ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನಿಮ್ಮ ಕೈಲಾಗದ ಕೆಲಸ ಮಾಡುವ ಅನಗತ್ಯ ದುಸ್ಸಾಹಸಕ್ಕೆ ಕೈಹಾಕಬೇಡಿ. ಭವಿಷ್ಯದ ದೃಷ್ಟಿಯಿಂದ ಆರ್ಥಿಕ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಮುನ್ನಡೆಯ ಯೋಗವಿದೆ. ತಾಳ್ಮೆಯಿರಲಿ.
ವೃಷಭ: ನಿಮ್ಮ ಮುಂಗೋಪವೇ ನಿಮಗೆ ಶತ್ರುವಾಗಲಿದೆ. ಆತುರದ ಕೈಗೆ ಬುದ್ಧಿ ಕೊಟ್ಟು ನಿರ್ಧಾರ ತೆಗೆದುಕೊಳ್ಳಲು ಹೋದರೆ ಸಂಬಂಧಗಳು ಹಾಳಾದೀತು, ಎಚ್ಚರಿಕೆಯಿರಲಿ. ಮನೆಗೆ ಅತಿಥಿಗಳ ಆಗಮನವಾದೀತು.
ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ಮಾಡಲಿದ್ದು, ಮಂಗಳ ವಸ್ತ್ರ ಖರೀದಿ ಮಾಡಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ದವಾಗಿರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಸಂಯಮ ಅಗತ್ಯ.
ಕರ್ಕಟಕ: ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಕುಲದೇವರ ಸೇವೆ ಮಾಡಲು ಮುಂದಾಗಲಿದ್ದೀರಿ. ನಿರುದ್ಯೋಗಿಗಳಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕಾರ್ಯವಿರಲಿದೆ.
ಸಿಂಹ: ಮಹಿಳೆಯರಿಗೆ ಸ್ಥಾನ ಮಾನ ವೃದ್ಧಿಸಿಕೊಳ್ಳಲು ಸೂಕ್ತ ಅವಕಾಶಗಳು ಸಿಗಲಿವೆ. ಎಷ್ಟೋ ದಿನದಿಂದ ಬಯಸಿದ್ದ ವಸ್ತುಗಳು ತಾನಾಗಿಯೇ ಕೈ ಸೇರಲಿದೆ. ಮಾತಿನ ಮೇಲೆ ನಿಗಾ ಇರಲಿ. ಕಿರು ಸಂಚಾರ ಮಾಡಲಿದ್ದೀರಿ.
ಕನ್ಯಾ: ಇನ್ನೊಬ್ಬರ ಬಗೆಗಿನ ನಿಮ್ಮ ಕಾಳಜಿ ಮನೋಭಾವದಿಂದ ನಿಮಗೆ ಮುಂದೊಂದು ದಿನ ಒಳಿತಾಗಲಿದೆ. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡಿ ಸಂತೋಷಪಡಿಸಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.
ತುಲಾ: ದೀರ್ಘ ಕಾಲದ ಸಮಸ್ಯೆಗೆ ಮುಕ್ತಿ ಸಿಗಬೇಕಾದರೆ ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಸಹವರ್ತಿಗಳ ಜೊತೆ ಸಂಯಮದಿಂದ ವರ್ತಿಸಿ. ಹಿರಿಯರಿಗೆ ತೀರ್ಥ ಯಾತ್ರೆ ಕೈಗೊಳ್ಳುವ ಕನಸು ಸದ್ಯದಲ್ಲೇ ನನಸಾಗಲಿದೆ.
ವೃಶ್ಚಿಕ: ಮಾನಸಿಕವಾಗಿ ಇಲ್ಲಸಲ್ಲದ ಯೋಚನೆ ಮಾಡುವುದನ್ನು ಬಿಟ್ಟು ಕಾರ್ಯಪ್ರವೃತ್ತರಾಗಿ. ಬೇರೆಯವರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಕೆಟ್ಟ ಕುತೂಹಲ ಬೇಡ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ.
ಧನು: ನಿಮ್ಮ ಬಹುದಿನಗಳ ಕನಸು ಇಂದು ತಾನಾಗಿಯೇ ನೆರವೇರಲಿದೆ. ಅನಗತ್ಯ ಮಾನಸಿಕ ಗೊಂದಲಗಳಿಗೆ ಎಡೆ ಮಾಡಕೊಡದಿರಿ. ಸಂಗಾತಿಗೆ ಸಾಂತ್ವನದ ಮಾತು ಹೇಳಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರೆ ಉತ್ತಮ.
ಮಕರ: ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಅಭ್ಯಾಸಕ್ಕೆ ಪೂರಕವಾದ ಕೆಲಸ ಮಾಡಬೇಕಾಗುತ್ತದೆ. ಹಿರಿಯರ ಹಿತವಚನಗಳು ಬೇಸರವೆನಿಸೀತು. ತಾಳ್ಮೆ, ಸಂಯಮ ಅಗತ್ಯ. ದೇಹಾರೋಗ್ಯದಲ್ಲಿ ಸುಧಾರಣೆಯಿರಲಿದೆ.
ಕುಂಭ: ವ್ಯಾಪಾರಿ ವರ್ಗದವರಿಗೆ ಅನುಕೂಲಕರ ವಾತಾವರಣವಿರಲಿದೆ. ಮನಸ್ಸಿನಲ್ಲಿ ಕಾಡುತ್ತಿದ್ದ ಗೊಂದಲಗಳಿಗೆ ಆಪ್ತರಿಂದ ಪರಿಹಾರ ಸಿಗಲಿದೆ. ಧಾರ್ಮಿಕ ಕಾರ್ಯಗಳಿಗೆ ಹಣಕಾಸಿನ ಖರ್ಚು ವೆಚ್ಚವಾದೀತು. ದೇವತಾ ಪ್ರಾರ್ಥನೆ ಮಾಡಿ.
ಮೀನ: ಜೀವನದಲ್ಲಿ ಇಂದು ಕೆಲವು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗಲಿದ್ದೀರಿ. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಮರು ಚಾಲನೆ ನೀಡಲಿದ್ದೀರಿ. ಚಿಂತೆ ಬೇಡ.