Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಬೆಂಗಳೂರು , ಬುಧವಾರ, 11 ನವೆಂಬರ್ 2020 (09:21 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೈವಾನುಗ್ರಹದಿಂದ ನೀವು ಅಂದುಕೊಂಡ ಕೆಲಸಗಳು ನೆರವೇರಲಿದೆ. ಕಾರ್ಯರಂಗದಲ್ಲಿ ಉತ್ಸಾಹಕ್ಕೆ ಭಂಗವಾಗುವಂತಹ ಘಟನೆಗಳು ನಡೆದೀತು. ವಾಹನ ಖರೀದಿಗೆ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ವೃಷಭ: ಅನಿರೀಕ್ಷಿತವಾಗಿ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಯಾವುದೇ ವಿಚಾರದಲ್ಲೂ ದೂರಾಲೋಚನೆಯಿಂದ ನಿರ್ಧಾರ ತೆಗೆದುಕೊಳ್ಳಿ. ಕಿರು ಸಂಚಾರ ಮಾಡಬೇಕಾಗಿ ಬರುತ್ತದೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಲಭ್ಯವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕರ್ಕಟಕ: ರಾಜಕೀಯ ವರ್ಗದವರಿಗೆ ತಮ್ಮ ಚಾಣಕ್ಷ್ಯತನ ಪ್ರದರ್ಶಿಸಬೇಕಾಗುತ್ತದೆ. ಅತಿಯಾಗಿ ಚಿಂತೆ ಮಾಡುವುದರಿಂದ ಮಾನಸಿಕ ಆರೋಗ್ಯ ಹಾಳಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ.

ಸಿಂಹ: ಮನಸ್ಸಿನ ಆತಂಕ ಹಂತ ಹಂತವಾಗಿ ದೂರವಾಗಲಿದೆ. ಆರ್ಥಿಕವಾಗಿ ಚೇತರಿಕೆಯ ವಾತಾವರಣ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ತೋರಿಬರಲಿವೆ. ಇಷ್ಟದೇವರ ಪ್ರಾರ್ಥನೆ ಮಾಡಿ.

ಕನ್ಯಾ: ರಾಜಕೀಯ ವರ್ಗದವರಿಗೆ ಆತಂಕದ ಕ್ಷಣಗಳು ಎದುರಾಗಲಿವೆ. ಕೌಟುಂಬಿಕ ವಿಚಾರದಲ್ಲಿ ಹಲವು ಗೊಂದಲಗಳು ಕಂಡುಬಂದೀತು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.

ತುಲಾ: ಕೆಲಸ ಕಾರ್ಯದ ಜವಾಬ್ಧಾರಿಗಳು ಹೆಚ್ಚಾಗಲಿದ್ದು, ದೇಹಾಯಾಸವಾದೀತು. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಸಂಚಾರದಲ್ಲಿ ತೊಂದರೆಗಳು ಎದುರಾದೀತು, ಎಚ್ಚರಿಕೆ ಅಗತ್ಯ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ.

ವೃಶ್ಚಿಕ: ಸರಕಾರಿ ಅಧಿಕಾರಿಗಳಿಗೆ ಕೆಲಸದೊತ್ತಡ ಕಂಡುಬರಲಿದೆ. ನಿಮ್ಮ ಅತಿಯಾದ ಆತ್ಮವಿಶ್ವಾಸವೇ ಕೆಲವೊಮ್ಮೆ ನಿಮಗೆ ಮುಳುವಾದೀತು. ಉದ್ಯೋಗದಲ್ಲಿ ಅಭಿವೃದ್ಧಿದಾಯಕ ವಾತಾವರಣವಿದ್ದರೂ ಹಿತವಂಚಕರ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ.

ಧನು: ರಾಜಕೀಯ ಕ್ಷೇತ್ರದಲ್ಲಿರುವವರು ಜನಾನುರಾಗಿಗಳಾಗಲಿದ್ದಾರೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಾದೀತು. ವ್ಯಾಪಾರಿ ವರ್ಗದವರಿಗೆ ಆರ್ಥಿಕ ಲಾಭವಾಗಲಿದೆ.

ಮಕರ: ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಪ್ರೀತಿ ಪಾತ್ರರ ಆಗಮನ ಮನಸ್ಸಿಗೆ ಸಂತಸ ನೀಡಲಿದೆ.

ಕುಂಭ: ನಿಮ್ಮ ಕೆಲಸಗಳಿಗೆ ಬೇರೆಯವರ ಮೇಲೆ ಅತಿಯಾಗಿ ಅವಲಂಬನೆ ಬೇಡ. ಸರಕಾರಿ ಕೆಲಸಗಳಿಗಾಗಿ ಓಡಾಟಟ ನಡೆಸಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆಯಿಂದಿರುವುದು ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಮೀನ: ವೃತ್ತಿರಂಗದಲ್ಲಿ ಕೀರ್ತಿ ಸಂಪಾದಿಸುವ ಯೋಗ ಕೂಡಿಬರುವುದು. ಮಹಿಳೆಯರಿಗೆ ಚಿ‍ನ್ನಾಭರಣ ಖರೀದಿ ಯೋಗ ಬರಲಿದೆ. ವಿವೇಚನೆಯ ಕೊರತೆಯಿಂದ ನಿರ್ಧಾರ ತೆಗೆದುಕೊಳ್ಳುವಾಗ ಎಡವಲಿದ್ದೀರಿ. ಹಿರಿಯರ ಸಲಹೆಗಳನ್ನು ಪಾಲಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನ ಪಂಚಾಂಗ ಹೀಗಿದೆ!