Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 25 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿಂದೆ ಆದ ಬೇಸರದ ವಿಚಾರಗಳನ್ನು ಮರೆತು ಮುನ್ನಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬಂದೀತು.

ವೃಷಭ: ಯಾವುದೇ ವಿಚಾರವಾದರೂ ಹಿಂದೆ ಮುಂದೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆ ಎದುರಿಸಬೇಕಾದೀತು. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಮಿಥುನ: ಆರ್ಥಿಕವಾಗಿ ಕೈಗೊಳ್ಳಬೇಕಾಗಿದ್ದ ಯೋಜನೆಗಳು ಅರ್ಧಕ್ಕೇ ಸ್ಥಗಿತವಾಗಲಿದೆ. ಹೊಸ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಗೆ ಭಂಗವಾದೀತು. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ.

ಕರ್ಕಟಕ: ಮನೆಯಲ್ಲಿ ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಸಂತೋಷವಿರಲಿದೆ. ಆದರೆ ಆಕಸ್ಮಿಕ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಪ್ರೇಮಿಗಳಿಗೆ ಇಷ್ಟಪಟ್ಟವರ ಜೊತೆ ಮನದಾಳ ಹಂಚಿಕೊಳ್ಳುವ ಅವಕಾಶ ಸಿಗಲಿದೆ.

ಸಿಂಹ: ಇಂದು ವಿಶೇಷ ವ್ಯಕ್ತಿಯ ಭೇಟಿಯಿಂದ ನಿಮ್ಮ ಕಾರ್ಯ ಸಾಧನೆಗೆ ಅನುಕೂಲವಾಗಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ದಾರಿ ಕಂಡುಕೊಳ್ಳಲಿದ್ದಾರೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಚಿಂತೆ ಬೇಡ.

ಕನ್ಯಾ: ಸಕಾರಾತ್ಮಕ ಮನೋಭಾವದಿಂದ ನೀವು ಕೈ ಹಿಡಿಯುವ ಯಾವುದೇ ಕೆಲಸಗಳೂ ಇಂದು ಯಶಸ್ವಿಯಾಗಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ ಕೂಡಿಬರಲಿದೆ.

ತುಲಾ: ನಿಮ್ಮ ಮನಸ್ಸಿನಲ್ಲಿ ಓಡುವ ಯೋಚನೆಗಳಿಂದ ಜೊತೆಗಿದ್ದವರ ಮೇಲೆ ಅಸಮಾಧಾನ ತೋರಲು ಹೋಗಬೇಡಿ. ಕೌಟುಂಬಿಕ ಸಂಬಂಧಗಳು ಕಾಪಾಡುವ ಹೊಣೆ ನಿಮ್ಮ ಮೇಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಕಾರ್ಯರಂಗದಲ್ಲಿ ನಿಮ್ಮ ಉನ್ನತಿಗೆ ಮಹತ್ವದ ಹೆಜ್ಜೆಯಿಡಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆಬರಲಿದೆ. ತಾಳ್ಮೆಯಿಂದ ಯೋಚಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಧನು: ನಿಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರಲು ಹೋಗಬೇಡಿ. ಮಕ್ಕಳ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ಕೊಡಿ. ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಿಗಲಿದೆ.

ಮಕರ: ನೆರೆಹೊರೆಯವರು ನಿಮ್ಮ ಮನೆ ವಿಚಾರದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ವಾಹನಾದಿ ಸೌಕರ್ಯ ಖರೀದಿಸಲು ಕೆಲವು ಸಮಯ ಕಾಯುವುದು ಉತ್ತಮ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ.

ಕುಂಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ. ವ್ಯಾಪಾರಿಗಳಿಗೆ ಚೇತರಿಕೆಯ ವಾತಾವರಣ ಕಂಡುಬರುವುದು.

ಮೀನ: ಅಂದುಕೊಂಡಿದ್ದ ಕೆಲಸಗಳು ನಡೆಯುತ್ತಿಲ್ಲ ಎಂಬ ಅಸಮಾಧಾನ ನಿಮ್ಮನ್ನು ಕಾಡಲಿದೆ. ಹಳೆಯ ಬಾಕಿ ವಸೂಲಾತಿ ಚಿಂತೆ ಕಾಡುವುದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಲಿದ್ದೀರಿ. ಮನೆಗೆ ಬಂಧುಮಿತ್ರರ ಆಗಮನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ