Select Your Language

Notifications

webdunia
webdunia
webdunia
webdunia

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಹೀಗೆ ಮಾಡಿದರೆ ಏನರ್ಥ ಗೊತ್ತಾ?

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದು ಹೀಗೆ ಮಾಡಿದರೆ ಏನರ್ಥ ಗೊತ್ತಾ?
ಬೆಂಗಳೂರು , ಮಂಗಳವಾರ, 27 ಏಪ್ರಿಲ್ 2021 (07:04 IST)
ಬೆಂಗಳೂರು : ಕನಸಿನಲ್ಲಿ ಆಗಾಗ ಸತ್ತ ಸಂಬಂಧಿಕರು ಬರುತ್ತಾರೆ. ನಾವು ಅವರ  ಬಗ್ಗೆ ಯೋಚಿಸುವುದರಿಂದ ಹೀಗೆ ಆಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಸಪ್ನ ಶಾಸ್ತ್ರದ ಪ್ರಕಾರ ಸತ್ತವರು ಕನಸಿನಲ್ಲಿ ಬರಲು ಹಲವು ಕಾರಣಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳೊಣ.

-ನಿಮ್ಮವರು ಅನಾರೋಗ್ಯದಿಂದ ಸತ್ತಿದ್ದು ನಿಮ್ಮ ಕನಸಿನಲ್ಲಿ ಅವರು ಆರೋಗ್ಯವಂತರಾಗಿ ಕಂಡುಬಂದರೆ ಅವರು ಮರುಜನ್ಮ ಪಡೆದು ಸಂತೋಷವಾಗಿದ್ದಾರೆ ಎಂದರ್ಥ.

- ಸತ್ತ ವ್ಯಕ್ತಿಯು ಕನಸಿನಲ್ಲಿ ಕೋಪಗೊಂಡಂತೆ ಕಂಡುಬಂದರೆ ಅವರ ಆಸೆಯನ್ನು ನಿಮ್ಮ ಮೂಲಕ ಈಡೇರಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದರ್ಥ.

-ಸತ್ತ ವ್ಯಕ್ತಿಯು ಕನಸಿನಲ್ಲಿ ಸಂತೋಷವಾಗಿದ್ದರೆ ಹಾಗೂ ಅಳುತ್ತಿದ್ದರೆ ಅದರಿಂದ ಶುಭ ಫಲಗಳು ಸಿಗುತ್ತವೆ ಎಂದರ್ಥ.

-ಸತ್ತ ವ್ಯಕ್ತಿ ಕನಸಿನಲ್ಲಿ ಪದೇ ಪದೇ ಕಂಡುಬಂದರೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದರ್ಥ.

-ಸತ್ತ ವ್ಯಕ್ತಿಗಳು ಕನಸಿನಲ್ಲಿ ಶಾಂತರಾಗಿದ್ದರೆ  ನಿಮ್ಮದಾಗುವ ತಪ್ಪನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

-ಸತ್ತ ವ್ಯಕ್ತಿಗಳು ಕನಸಿನಲ್ಲಿ ಆಶೀರ್ವಾದ ಮಾಡುತ್ತಿದ್ದರೆ ನೀವು ಜೀವನದಲ್ಲಿ ಯಶಸ್ಸು ಸಾಧಿಸುತ್ತೀರಿ ಎಂದರ್ಥ.

-ಸತ್ತ ವ್ಯಕ್ತಿಗಳು ಆಕಾಶದಲ್ಲಿ ಕಾಣಸಿಕೊಂಡರೆ ಅವರಿಗೆ ಮೋಕ್ಷವಾಗಿದೆ ಎಂದರ್ಥ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ