Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 27 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನಸ್ಸಿನಲ್ಲಿ ಇರುವುದೆಲ್ಲವೂ ಈಚೆ ಹಾಕಬೇಕೆನ್ನುವ ಬಯಕೆಯಾದೀತು. ನಿಮ್ಮ ಮಾತುಗಳಿಂದ ಬೇರೆಯವರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ನಿಮ್ಮದಲ್ಲದ ವಸ್ತುವಿನ ಬಗ್ಗೆ ಅತಿಯಾದ ವ್ಯಾಮೋಹ ಬೇಡ. ಪ್ರೀತಿ ಪಾತ್ರರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮಿಥುನ: ನಿಮ್ಮ ಮನೋಕಾಮನೆಗಳನ್ನು ಪೂರ್ತಿ ಮಾಡಲು ಮುಂದಾಗಲಿದ್ದೀರಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯ ಯೋಗವಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಹಿರಿಯರಿಗೆ ಆರೋಗ್ಯದಲ್ಲಿ ಸುಧಾರಣೆಯಿರಲಿದೆ.

ಕರ್ಕಟಕ: ನಿಮ್ಮ ಕಷ್ಟಕ್ಕೆ ಹಿಂದೆ ಸ್ಪಂದಿಸಿದವರಿಗೆ ಋಣ ಸಂದಾಯ ಮಾಡುವ ಯೋಗ ನಿಮ್ಮದಾಗುವುದು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ವಾಹನ ಸಂಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ನಿಮ್ಮ ಮನಸ್ಸು ಹೇಳಿದಂತೆ ನಿರ್ಧಾರ ಕೈಗೊಳ್ಳಲಿದ್ದೀರಿ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುಣ ನಿಮಗೆ ಮುಂದೊಂದು ದಿನ ಒಳಿತು ಮಾಡಲಿದೆ. ಹಿರಿಯರ ಸಲಹೆಗಳು ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರಲಿದೆ.

ಕನ್ಯಾ: ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಸರಿಯಾದ ರೀತಿಯಲ್ಲಿ ಭವಿಷ್ಯಕ್ಕೆ ಯೋಜನೆ ರೂಪಿಸಬೇಕಾಗುತ್ತದೆ. ಇಷ್ಟಮಿತ್ರರ ಭೇಟಿಯಾಗುವ ಯೋಗ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ತುಲಾ: ನೀವು ಎಷ್ಟೇ ದುಡಿದರೂ ಅದರ ಫಲ ಕೈಗೆಟುಕುತ್ತಿಲ್ಲ ಎಂಬ ನಿರಾಸೆ ಕಾಡೀತು. ಹಿಂದಿನ ಬಾಕಿ ಹರಕೆಗಳನ್ನು ಪೂರ್ತಿ ಮಾಡಲು ಮುಂದಾಗುವಿರಿ. ಯೋಗ್ಯ ವಯಸ್ಕರು ಸೂಕ್ತ ವೈವಾಹಿಕ ಸಂಬಂಧಕ್ಕೆ ಕಾಯುವುದು ಉತ್ತಮ.

ವೃಶ್ಚಿಕ: ನಿಮ್ಮ ದೈನಂದಿನ ವ್ಯವಹಾರಕ್ಕೆ ಅನಿರೀಕ್ಷಿತವಾಗಿ ಅಡ್ಡಿ ಎದುರಾಗಲಿದೆ. ಕಾರ್ಯಾರಂಭದಲ್ಲೇ ವಿಘ್ನಭೀತಿ ಎದುರಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ‍್ಯಾಸ ಮಾಡುವುದು ಮುಖ್ಯ.

ಧನು: ಮನೆಗೆ ಸಂಬಂಧಿಸಿದಂತೆ ಹೊಸ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ, ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಮಕ್ಕಳ ಅಭಿಪ್ರಾಯಗಳಿಗೂ ಬೆಲೆ ಕೊಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಮಕರ: ನಿಮ್ಮ ವಿಚಾರಗಳನ್ನು ಇತರರ ಮೇಲೆ ಹೇರಲು ಹೋಗಬೇಡಿ. ಹಿರಿಯರೊಂದಿಗೆ ಸಂಘರ್ಷಕ್ಕಿಳಿಯದಿದ್ದರೆ ಉತ್ತಮ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತಿಗೇರುವ ಅವಕಾಶ ಸಿಗಲಿದೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

ಕುಂಭ: ಪಾಲಿಗೆ ಬಂದಿದ್ದು ಪಂಚಾಮೃತ ಎಂದು ನಡೆದುಕೊಳ್ಳಬೇಕಾಗುತ್ತದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಒಳಿತು. ವ್ಯಾಪಾರಿಗಳಿಗೆ ಲಾಭವೂ ಅಲ್ಲದ, ನಷ್ಟವೂ ಅಲ್ಲದ ದಿನವಾಗಲಿದೆ.

ಮೀನ: ನಿಮ್ಮ ಆದಾಯದ ಮೂಲಕ್ಕೆ ಪೆಟ್ಟು ಬೀಳಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ