Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 27 ಏಪ್ರಿಲ್ 2021 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನವಶ್ಯಕವಾಗಿ ಹಣ ಪೋಲು ಮಾಡಬೇಡಿ. ಸರಿಯಾದ ಯೋಜನೆಯೊಂದಿಗೆ ಹೆಜ್ಜೆಯಿಡಿ. ಸಂಗಾತಿಯ ಮೇಲೆ ಅಸಮಾಧಾನ ತೋರಿಬರಲಿದೆ. ತಾಳ್ಮೆ, ಸಂಯಮ ಅಗತ್ಯ. ಹಿರಿಯರಿಗೆ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ವೃತ್ತಿರಂಗದಲ್ಲಿ ಎಲ್ಲವೂ ನೀವಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಚಿಂತೆ ಕಾಡಲಿದೆ. ಆದರೆ ಸಹೋದ್ಯೋಗಿಗಳು ನಿಮ್ಮ ಕಷ್ಟಕ್ಕೆ ಸ್ಪಂದಿಸಲಿದ್ದಾರೆ. ಕೃಷಿಕರಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ.

ಮಿಥುನ: ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ಸಮನಾಗಿ ಸ್ವೀಕರಿಸಲು ಸಿದ್ಧರಾಗಿ. ಸಂಗಾತಿಯು ನಿಮ್ಮ ಕಷ್ಟಗಳಿಗೆ ಹೆಗಲು ಕೊಡಲಿದ್ದಾರೆ. ಹಳೆಯ ಮಿತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಕಿರು ಸಂಚಾರ ಮಾಡುವಿರಿ.

ಕರ್ಕಟಕ: ಯೋಗ್ಯ ವಯಸ್ಕರು ವಿವಾಹ ಸಂಬಂಧವಾದ ಅಡೆತಡೆಗಳನ್ನು ನಿವಾರಿಸಲು ಕುಲದೇವರ ಮೊರೆ ಹೋಗಲಿದ್ದಾರೆ. ನೂತನ ದಂಪತಿಗಳು ಸುಂದರ ಕ್ಷಣ ಕಳೆಯಲಿದ್ದಾರೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದು ಮುನ್ನಡೆಯಬೇಕು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳನ್ನು ಕೆಲವು ದಿನ ಮುಂದೂಡುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಶುಭ ಮಂಗಲ ಕಾರ್ಯಗಳನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಲಿದ್ದೀರಿ. ಹೊಸ ಜನರ ಭೇಟಿಯಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ಸಾಮಾನ್ಯ. ಎದುರಿಸಿಕೊಂಡು ಹೋಗಲಿದ್ದೀರಿ.

ತುಲಾ: ರಾಜಕೀಯ ವ್ಯಕ್ತಿಗಳಿಗೆ ಮಹಿಳೆಯರಿಂದ ಅಪವಾದದ ಭೀತಿ ಎದುರಾಗಲಿದೆ. ನೆರೆಹೊರೆಯವರೊಂದಿಗೆ ನೀರಿಗಾಗಿ ಕಲಹ ನಡೆದೀತು. ತಾಳ್ಮೆಯಿಂದ ನಡೆದುಕೊಳ್ಳಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿ ಬರಲಿದೆ.

ವೃಶ್ಚಿಕ: ಸಾಂಸಾರಿಕವಾಗಿ ನಿಮ್ಮ ಸುಖ ಸಂಸಾರಕ್ಕೆ ಹುಳಿ ಹಿಂಡುವವರಿಂದ ದೂರವಿರುವುದೇ ಉತ್ತಮ. ಕಾರ್ಯಕ್ಷೇತ್ರದಲ್ಲಿ ಕಾರ್ಯದೊತ್ತಡ ಕಂಡುಬಂದೀತು. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.  ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ಧನು: ಅನಗತ್ಯ ವಿಚಾರಗಳ ಬಗ್ಗೆ ಚಿಂತೆ ಮಾಡುತ್ತಾ ದೇಹಾರೋಗ್ಯ ಕೆಡಿಸಿಕೊಳ್ಳಬೇಡಿ. ದೈವಾನುಕೂಲದಿಂದ ಅಂದುಕೊಂಡ ಕೆಲಸಗಳು ಪೂರ್ತಿಯಾಗಲಿವೆ. ಮಕ್ಕಳಿಂದ ಸಮಾಧಾನ, ನೆಮ್ಮದಿ ಪ್ರಾಪ್ತಿಯಾದೀತು.

ಮಕರ: ಸಂತಾನಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಮಾನಸಿಕವಾಗಿ ಆತ್ಮವಿಶ್ವಾಸ ತಂದುಕೊಳ್ಳಿ. ಕಳೆದು ಹೋದ ಸಂಬಂಧದ ಬಗ್ಗೆ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿ.

ಕುಂಭ: ಕಷ್ಟ-ಸುಖ ಎರಡನ್ನೂ ಎದುರಿಸುವ ಮನಸ್ಥಿತಿ ರೂಪಿಸಿಕೊಳ್ಳಿ. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾದೀತು. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಯೋಗ ಸದ್ಯದಲ್ಲೇ ನನಸಾಗಲಿದೆ.

ಮೀನ: ನಿಮ್ಮ ಹಿತ ಬಯಸುವ ವ್ಯಕ್ತಿಗಳನ್ನು ಗುರುತಿಸಿ. ವ್ಯವಹಾರದಲ್ಲಿ ಮೂರನೆಯವರ ಪ್ರವೇಶಕ್ಕೆ ಅವಕಾಶ ಕೊಡದಿರಿ. ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ನಿಯಂತ್ರಣವಿರಲಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಹೀಗೆ ಮಾಡಿದರೆ ಏನರ್ಥ ಗೊತ್ತಾ?