Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಬೆಂಗಳೂರು , ಗುರುವಾರ, 29 ಏಪ್ರಿಲ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನೀವು ನಿರೀಕ್ಷಿಸಿದ್ದು ಒಂದು, ಆಗುವುದು ಇನ್ನೊಂದು ಎಂಬ ಪರಿಸ್ಥಿತಿಯಾಗಲಿದೆ. ಯಾರಿಗೋ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಲಿದ್ದೀರಿ. ಕೌಟುಂಬಿಕವಾಗಿ ಮಾತಿನ ಮೇಲೆ ಹಿಡಿತವಿರಲಿ. ತಾಳ್ಮೆ ಅತೀ ಅಗತ್ಯ.

ವೃಷಭ: ನೀವು ಹಿಂದೆ ಮಾಡಿದ ಕೆಲಸ, ಆಡಿದ ಮಾತುಗಳಿಗೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಗಲಿದೆ. ವೈಯಕ್ತಿಕ ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾದೀತು.

ಮಿಥುನ: ನಿರುದ್ಯೋಗಿಗಳು ಆದಾಯ ಗಳಿಕೆಗೆ ನಾನಾ ದಾರಿ ಹುಡುಕಲಿದ್ದಾರೆ. ಕಲಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ವ್ಯಾಪಾರಿಗಳಿಗೆ ನಷ್ಟದ ಭೀತಿ ಎದುರಾಗಲಿದೆ. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.

ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದ್ದು, ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾದೀತು. ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕೊಂಚ ಕಡಿಮೆಯಾಗಲಿದೆ. ತಾಳ್ಮೆಯಿರಲಿ.

ಸಿಂಹ: ಉದ್ವೇಗಕ್ಕೊಳಗಾಗಿ ನಿರ್ಧಾರ ತೆಗೆದುಕೊಳ್ಳಲು ಹೋದರೆ ಕೈಸುಟ್ಟುಕೊಳ್ಳಬೇಕಾದೀತು. ತಾಳ್ಮೆ, ಸಂಯಮವಿರಬೇಕು. ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಾಗದು. ಆದರೆ ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಬಂಡವಾಳ ಹೂಡಿಕೆಗೆ ಕೆಲವು ದಿನಗಳ ಕಾಲ ಕಾಯುವುದು ಉತ್ತಮ. ದೂರ ಸಂಚಾರ ಮುಂದೂಡಲಿದ್ದೀರಿ.

ತುಲಾ: ಆರ್ಥಿಕವಾಗಿ ಹಿನ್ನಡೆ ತೋರಿಬಂದರೂ ನಿಮ್ಮ ಅಗತ್ಯಗಳಿಗೆ ಖರ್ಚು ಮಾಡಲೇಬೇಕಾಗುತ್ತದೆ. ಉದ್ಯೋಗ ರಂಗದಲ್ಲಿ ಮುನ್ನಡೆ ತೋರಿಬರಲಿದ್ದು, ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿದರೆ ಉತ್ತಮ.

ವೃಶ್ಚಿಕ: ವಧು-ವರಾನ್ವೇಷಣೆಯಲ್ಲಿ ತೊಡಗಿದ್ದವರು ಕೆಲವು ದಿನ ಕಾಯುವುದು ಉತ್ತಮ. ಪ್ರೇಮಿಗಳಿಗೆ ವಿರಹ ವೇದನೆ ಕಂಡುಬಂದೀತು. ಪ್ರಾಮಾಣಿಕವಾಗಿದ್ದರೆ ಅದಕ್ಕೆ ಫಲ ಸಿಗಲಿದೆ. ಹಿರಿಯರ ಆರೋಗ್ಯದ ಕಾಳಜಿ ಮಾಡಿ.

ಧನು: ನಿಮ್ಮ ಯೋಚನೆಗಳನ್ನು ಬದಲಾಯಿಸಬೇಕಾದ ಕಾಲವಿದು. ಬೇರೆಯವರ ವಿಚಾರದಲ್ಲಿ ಅನಗತ್ಯವಾಗಿ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಬೇಡಿ. ಸಂಗಾತಿಯ ಮಾತಿಗೆ ಕಿವಿಗೊಡಿ. ಅನಗತ್ಯ ಚಿಂತೆ ಬೇಡ.

ಮಕರ: ನೀವು ಇಂದು ಕೈಗೊಳ್ಳುವ ನಿರ್ಧಾರ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಸಮಾಧಾನ ಸಿಗುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕುಂಭ: ಆರ್ಥಿಕ ವಿಚಾರದಲ್ಲಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಸಂಗಾತಿಯ ಕೆಲವೊಂದು ಮಾತುಗಳು ಅಪಥ್ಯವೆನಿಸೀತು. ತಾಳ್ಮೆ ಕಳೆದುಕೊಂಡರೆ ಕೌಟುಂಬಿಕವಾಗಿ ಭಿನ್ನಾಭಿಪ್ರಾಯವಾದೀತು. ಪ್ರಯಾಣದಲ್ಲಿ ಎಚ್ಚರ.

ಮೀನ: ಹಿಂದಿನ ಕಹಿ ಘಟನೆಗಳನ್ನು ಮರೆತು ಮುನ್ನಡೆಯಬೇಕಾದ ಅನಿವಾರ್ಯತೆಯಿದೆ. ಪೋಷಕರೊಂದಿಗೆ ಅನಗತ್ಯ ಭಿನ್ನಾಭಿಪ್ರಾಯ ಬೇಡ. ದೂರ ಪ್ರಯಾಣಗಳನ್ನು ಮುಂದೂಡಲಿದ್ದೀರಿ. ದೇಹಾರೋಗ್ಯದ ಬಗ್ಗೆ ಅನಗತ್ಯ ಚಿಂತೆ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಹಣೆಯ ಮೇಲೆ ಮೂಡುವ ಗೆರೆಗಳು ಈ ಅರ್ಥವನ್ನು ಸೂಚಿಸುತ್ತವೆಯಂತೆ