Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 26 ಏಪ್ರಿಲ್ 2021 (08:49 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಉದಾಸೀನತೆಯೇ ನಿಮ್ಮ ಶತ್ರುವಾಗಲಿದೆ. ಕೌಟುಂಬಿಕವಾಗಿ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ತಾಳ್ಮೆ, ಸಂಯಮವಿರಲಿ.

ವೃಷಭ: ಎಲ್ಲವೂ ಇದ್ದರೂ ಏನೋ ಕಳೆದುಕೊಂಡ ನಿರಾಶಾಭಾವ ಮನಸ್ಸಿಗೆ ಕಾಡಲಿದೆ. ವೃತ್ತಿರಂಗದಲ್ಲಿ ಬೇರೆಯವರ ಕೆಲಸದಲ್ಲಿ ಮೂಗು ತೂರಿಸಲು ಹೋಗಬೇಡಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ವೆಚ್ಚವಾಗಲಿದೆ.

ಮಿಥುನ: ದೈಹಿಕವಾಗಿ ಶ್ರಮದ ಕೆಲಸದಿಂದಾಗಿ ದೇಹಾಯಾಸವಾದೀತು. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ. ಚಿಂತೆ ಬೇಡ.

ಕರ್ಕಟಕ: ಹಣಕಾಸಿನ ಹರಿವು ಎಷ್ಟೇ ಇದ್ದರೂ ಅಷ್ಟೇ ಖರ್ಚು ವೆಚ್ಚಗಳೂ ಕಂಡುಬರಲಿದೆ. ವ್ಯವಹಾರದಲ್ಲಿ ವಿಘ್ನಗಳು ತೋರಿಬಂದರೂ ಅಂತಿಮ ಯಶಸ್ಸು ನಿಮ್ಮದಾಗಲಿದೆ. ಮನಸ್ಸಿನ ಮಾತುಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವಿರಿ.

ಸಿಂಹ: ದಾಂಪತ್ಯ ಜೀವನದಲ್ಲಿ ಸಂಯಮವಿಲ್ಲದೇ ಹೋದಲ್ಲಿ ಭಿನ್ನಾಭಿಪ್ರಾಯಗಳು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕೂಡಿಬರಲಿದೆ. ವ್ಯಾಪಾರಿಗಳಿಗೆ ಬುದ್ಧಿವಂತಿಕೆಯಿಂದ ವ್ಯವಹರಿಸುವುದು ಮುಖ್ಯ.

ಕನ್ಯಾ: ಹೊಸ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದುವರಿಯುವುದು ಮುಖ್ಯ. ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆಕೊಡಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗಲಿದ್ದೀರಿ.

ತುಲಾ: ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲಿದ್ದೀರಿ. ವಾಹನ ಸವಾರರಿಗೆ ಅಪಘಾತದ ಭಯವಿದ್ದು, ಚಾಲನೆಯಲ್ಲಿ ಎಚ್ಚರಿಕೆಯಿರಲಿ. ದೂರ ಸಂಚಾರವನ್ನು ಕೆಲವುದಿನಗಳ ಮಟ್ಟಿಗೆ ಮುಂದೂಡಲಿದ್ದೀರಿ.

ವೃಶ್ಚಿಕ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಕೃಷಿಕರಿಗೆ ಸೂಕ್ತ ಬೆಲೆ ಸಿಗದೇ ನಿರಾಸೆಯಾದೀತು.

ಧನು: ನಿರುದ್ಯೋಗಿಗಳು ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಬೇಡದ ಮಾತುಗಳು ಮನ, ಮನೆ ಕೆಡಿಸೀತು. ತಾಳ್ಮೆ, ಸಂಯಮ ಅಗತ್ಯ. ದೇವರ ಪ್ರಾರ್ಥನೆ ಮಾಡಿ.

ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾದೀತು. ವೈಯಕ್ತಿಕ ಕಷ್ಟಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಕೋರ್ಟು ಕಚೇರಿ ಕೆಲಸಗಳು ನಿಧಾನಗತಿಯಲ್ಲಿ ನಡೆಯಲಿವೆ. ತಾಳ್ಮೆ ಬೇಕು.

ಕುಂಭ: ಕುಟುಂಬದಲ್ಲಿ ಬರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಟ್ರಬಲ್ ಶೂಟರ್ ಆಗಲಿದ್ದೀರಿ. ಮಹಿಳೆಯರಿಗೆ ಮನೆ ಕೆಲಸದಿಂದ ಕೊಂಚ ಬಿಡುವು ಸಿಗಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಮೀನ: ವೃತ್ತಿರಂಗದಲ್ಲಿ ನಿಮ್ಮನ್ನು ಉತ್ತೇಜಿಸುವ ಮಾತುಗಳು ಕೇಳಿಬಂದೀತು. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಹಿತಶತ್ರುಗಳನ್ನು ಉದಾಸೀನ ಮಾಡುವುದೇ ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಣಕ್ಯ ನೀತಿಯ ಪ್ರಕಾರ ಇಂತಹ ವ್ಯಕ್ತಿಗಳಿಗೆ ಯಾವತ್ತೂ ಹಣದ ಸಮಸ್ಯೆ ಕಾಡುವುದಿಲ್ಲವಂತೆ