Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 23 ನವೆಂಬರ್ 2020 (08:43 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನೀವು ಏನೇ ಮಾಡಿದ್ದರೂ ಆಗಬೇಕಾಗಿರುವುದು ಆಗಿಯೇ ತೀರುತ್ತದೆ. ಹಾಗಾಗಿ ಅನಗತ್ಯ ಚಿಂತೆ ಬೇಡ. ಕೌಟುಂಬಿಕವಾಗಿ ಸಂಗಾತಿಯ ಸಲಹೆಯನ್ನು ಪಾಲಿಸಬೇಕಾಗುತ್ತದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ವೃಷಭ: ಮನಸ್ಸು ಹೇಳಿದಂತೆ ಕೇಳಿದರೆ ನಿಮಗೆ ಉತ್ತಮ. ಮಹಿಳೆಯರಿಗೆ ಪ್ರೀತಿ ಪಾತ್ರರಿಂದ ಅನಿರೀಕ್ಷಿತ ಉಡುಗೊರೆಗಳು ಸಿಗಲಿವೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕುಟುಂಬದ ಹಿರಿಯರ ಜತೆ ಚರ್ಚೆ ನಡೆಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟುಮಾಡುವವರು ಇದ್ದೇ ಇರುತ್ತಾರೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ತಾಳ್ಮೆ ಮೈಗೂಡಿಸಿಕೊಳ್ಳಬೇಡಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ತಾಳ್ಮೆಯಿರಲಿ.

ಕರ್ಕಟಕ: ಬಯಸಿದ ವಸ್ತುಗಳು ತಾನಾಗಿಯೇ ಕೈಗೆ ಬಂದು ಸೇರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗ ಕೂಡಿಬರಲಿದೆ. ಮಂಗಲ ಕಾರ್ಯಗಳು ನೆರವೇರಲಿದೆ.

ಸಿಂಹ: ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕುವುದು ಉತ್ತಮ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ಸೂಕ್ತ ಸಂಬಂಧಗಳು ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಕನ್ಯಾ: ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ತಕ್ಕ ಫಲ ದೊರೆಯುವುದು. ಚಿಂತಿತ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಅಗತ್ಯ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ಪ್ರೇಮಿಗಳಿಗೆ ಮನೆಯವರ ವಿರೋಧ ವ್ಯಕ್ತವಾದೀತು. ತಾಳ್ಮೆಯಿರಲಿ.

ತುಲಾ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ನೀವು ಅಂದುಕೊಂಡಿದ್ದ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರುವುದು. ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ವೃಶ್ಚಿಕ: ಅಂದುಕೊಂಡ ಕಾರ್ಯಗಳನ್ನು ನೆರವೇರಿಸಲು ಕೊಂಚ ಕಷ್ಟವಾದರೂ ಅಂತಿಮ ಜಯ ನಿಮ್ಮದಾಗುವುದು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.

ಧನು: ಬಹುದಿನಗಳ ನಿಮ್ಮ ವಾಹನ ಖರೀದಿ ಕನಸು ನನಸು ಮಾಡಿಕೊಳ್ಳಲಿದ್ದೀರಿ. ಆದರೆ ದೇಹಾರೋಗ್ಯದಲ್ಲಿ ಏರುಪೇರಾಗುವುದರಿಂದ ಚಿಂತೆಯಾದೀತು. ಸಾ<ಸಾರಿಕವಾಗಿ ಸಾಮರಸ್ಯಕ್ಕೆ ಕೊರತೆಯಿರದು. ಚಿಂತೆ ಬೇಡ.

ಮಕರ: ಮಾನಸಿಕವಾಗಿ ಋಣಾತ್ಮಕ ಆಲೋಚನೆಗಳು ಕಂಡುಬಂದೀತು. ಹಿರಿಯರಿಗೆ ದಾನ ಧರ್ಮಾದಿ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ಕುಂಭ: ಕೈ ಹಿಡಿದ ಕೆಲಸಗಳನ್ನು ಮುಗಿಸದೇ ಬಿಡುವವರಲ್ಲ. ಆದರೆ ಇಂದು ಯಾಕೋ ಒಂದು ರೀತಿಯ ನಿರುತ್ಸಾಹ ಕಂಡುಬಂದೀತು. ಮನಸ್ಸಿಗೆ ಹಿಡಿಸಿದ ವ್ಯಕ್ತಿಗಳ ಭೇಟಿಗೆ ಹಾತೊರೆಯುವಿರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು.

ಮೀನ: ನಿಮ್ಮ ಒಳ್ಳೆಯ ಆಲೋಚನೆಗಳೇ ನಿಮಗೆ ಶ್ರೀರಕ್ಷೆಯಾದೀತು. ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನೆಗೆ ಅನಿರೀಕ್ಷಿತ ಅತಿಥಿಯ ಆಗಮನವಾದೀತು. ಇಷ್ಟ ಭೋಜನ ಪ್ರಾಪ್ತಿಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನ ಪಂಚಾಂಗ ಹೀಗಿದೆ!