಿಕವಾಗಿ ಮುನ್ನಡೆ ಕಂಡುಬರುವುದು. ಹಿತಶತ್ರುಗಳಿಂದ ಪಾರಾಗಲಿದ್ದೀರಿ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದುವರಿಯುವ ಸವಾಲು ಎದುರಾಗಲಿದೆ. ಕ್ರಿಯಾತ್ಮಕ ಯೋಚನೆಗಳಿಗೆ ಬೆಲೆ ಸಿಗಲಿದೆ. ಕಳೆದು ಹೋದ ವಸ್ತುಗಳಿಗೆ ಹುಡುಕಾಟ ನಡೆಸಲಿದ್ದೀರಿ.
ಮಿಥುನ: ಹಿಂದೆ ಮಾಡಿದ ತಪ್ಪುಗಳು ನೆನಪಿಗೆ ಬಂದು ಮಾನಸಿಕವಾಗಿ ಬೇಸರಕ್ಕೊಳಗಾಗಲಿದ್ದೀರಿ. ಸಂಗಾತಿಯ ಸಾಂತ್ವನ ಹಿತ ನೀಡಲಿದೆ. ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಮಾತುಗಳಿಗೆ ಬೆಲೆ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಛಲಬಿಡದೇ ಮಾಡಿದ ಕೆಲಸಕ್ಕೆ ತಕ್ಕ ಪ್ರಿತಫಲ ಪಡೆಯಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.
ಸಿಂಹ: ಹಿರಿಯರ ಮಾತಿಗೆ ಬೆಲೆ ಕೊಡದೇ ಹೋದರೆ ಮುಂದೆ ತಕ್ಕ ಬೆಲೆ ತೆರಬೇಕಾದೀತು. ದಾಯಾದಿ ಕಲಹಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಕೋರ್ಟು ಕಚೇರಿ ಕಲಾಪಕ್ಕೆ ಸಿದ್ಧತೆ ನಡೆಸಲಿದ್ದೀರಿ. ತಾಳ್ಮೆಯಿರಲಿ.
ಕನ್ಯಾ: ತುರ್ತಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಯೋಚನೆ ಮಾಡಬೇಕಾದ ಸಮಯವಿದು. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಮಿತ್ರರ ಭೇಟಿಯಾಗಲಿದ್ದೀರಿ.
ತುಲಾ: ನಿರುದ್ಯೋಗಿಗಳು ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಭೂ ವ್ಯವಹಾರಗಳಲ್ಲಿ ವಂಚನೆ ಭೀತಿಯಿದೆ, ಎಚ್ಚರಿಕೆಯಿಂದಿರಿ. ಕುಲದೇವರ ಪ್ರಾರ್ಥನೆ ನಡೆಸಿ.
ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಮಾತುಗಳಿಗೆ ಬೆಲೆ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.
ಧನು: ಪ್ರೀತಿ ಪಾತ್ರರೊಂದಿಗೆ ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.
ಮಕರ: ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮೆಚ್ಚಿನ ವ್ಯಕ್ತಿಗಳನ್ನು ಭೇಟಿಯಾದ ಸಂತೋಷ ನಿಮ್ಮದಾಗುವುದು. ಹೊಸ ವ್ಯವಹಾರಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಕಾರ್ಯರಂಗದಲ್ಲಿ ಯಶಸ್ಸು ಸಿಗಲಿದೆ.
ಕುಂಭ: ವೃತ್ತಿ ಸಂಬಂಧವಾಗಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ. ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಮುನ್ನಡೆಯ ಯೋಗ. ಮಹಿಳೆಯರಿಗೆ ಸಹೋದದರೊಂದಿಗೆ ಭಿನ್ನಾಭಿಪ್ರಾಯ ಸಾಧ‍್ಯತೆಯಿದ್ದು, ಎಚ್ಚರಿಕೆಯಿಂದಿರಿ.
ಮೀನ: ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣ ಕಳೆಯುವ ಯೋಗ ನಿಮ್ಮದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಕಂಡುಬಂದೀತು. ಎಚ್ಚರಿಕೆಯಿಂದಿರಿ.