Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 28 ಜುಲೈ 2021 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಕಾರ್ಯತಂತ್ರಗಳು ಕೈಕೊಡಲಿವೆ. ನಿಗದಿತ ಸಮಯದಲ್ಲಿ ಕೆಲಸ ಪೂರ್ತಿ ಮಾಡಲಾಗದೇ ತೊಂದರೆ ಅನುಭವಿಸಬೇಕಾದೀತು. ಸನ್ಮಿತ್ರರ ಸಹಾಯ ಪಡೆಯಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ನಿಮ್ಮ ಇಷ್ಟ ವಸ್ತುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ನ್ಯಾಯ ಪಂಚಾಯ್ತಿಯಲ್ಲಿ ನಾಯಕತ್ವ ವಹಿಸಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಿಗೆ ಸಿದ್ಧರಾಗಿ.

ಮಿಥುನ: ದೈವ ಬಲದಿಂದ ನಿಮ್ಮ ಕಾರ್ಯ ಸಾಧನೆಗೆ ತೊಂದರೆಯಾಗದು. ಆದರೆ ನಯವಂಚಕರಿಂದ ದೂರವಿರುವುದೇ ಉತ್ತಮ. ವ್ಯವಹಾರದಲ್ಲಿ ಅಡ್ಡಿ ಆತಂಕಗಳು ಎದುರಾದರೂ ಅಂತಿಮ ಯಶಸ್ಸು ನಿಮ್ಮದಾಗಲಿದೆ.

ಕರ್ಕಟಕ: ನಿಮ್ಮನ್ನು ಕಷ್ಟಕ್ಕೆ ದೂಡಿ ನಗುವವರ ಸಹವಾಸದಿಂದ ಬೇಸತ್ತು ಹೋಗಲಿದ್ದೀರಿ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ.

ಸಿಂಹ: ವ್ಯಾವಹಾರಿಕವಾಗಿ ನಿಮ್ಮನ್ನು ಯಾರೂ ಮೋಸ ಮಾಡಲಾಗದು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದೆ. ತಾಳ್ಮೆ, ಸಂಯಮ ಅಗತ್ಯ.

ಕನ್ಯಾ: ಹಲವಾರು ವಿಚಾರಗಳನ್ನು ತಲೆಯಲ್ಲಿ ಓಡುತ್ತಿದ್ದು, ಯಾವುದಕ್ಕೆ ಪ್ರಾಶಸ್ತ್ಯತೆ ಕೊಡಬೇಕೆಂಬ ಗೊಂದಲ ಕಾಡೀತು. ನಿಮ್ಮ ನಿತ್ಯದ ಆಗುಹೋಗುಗಳ ಬಗ್ಗೆ ಗಮನವಿರಲಿ. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ.

ತುಲಾ: ಬಾಯಿ ತಪ್ಪಿ ಆಡುವ ಮಾತುಗಳಿಗೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ವೈಯಕ್ತಿಕವಾಗಿ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳುವುದು ಬೇಡ. ವ್ಯಾವಹಾರಿಕವಾಗಿ ಮುನ್ನಡೆ ಕಂಡಬಂದೀತು. ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ.

ವೃಶ್ಚಿಕ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ನಿಮ್ಮ ಹಿಂದೆ ಪಿತೂರಿ ನಡೆಸುವವರ ಸಂಚುಗಳು ಬಯಲಾಗಲಿವೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಮನೆಗೆ ಬಂಧು ಮಿತ್ರರ ಆಗಮನ ಸಾಧ್ಯತೆ.

ಧನು: ಅನೇಕರ ಅಭಿಪ್ರಾಯಗಳಿಗೆ ಕಿವಿಗೊಡುತ್ತಾ ಕೂತರೆ ಗೊಂದಲಗಳೇ ಅಧಿಕವಾದೀತು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಕ್ಕಳ ವಿಚಾರದಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ. ದೇವರ ಪ್ರಾರ್ಥನೆ ಮುಖ್ಯ.

ಮಕರ: ಕೈಗೆ ಸಿಕ್ಕ ವಸ್ತು ಬಾಯಿಗೆ ಬರದ ಸ್ಥಿತಿ ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವ್ಯಾಪಾರೀ ವರ್ಗದವರಿಗೆ ಹೊಸ ವ್ಯವಹಾರದ ಯೋಚನೆ ಹುಟ್ಟಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಉಸಿರುಕಟ್ಟಿದ ವಾತಾವರಣವಿದೆಯೆನಿಸಬಹುದು. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು. ದಿನದಂತ್ಯಕ್ಕೆ ನೆಮ್ಮದಿ.

ಮೀನ: ವೃತ್ತಿ ಸಂಬಂಧವಾದ ಸಮಸ್ಯೆಗಳನ್ನು ಮನೆಯಲ್ಲಿ ತೋರಿಸಲು ಹೋಗಿ ವೈಮನಸ್ಯಕ್ಕೆ ಕಾರಣವಾಗುವಿರಿ. ಆರ್ಥಿಕವಾಗಿ ಧನಗಳಿಕೆಗೆ ಅನ್ಯ ಮಾರ್ಗಗಳತ್ತ ಚಿಂತನೆ ನಡೆಸಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ