Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 31 ಜುಲೈ 2021 (08:39 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ವಾಸ್ತವ ಸ್ಥಿತಿ ಅರಿತು ಮುನ್ನಡೆಯುವ ಪರಿಸ್ಥಿತಿ ಎದುರಾಗಲಿದೆ. ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ಮನೆಯವರ ಮುಂದೆ ತೋರಿಸಿಕೊಳ‍್ಳಲ್ಲ. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಖರ್ಚು ವೆಚ್ಚ ಮಾಡಲಿದ್ದೀರಿ.

ವೃಷಭ: ನಿಮ್ಮ ಮಾತುಗಳು ಇನ್ನೊಬ್ಬರಿಗೆ ಇರಿಸುಮುರಿಸು ಉಂಟುಮಾಡಬಹುದು. ಮಾತಿನ ಮೇಲೆ ನಿಗಾ ಇರಲಿ. ಪ್ರೀತಿ ಪಾತ್ರರ ಅಭಿಪ್ರಾಯಗಳಿಗೆ ಬೆಲೆಕೊಡಬೇಕಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ: ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಬಂದೋಬಸ್ತ್ ಮಾಡಿಕೊಳ್ಳಿ. ಗೃಹ ನಿರ್ಮಾಣ, ಕಟ್ಟಡ ಕಾಮಗಾರಿ ಕೆಲಸಗಳನ್ನು ಆರಂಭಿಸಲು ಕೆಲವು ದಿನ ಕಾಯುವುದು ಉತ್ತಮ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

ಕರ್ಕಟಕ: ಅಧಿಕ ಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಪಡಿಸುವ ತುರ್ತು ಅಗತ್ಯ ನಿಮ್ಮದಾಗಿರುತ್ತದೆ. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ ಮುನ್ನಡೆದರೆ ಉತ್ತಮ. ತಾಳ್ಮೆಯಿರಲಿ.

ಸಿಂಹ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ನಿಮ್ಮದಲ್ಲದ ವಸ್ತುವಿನ ಬಗ್ಗೆ ಅತಿಯಾದ ವ್ಯಾಮೋಹ ಇಟ್ಟುಕೊಳ್ಳಬೇಡಿ. ಕೃಷಿಕರಿಗೆ ವ್ಯವಹಾರ ಮತ್ತೆ ಮೊದಲಿನಂತಾಗುವುದು. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ ಕೂಡಿಬರಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಇಷ್ಟಮಿತ್ರರೊಂದಿಗೆ ಭೋಜನ ಮಾಡುವ ಯೋಗ ಕೂಡಿಬರಲಿದೆ. ಕಿರು ಸಂಚಾರ ಮಾಡುವಿರಿ.

ತುಲಾ: ನಿಮ್ಮ ದುಂದು ವೆಚ್ಚ ಮಾಡುವ ಸ್ವಭಾವ ನಿಮಗೇ ಮುಳುವಾದೀತು. ಹಿತ ಶತ್ರುಗಳನ್ನು ಗುರುತಿಸಿ ದೂರವಿದ್ದರೆ ಉತ್ತಮ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಮಾಡಲಿದ್ದೀರಿ.

ವೃಶ್ಚಿಕ: ಮನೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಉತ್ತಮ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಧನು: ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳಲು ಪರದಾಡುವಂತಾದೀತು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿರುದ್ಯೋಗಿಗಳು ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಪಡೆಯಲಿದ್ದಾರೆ.

ಮಕರ: ನಿಮ್ಮ ನೇರ ಮಾತು, ನುಡಿ ಇತರರಿಗೆ ಇಷ್ಟವಾಗದೇ ಹೋದೀತು. ಮಾತಿನ ಮೇಲೆ ನಿಗಾ ಇರಲಿ. ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾದೀತು. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.

ಮೀನ: ಅನಗತ್ಯ ಚಿಂತೆಗಳನ್ನು ಬಿಟ್ಟು ಕಾರ್ಯಪ್ರವೃತ್ತರಾಗುವುದತ್ತ ಗಮನ ಕೊಡಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳಾದೀತು. ಆದರೂ ಚಿಂತೆ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ