Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 30 ಏಪ್ರಿಲ್ 2021 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಪ್ರಯತ್ನ ಬಲದ ಜೊತೆಗೆ ಅದೃಷ್ಟವಿದ್ದರೇ ಕಾರ್ಯಸಾಧನೆಯಾಗಲಿದೆ. ಆದಾಯದಲ್ಲಿ ಏರಿಳಿತವಾದರೂ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿದ್ದೀರಿ. ಅನಗತ್ಯ ಓಡಾಟದಿಂದ ದೇಹಾಯಾಸ ಮಾಡಿಕೊಳ್ಳಬೇಡಿ.

ವೃಷಭ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಾದೀತು. ನಿರುದ್ಯೋಗಿಗಳು ಸೂಕ್ತ ಉದ್ಯೋಗಕ್ಕಾಗಿ ಕೆಲವು ದಿನ ಕಾಯುವುದು ಒಳಿತು. ಸರ್ಕಾರಿ ಉದ್ಯೋಗಿಗಳ ಶ್ರಮ ಕಡಿಮೆಯಾಗಲಿದೆ. ಖರ್ಚು ವೆಚ್ಚಗಳು ನಿಯಂತ್ರಣದಲ್ಲಿರಲಿ.

ಮಿಥುನ: ಸ್ವಯಂ ವ್ಯಾಪಾರ, ವ್ಯವಹಾರಸ್ಥರಿಗೆ ನಷ್ಟದ ಭೀತಿ ಎದುರಾದೀತು. ಭವಿಷ್ಯದ ಬಗ್ಗೆ ಹೊಸ ಯೋಜನೆ ಹಾಕಿಕೊಳ್ಳಲಿದ್ದೀರಿ. ಮಕ್ಕಳಿಂದ ಸಂತಸ ಸಿಗಲಿದೆ. ಆಪ್ತೇಷ್ಟರ ಭೇಟಿಗಾಗಿ ಮನಸ್ಸು ಹಾತೊರೆಯಲಿದೆ.

ಕರ್ಕಟಕ: ಅನವಶ್ಯಕ ಯೋಜನೆಗಳನ್ನು ಹಾಕಿ ಹಣಕಾಸಿಗೆ ತೊಂದರೆ ತಂದುಕೊಳ್ಳಬೇಡಿ. ಕಷ್ಟದ ದಿನಗಳನ್ನು ಎದುರಿಸಲು ಸಿದ್ಧರಾಗಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯಲಿದ್ದೀರಿ.

ಸಿಂಹ: ಕೋಪ-ತಾಪಗಳಿಂದ ಆಡುವ ಮಾತು, ವರ್ತನೆಯಿಂದ ಆಪ್ತರೊಂದಿಗೆ ವೈಮನಸ್ಯವಾದೀತು. ತಾಳ್ಮೆ ,ಸಂಯಮ ಅಗತ್ಯ. ದೈನಂದಿನ ಕೆಲಸಗಳಲ್ಲಿ ಬದಲಾವಣೆಯಾಗಲಿದೆ. ವರ್ತಕ ವರ್ಗದವರಿಗೆ ಕೊಂಚ ಬಿಡುವಿನ ವೇಳೆ ದೊರೆಯಲಿದೆ.

ಕನ್ಯಾ: ದೂರ ಪ್ರಯಾಣಗಳನ್ನು ಅನಿವಾರ್ಯವಾಗಿ ಮುಂದೂಡಲಿದ್ದೀರಿ. ಅನ್ಯರು ನಿಮ್ಮ ಸಾಂಸಾರಿಕ ವಿಷಯದಲ್ಲಿ ಮೂಗು ತೂರಿಸದಂತೆ ಎಚ್ಚರಿಕೆ ವಹಿಸಿ. ಸಾಲ ಪಾವತಿ ಬಗ್ಗೆ ಚಿಂತೆಯಾದೀತು. ಧನಗಳಿಕೆಯ ಮೂಲ ಹುಡುಕಲಿದ್ದೀರಿ.

ತುಲಾ: ನಿಮ್ಮ ಕೆಲಸ ಕಾರ್ಯಗಳಿಗೆ ಹಲವಾರು ವಿಘ್ನಗಳು ತೋರಿಬಂದೀತು. ಆದರೆ ನಿರಾಸೆಯಾಗಬೇಕಿಲ್ಲ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಹಿರಿಯರಿಗೆ ಧಾರ್ಮಿಕ ಕಾರ್ಯದಿಂದ ನೆಮ್ಮದಿ ಸಿಗಲಿದೆ.

ವೃಶ್ಚಿಕ: ಯೋಗ್ಯ ವಯಸ್ಕರಿಗೆ ಸೂಕ್ತ ಸಂಗಾತಿಯ ಹುಡುಕಾಟದಲ್ಲಿ ಮುನ್ನಡೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತಕ್ಕ ಯಶಸ್ಸು ಸಿಗಲಿದೆ. ಚಿಂತಿತ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ಧನು: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಕೊಂಚ ಸುಧಾರಣೆಯಾಗಲಿದೆ. ಮಾನಸಿಕವಾಗಿ ನೆಮ್ಮದಿ ಸಿಗಲಿದೆ. ಸಂಗಾತಿಯು ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದ್ದಾರೆ. ಹಣಕಾಸಿನ ಹರಿವಿಗೆ ತೊಂದರೆಯಿರದು.

ಮಕರ: ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ವಿನಾಕಾರಣ ತೊಂದರೆಗೆ ಸಿಲುಕಿಕೊಳ್ಳಬೇಡಿ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡುವ ಯೋಗ. ಕೋರ್ಟು ಕಚೇರಿ ಕಲಾಪಗಳನ್ನು ಮುಂದೂಡಬೇಕಾಗುತ್ತದೆ. ಚಿಂತೆ ಬೇಡ.

ಕುಂಭ: ಸಂಗಾತಿಯ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿಯಾಗಲಿದೆ. ಮಕ್ಕಳಿಂದ ಸಂತಸದ ವಾರ್ತೆ ಕೇಳಿರಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ತಾಳ್ಮೆ, ಸಂಯಮ ಅಗತ್ಯ.

ಮೀನ: ಮಹಿಳೆಯರಿಗೆ ತವರಿನ ಕಡೆಯಿಂದ ಅಚ್ಚರಿಯ ಉಡುಗೊರೆ ಸಿಕ್ಕೀತು. ಕೌಟುಂಬಿಕವಾಗಿ ಸಂತೋಷದ ದಿನಗಳಾಗಲಿವೆ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಗಮನವಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ರಾಶಿಯಲ್ಲಿ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ