Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 1 ಆಗಸ್ಟ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಮನದಿಂಗಿತ ಪೂರೈಸಲು ಯಾವುದೇ ಹಂತಕ್ಕೆ ಹೋಗಲೂ ಸಿದ್ಧರಿರುತ್ತೀರಿ. ಸಾಂಸಾರಿಕವಾಗಿ ಪತ್ನಿಯೊಂದಿಗೆ ಮಾತಿಗಿಂತ ಮೌನವೇ ಲೇಸು. ಮನೆಗೆ ಅತಿಥಿಗಳ ಆಗಮನದ ಸಾಧ‍್ಯತೆಯಿದೆ.

ವೃಷಭ: ನಿಮ್ಮ ಕಳೆದು ಹೋದ ವಸ್ತುಗಳು ತಾನಾಗಿಯೇ ಮರಳಿ ಕೈಸೇರುವ ಯೋಗವಿದೆ. ಇಷ್ಟಮಿತ್ರರೊಂದಿಗೆ ಭೋಜನ, ಕಿರು ಪ್ರವಾಸ ಇತ್ಯಾದಿ ಸಂಭವವಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.

ಮಿಥುನ: ನಿಮ್ಮ ಪರೋಪಕಾರಿ ಗುಣ ಮಿತ್ರ ವರ್ಗದವರಿಂದ ಪ್ರಶಂಸೆಗೊಳಗಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಧಾರ್ಮಿಕ ಕೆಲಸಗಳನ್ನು ನೆರವೇರಿಸಲು ಧನ ವ್ಯಯವಾದೀತು.

ಕರ್ಕಟಕ: ಹಳೆಯ ಮಿತ್ರರ ಭೇಟಯಿಂದ ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಲಿದೆ. ಸ್ವಯಂ ವೃತ್ತಿಯವರಿಗೆ ಅಪರಿಚಿತರಿಂದ ವಂಚನೆ ಸಂಭವವಿದೆ. ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿರಲಿ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವೊಂದು ಅನಾಹುತ ತಪ್ಪಿಸಲಾಗದು. ಆತ್ಮೀಯರ ಕಷ್ಟದಲ್ಲಿ ಸಹಭಾಗಿಯಾಗಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ತಾಳ್ಮೆಯಿರಲಿ.

ಕನ್ಯಾ: ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿ ಮಾಡುವ ಯೋಗ ಕೂಡಿಬರುವುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ಚಿಂತೆ ಬೇಡ.

ತುಲಾ: ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಜಾರಿಗೆ ತರಲು ಮನೆಯವರ ಒಪ್ಪಿಗೆ ಪಡೆಯಲಿದ್ದೀರಿ. ಪ್ರೇಮಿಗಳಿಗೆ ಮನೆಯವರಿಂದ ಒಪ್ಪಿಗೆ ಸಿಗಲಿದೆ. ಯಂತ್ರೋಪಕರಣ ಕೆಲಸ ಮಾಡುವವರಿಗೆ ಬಿಡುವಿನ ದಿನದ ಖುಷಿ ಸಿಗಲಿದೆ.

ವೃಶ್ಚಿಕ: ಅನಗತ್ಯ ಯೋಚನೆಗಳನ್ನು ಬದಿಗಿಟ್ಟು ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯಲಿದ್ದೀರಿ. ಮಕ್ಕಳ ಬಹುದಿನಗಳ ಬೇಡಿಕೆ ಪೂರ್ತಿ ಮಾಡುವಿರಿ. ಅನಿರೀಕ್ಷಿತವಾಗಿ ನೆಂಟರಿಷ್ಟರ ಭೇಟಿ ಸಾಧ‍್ಯತೆ. ಸಂತೋಷವಿರಲಿದೆ.

ಧನು: ನಿಮ್ಮ ಮಾತುಗಳಿಂದ ಇತರರ ಮನಸ್ಸಿಗೆ ನೋವಾದೀತು. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷ ಬೇಡ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ತೋರದೇ ಹೋದಲ್ಲಿ ಫಲಿತಾಂಶ ಸಿಗದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಕೆಳ ಹಂತದ ನೌಕರರಿಗೆ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಜಮೀನು ಖರೀದಿ, ಮಾರಾಟ ವ್ಯವಹಾರಕ್ಕೆ ಮುಂದಾಗಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕಿರು ಸಂಚಾರ ಮಾಡಬೇಕಾಗಬಹುದು.

ಕುಂಭ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ವ್ಯಾಪಾರಿಗಳಿಗೆ ಅಭಿವೃದ್ಧಿದಾಯಕ ವಾತಾವರಣವಿರಲಿದೆ. ವಿಚಾರವಂತರ ಮಾತು, ಸಂಘದಿಂದ ಮನಸ್ಸಿಗೆ ನೆಮ್ಮದಿಯಾಗುವುದು.

ಮೀನ: ಅನಿರೀಕ್ಷಿತವಾಗಿ ಎದುರಾಗುವ ವ್ಯಕ್ತಿಯಿಂದ ನಿಮಗೆ ಲಾಭವಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ದೇಹಾಯಾಸವಾದೀತು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ದೇವತಾ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ