Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 24 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅತಿಯಾಗಿ ಇನ್ನೊಬ್ಬರ ಬಗ್ಗೆ ಯೋಚಿಸುವುದು, ನಡೆದು ಹೋದ ಘಟನೆಗಳ ಬಗ್ಗೆ ಯೋಚಿಸುವುದರಿಂದ ಮನಸ್ಸು ಮತ್ತಷ್ಟು ಗೊಂದಲಕ್ಕೀಡಾದೀತು. ಆರ್ಥಿಕವಾಗಿ ಬರಬೇಕಾದ ಬಾಕಿ ಹಣ ವಸೂಲಾತಿ ಬಗ್ಗೆ ಚಿಂತಿಸಲಿದ್ದೀರಿ. ತಾಳ್ಮೆಯಿರಲಿ

ವೃಷಭ: ವ್ಯಾಪಾರ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಲ್ಲಿ ಬೇರೆಯವರು ಮೂಗು ತೂರಿಸುವುದರಿಂದ ಕಿರಿ ಕಿರಿಯಾದೀತು. ನಿಮ್ಮ ವಸ್ತುವಿನ ಬಗ್ಗೆ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಹಿರಿಯರಿಂದ ಬಂದ ಬಳವಳಿ ಸಂರಕ್ಷಿಸುವ ಹೊಣೆಗಾರಿಕೆ ಹೆಗಲಿಗೇರಲಿದೆ.

ಮಿಥುನ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಕ್ರಿಯಾತ್ಮಕವಾಗಿ ಯೋಚಿಸುವುದರಿಂದ ಮನಸ್ಸಿಗೆ ಹೊಸ ಉಲ್ಲಾಸ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಹಿರಿಯರೊಂದಿಗೆ ಅನಗತ್ಯ ಸಂಘರ್ಷ ತಪ್ಪಿಸಿದರೆ ಉತ್ತಮ. ಸಹೋದರರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉನ್ನತಿಯ ಯೋಗವಿದೆ. ಅನಗತ್ಯ ಚಿಂತೆ ಬೇಡ.

ಸಿಂಹ: ವಿಚಿತ್ರ ಅನುಭವಗಳು ಇಂದು ನಿಮಗೆ ಎದುರಾಗಲಿದೆ. ಅಪರಿಚಿತರಿಂದಲೂ ನಿಮ್ಮ ಕಾರ್ಯ ಸಾಧನೆಗೆ ಸಹಾಯವಾದೀತು. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಪಡೆಯಲು ನಿಮ್ಮ ಪ್ರಯತ್ನ ಮುಂದುವರಿಸಬೇಕಾಗುತ್ತದೆ.

ಕನ್ಯಾ: ಮನಸ್ಸಿನಲ್ಲಿ ಮೂಡುವ ವಿವಿಧ ಆಲೋಚನೆಗಳಿಗೆ ಆಪ್ತರಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚುವುದು.

ತುಲಾ: ಕಷ್ಟದ ಸಮಯದಲ್ಲಿ ಹಿಂದೆ ನಿಮಗೆ ಸಹಾಯ ಮಾಡಿದವರಿಗೆ ಪ್ರತ್ಯುಪಕಾರ ಮಾಡುವ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಂತೋಷದ ವಾತಾವರಣವಿರಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ.

ವೃಶ್ಚಿಕ: ದಾಯಾದಿ ಕಲಹಗಳಿಗೆ ರಾಜೀ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಂಯ ಉದ್ಯೋಗದ ದಾರಿ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ. ದಿನದಂತ್ಯಕ್ಕೆ ನೆಮ್ಮದಿ.

ಧನು: ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಭವಿಷ್ಯದ ದೃಷ್ಟಿಯಿಂದ ಯೋಜನೆ ರೂಪಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ. ಮಂಗಳ ವಸ್ತ್ರ ಖರೀದಿ ದಿನ ಮುಂದೂಡಿಕೆಯಾಗಲಿದೆ.

ಮಕರ: ವ್ಯಾವಹಾರಿಕವಾಗಿ ಎಷ್ಟೇ ಅಡೆತಡೆಗಳಿದ್ದರೂ ನಿಮ್ಮ ಸ್ವ ಪ್ರಯತ್ನದಿಂದ ಕಾರ್ಯಸಾಧನೆಯಾಗಲಿದೆ. ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಡಿಮೆಯಾಗುವುದು.

ಕುಂಭ: ಕಾರ್ಯರಂಗದಲ್ಲಿ ಹೊಸ ಅವಕಾಶಗಳ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆಯುಂಟಾದೀತು. ಹಣ ಗಳಿಕೆಗೆ ಅನ್ಯ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ತಾಳ್ಮೆ, ಸಂಯಮವಿರಲಿ.

ಮೀನ: ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಯಾವುದೇ ನಿರ್ಧಾರ ಕೈಗೊಳ‍್ಳುವ ಮುನ್ನ ಸರಿಯಾಗಿ ಯೋಚಿಸಿ ಮುನ್ನಡೆಯಿರಿ. ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯಗತಗೊಳಿಸಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ