Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 8 ಆಗಸ್ಟ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾದೀತು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯದ ಕಾಳಜಿಯಿರಲಿ.

ವೃಷಭ: ನಿಮ್ಮ ಇಷ್ಟಾನುಸಾರ ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬದ ಇತರ ಸದಸ್ಯರ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆಯ ಯೋಗವಿದೆ. ತಾಳ್ಮೆಯಿರಲಿ.

ಮಿಥುನ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಸ್ವಯಂ ವೃತ್ತಿಯವರಿಗೆ ಹಿತ ಶತ್ರುಗಳಿಂದ ಕೊಂಚ ಹಿನ್ನಡೆಯಾದೀತು. ತಾಳ್ಮೆ, ಸಂಯಮದಿಂದಿರಿ. ಕಿರು ಸಂಚಾರ ಮಾಡಲಿದ್ದೀರಿ.

ಕರ್ಕಟಕ: ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಚಿಂತಿಸುತ್ತಾ ಕೂರುವುದರಲ್ಲಿ ಪ್ರಯೋಜನವಿಲ್ಲ. ನಿಮ್ಮ ಮಾತಿನಿಂದಲೇ ನೀವು ಇತರರ ಗಮನ ಸೆಳೆಯಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ.

ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವೈಯಕ್ತಿಕ ಹಿತ ತ್ಯಾಗ ಮಾಡುವ ಸನ್ನಿವೇಶ ಎದುರಾದೀತು. ಮನಸ್ಸಿನಲ್ಲಿ ಅಂದುಕೊಂಡಿದ್ದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ.

ಕನ್ಯಾ: ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಕಾರ್ಯರಂಗದಲ್ಲಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಕೃಷಿಕರಿಗೆ ವ್ಯವಹಾರಕ್ಕೆ ಅನುಕೂಲಕರ ವಾತಾವರಣವಿರಲಿದೆ.

ತುಲಾ: ಉದ್ಯೋಗ ಸಂಬಂಧವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಿದ್ಧೀರಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಂತಾನ ಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ.

ವೃಶ್ಚಿಕ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಸಹೋದರರೊಂದಿಗೆ ಅನಗತ್ಯ ಸಂಘರ್ಷ ಬೇಡ. ಕುಲದೇವರ ಪ್ರಾರ್ಥನೆ ಮಾಡಿರಿ.

ಧನು: ಬೇರೆಯವರ ವಿಚಾರಗಳಲ್ಲಿ ಅನಗತ್ಯ ಮೂಗು ತೂರಿಸಲು ಹೋಗಿ ನಿಷ್ಠುರಕ್ಕೆ ಗುರಿಯಾಗಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಯಲಿದ್ದು, ಬಂಧು ಮಿತ್ರರ ಒಡನಾಟದಿಂದ ಮನಸ್ಸಿಗೆ ಸಂತೋಷವಾಗಲಿದೆ. ವ್ಯಾವಹಾರಿಕವಾಗಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ದೂರ ಸಂಚಾರ ಮಾಡಲಿದ್ದೀರಿ.

ಕುಂಭ: ವಾಹನ, ಭೂಮಿ ಖರೀದಿ ವ್ಯವಹಾರದಲ್ಲಿ ಲಾಭವಾಗಲಿದೆ. ಬಂಡವಾಳ ಹೂಡಿಕೆ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬಂದೀತು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.

ಮೀನ: ಕೌಟುಂಬಿಕವಾಗಿ ನಿಮ್ಮ ಅಭಿಪ್ರಾಯಗಳಿಗೆ ಕುಟುಂಬ ಸದಸ್ಯರ ಸಹಮತ ಸಿಗಲಿದೆ. ನಿಮ್ಮ ಭವಿಷ್ಯಕ್ಕಾಗಿ ಕೆಲವೊಂದು ಯೋಜನೆ ಹಾಕಿಕೊಳ್ಳಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ತಾಳ್ಮೆಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ